ಪಾಕಿಸ್ತಾನಕ್ಕೆ ಗೆಲವು ಅನಿವಾರ್ಯ
ಮೀರ್ಪುರ: ಆಸ್ಟ್ರೇಲಿಯಾ ವಿರುದ್ಧ ರೋಚಕ ಗೆಲವು ದಾಖಲಿಸಿ ಆತ್ಮ ವಿಶ್ವಾಸವನ್ನು ಹೆಚ್ಚಿಸಿಕೊಂಡಿರುವ ಪಾಕಿಸ್ತಾನ ತಂಡ ಟಿ20 ವಿಶ್ವಕಪ್ನ ಸೆಮಿಫೈನಲ್ಗೆ ಪ್ರವೇಶಿಸಲು ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಗೆಲ್ಲೇಬೇಕಾದ ಒತ್ತಡದಲ್ಲಿದೆ.
ಭಾನುವಾರ ನಡೆಯಲಿರುವ ಇಲ್ಲಿನ ಶೇರೇ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯ ಪಾಕ್ ಹಾಗೂ ಬಾಂಗ್ಲಾದೇಶ ತಂಡಗಳಿಗೆ ಮಹತ್ವದ್ದಾಗಿದೆ.
ಮೊದಲ ಪಂದ್ಯದಲ್ಲಿ ಭಾರತ ವಿರುದ್ಧ ಹೀನಾಯ ಸೋಲನುಭವಿಸಿದ್ದ ಪಾಕಿಸ್ತಾನ, ತನ್ನ ಎರಡನೇ ಪಂದ್ಯದಲ್ಲಿ ಪ್ರಬಲ ಆಸ್ಟ್ರೇಲಿಯಾ ವಿರುದ್ಧ ಅದ್ಭುತ ರೀತಿಯಲ್ಲಿ ಗೆಲವು ದಾಖಲಿಸಿತು. ಸೂಪರ್ 10 ಹಂತದಲ್ಲಿ ಇನ್ನು ಎರಡು ಪಂದ್ಯಗಳನ್ನಾಡಬೇಕಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನಕ್ಕೆ ಈ ಪಂದ್ಯದ ಗೆಲವು ಪಾಕ್ನ ಸೆಮೀಸ್ ಹಣೆಬರಹವನ್ನು ನಿರ್ಧರಿಸಲಿದೆ. ಹಾಗಾಗಿ ಈ ಪಂದ್ಯ ಪಾಕಿಸ್ತಾನದ ಪಾಲಿಗೆ ಪ್ರಮುಖವಾಗಿದೆ.
ಇನ್ನು ಆತಿಥೇಯ ಬಾಂಗ್ಲಾದೇಶ ತಂಡಕ್ಕೂ ಸಹ ಈ ಪಂದ್ಯ ಮಹತ್ವದ್ದಾಗಿದೆ. ಸೂಪರ್ 10 ಹಂತದಲ್ಲಿ ಆಡಿರುವ 2 ಪಂದ್ಯಗಳಲ್ಲೂ ಸೋಲನುಭವಿಸಿರುವ ಬಾಂಗ್ಲಾ ಮೊದಲ ಗೆಲವು ದಾಖಲಿಸಲು ಎದುರು ನೋಡುತ್ತಿದೆ. ಅಲ್ಲದೆ ತವರಿನ ಅಂಗಣದಲ್ಲೇ ಪಂದ್ಯಾವಳಿ ನಡೆಯುತ್ತಿರುವುದರಿಂದ ಬಾಂಗ್ಲಾ ಉತ್ತಮ ಪ್ರದರ್ಶನ ನೀಡಬೇಕಾಗಿದೆ. ಹಾಗಾಗಿ ಈ ಪಂದ್ಯದ ಗೆಲವು ಬಾಂಗ್ಲಾಗೆ ಮಹತ್ವವಾಗಿ ಪರಿಣಮಿಸಿದೆ.
ಕಳೆದ ಪಂದ್ಯದಲ್ಲಿ ಪಾಕ್ ತಂಡಕ್ಕೆ ಉಮರ್ ಅಕ್ಮಲ್ ಆಸರೆಯಾಗಿದ್ದರು, ಇವರ ಜತೆಗೆ ಅಹ್ಮದ್ ಶೆಹಜಾದ್, ಕಮ್ರಾನ್ ಅಕ್ಮಲ್, ಮೊಹಮದ್ ಹಫೀಜ್ ಹಾಗೂ ಶಾಹಿದ್ ಅಫ್ರಿದಿ ಬ್ಯಾಟಿಂಗ್ ಆಧಾರವಾಗಿದ್ದಾರೆ. ಇನ್ನು ಉಮರ್ ಗುಲ್, ಜುನೈದ್ ಖಾನ್, ಬಿಲಾವಲ್ ಬಟ್ಟಿ, ಸೈಯದ್ ಅಜ್ಮಲ್ ಬೌಲಿಂಗ್ ಅಸ್ತ್ರವಾಗಿದ್ದಾರೆ.
ಇಂದಿನ ಪಂದ್ಯಗಳು
ಪಾಕಿಸ್ತಾನ
ಮತ್ತು
ಬಾಂಗ್ಲಾದೇಶ
ಮಧ್ಯಾಹ್ನ 3ಕ್ಕೆ
ಭಾರತ
ಮತ್ತು
ಆಸ್ಟ್ರೇಲಿಯಾ
ಸಂಜೆ 7ಕ್ಕೆ
ಅಂಕಪಟ್ಟಿ
ಗುಂಪು-1
ತಂಡ ಪಂದ್ಯ ಜಯ ಸೋಲು ಅಂಕ ರನ್ಸರಾಸರಿ
ಶ್ರೀಲಂಕಾ 3 2 1 4 2.199
ನ್ಯೂಜಿಲೆಂಡ್ 3 2 1 4 0.362
ದಕ್ಷಿಣ ಆಫ್ರಿಕಾ 3 2 1 4 0.050
ಇಂಗ್ಲೆಂಡ್ 2 1 1 2 -0.067
ನೆದರ್ಲ್ಯಾಂಡ್ಸ್ 2 0 2 0 -2.950
ಗುಂಪು-2
ತಂಡ ಪಂದ್ಯ ಜಯ ಸೋಲು ಅಂಕ ರನ್ಸರಾಸರಿ
ಭಾರತ 3 3 0 6 0.477
ವೆಸ್ಟ್ ಇಂಡೀಸ್ 3 2 1 4 1.223
ಪಾಕಿಸ್ತಾನ 2 1 1 2 0.077
ಆಸ್ಟ್ರೇಲಿಯಾ 2 0 2 0 -0.503
ಬಾಂಗ್ಲಾದೇಶ 2 0 2 0 -2.204