'ನಮ್ಮ ಪ್ರದರ್ಶನ ನಿರಾಸೆ ತಂದಿದೆ'
ಮೀರ್ಪುರ: ಸತತ ಸೋಲಿನ ಕಹಿ ಸವಿದಿರುವ ಆಸ್ಟ್ರೇಲಿಯಾ ತಂಡದ ಮುಖ್ಯಕೋಚ್ ಡಾರೆನ್ ಲೇಮನ್, ತಮ್ಮ ತಂಡದ ಪ್ರದರ್ಶನ ನಿರಾಸೆ ತಂದಿದೆ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.
ಇದು ಬಹಳ ಬೇಸರದ ಸಂಗತಿಯಾಗಿದೆ. ಈ ಪಂದ್ಯಾವಳಿಗೂ ಮುನ್ನ ನಾವು ಎಲ್ಲಾ ಮಾದರಿಯ ಕ್ರಿಕೆಟ್ನಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿದ್ದೆವು. ಕಳೆದ ಆರು ತಿಂಗಳ ಅವಧಿಯಲ್ಲಿ ತಂಡದ ಪ್ರದರ್ಶನ ಅತ್ಯುತ್ತಮವಾಗಿತ್ತು.
ಆದರೆ ಈ ಪಂದ್ಯಾವಳಿಯಲ್ಲಿನ ಪ್ರದರ್ಶನ ತಂಡ ಕಲಿಯಬೇಕಾದ ಅನಿವಾರ್ಯತೆಯನ್ನು ತೋರಿಸಿದೆ. ಈ ಪರಿಸ್ಥಿತಿಯನ್ನು ಎದುರಿಸುವುದು ತಂಡದ ಕೋಚ್ ಹಾಗೂ ನಾಯಕನಿಗೆ ಕಠಿಣವಾಗಲಿದೆ ಎಂದು ಲೇಮನ್ ಅಭಿಪ್ರಾಯಪಟ್ಟಿದ್ದಾರೆ.