ಆಂಗ್ಲರ ಗೆಲವಿಗೆ 197 ರನ್ ಗುರಿ
ಚಿತ್ತಗಾಂಗ್: ನಾಯಕ ಎಬಿ ಡಿವಿಲಿಯರ್ಸ್ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡವು ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಇಂಗ್ಲೆಂಡ್ ತಂಡಕ್ಕೆ 197 ರನ್ಗಳ ಗುರಿ ನೀಡಿದೆ.
ಶನಿವಾರ ಜಹುರ್ ಅಹ್ಮದ್ ಚೌಧರಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ 196 ರನ್ ಕಲೆಹಾಕಿತು. ಟಾಸ್ ಗೆದ್ದ ಇಂಗ್ಲೆಂಡ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. 20 ಓವರ್ಗಳಲ್ಲಿ 5 ವಿಕೆಟ್ಗೆ 196 ರನ್ ದಾಖಲಿಸಿತು.
ಈ ಪಂದ್ಯದಲ್ಲಿ ಸೋಲನುಭವಿಸುವ ತಂಡಕ್ಕೆ ಸೆಮಿಫೈನಲ್ ಹಂತದ ಬಾಗಿಲು ಸಂಪೂರ್ಣವಾಗಿ ಮುಚ್ಚಲಾಗುವುದು. ಹಾಗಾಗಿ ಉಭಯ ತಂಡಗಳು ಗೆಲವು ದಾಖಲಿಸಲು ಪ್ರಬಲ ಕಾದಾಟ ನಡೆಸಿವೆ.
ಉತ್ತಮ ಆರಂಭ: ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಆರಂಭಿಕರಿಂದ ಉತ್ತಮ ಆರಂಭ ದೊರೆಯಿತು.
ಹಶೀಂ ಆಮ್ಲಾ(56) ಹಾಗೂ ಖಿಂಟಾನ್ ಡಿ ಕಾಕ್ (29) ಮೊದಲ ವಿಕೆಟ್ಗೆ 90 ರನ್ ಪೇರಿಸುವ ಮೂಲಕ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟರು. ಈ ವೇಳೆ ಆಮ್ಲಾ, ಬ್ರಾಡ್ ಎಸೆತದಲ್ಲಿ ಅಲೆಕ್ಸ್ಗೆ ಕ್ಯಾಚ್ ನೀಡುವ ಮೂಲಕ ಪೆವಿಲಿಯನ್ ಸೇರಿಕೊಂಡರು.
ಆಮ್ಲಾ ಔಟಾದ ನಂತರ ದಕ್ಷಿಣ ಆಫ್ರಿಕಾ ತಂಡದ ರನ್ ವೇಗ ಕುಂಠಿತವಾಯಿತು. ಕಾಕ್, ಆಮ್ಲಾ ಹಿಂದೆಯೇ ಪೆವಿಲಿಯನ್ ಸೇರಿದರೆ, ಡುಮಿನಿ(5) ರನೌಟ್ ಆಗಿದ್ದು, ತಂಡಕ್ಕೆ ಗಾಯದ ಮೇಲೆ ಬರೆ ಎಳೆದಂತಾಯಿತು. ಮಿಲ್ಲರ್ (19) ಹಾಗೂ ಮಾರ್ಕೆಲ್(3) ಅಂತಿಮ ಗಳಿಗೆಯಲ್ಲಿ ಔಟಾದರು.
ಅಂತಿಮವಾಗಿ ಡಿವಿಲಿಯರ್ಸ್ (ಅಜೇಯ 69 ರನ್, 28 ಎಸೆತ, 9 ಬೌಂಡರಿ, 3 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ಮಾಡಿದರು. ಇಂಗ್ಲೆಂಡ್ ಪರ ಬ್ರಾಡ್, ಮೊಯೀನ್, ಟ್ರೆಡ್ವೆಲ್ ಹಾಗೂ ಬ್ರೆಸ್ನನ್ತಲಾ 1 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್
ದಕ್ಷಿಣ ಆಫ್ರಿಕಾ 20 ಓವರ್ಗಳಲ್ಲಿ 5 ವಿಕೆಟ್ಗೆ 196
(ಹಶೀಂ ಆಮ್ಲಾ 56, ಡಿವಿಲಿಯರ್ಸ್ ಅಜೇಯ 69, ಖಿಂಟಾನ್ 29 ಬ್ರೆಸ್ನನ್ 28ಕ್ಕೆ1, ಟ್ರೆಡ್ವೆಲ್ 25ಕ್ಕೆ1)