ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಪ್ರಶಸ್ತಿ ಹೊಸ್ತಿಲಲ್ಲಿ ಸೌರಭ್

Rashmi Kasaragodu
Updated On : 30 Mar 2014, 1:34 am

ಜೋಹಾರ್ ಬಹ್ರು: ಭಾರತದ ಸೌರಭ್ ವರ್ಮಾ ಅವರು ಮಲೇಶಿಯಾ ಗ್ರ್ಯಾಂಡ್ ಪ್ರಿಕ್ಸ್ ಗೋಲ್ಡ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ್ದಾರೆ.
ಸೆಮಿಫೈನಲ್ ಪಂದ್ಯದಲ್ಲಿ ಗಾಯಾಳು ಮಲೇಶಿಯಾದ ಚೋಂಗ್ವೀ ಫೆಂಗ್ ಅವರು ಸ್ಪರ್ಧೆಯಿಂದ ಹಿಂದೆ ಸರಿದ ಕಾರಣ ವಾಕ್ ಓವರ್ ಪಡೆದ ಸೌರಭ್ ಫೈನಲ್ ಪ್ರವೇಶಿಸಿದರು. ಎರಡನೇ ಶ್ರೇಯಾಂಕ ಪಡೆದಿದ್ದ ವೀ ಫೆಂಗ್ ಅವರು, ಸೆಮಿಫೈನಲ್ ಪಂದ್ಯಕ್ಕೆ ಅಭ್ಯಾಸ ನಡೆಸುತ್ತಿರುವಾಗ ಬೆನ್ನು ನೋವಿಗೆ ತುತ್ತಾಗಿದ್ದರು. ಹೀಗಾಗಿ ಪಂದ್ಯದಲ್ಲಿ ಭಾಗವಹಿಸದೇ ಅವರು ಹಿಂದೆ ಸರಿದದ್ದು, 8ನೇ ಶ್ರೇಯಾಂಕ ಪಡೆದ ಸೌರಭ್ ವರ್ಮಾ ನೇರವಾಗಿ ಫೈನಲ್ ಪ್ರವೇಶಿಸಲು ಅನುಕೂಲವಾಗಿ ಪರಿಣಮಿಸಿತು.
ವಿಶ್ವದ ನಂಬರ್ 30ನೇ ಆಟಗಾರ ಸೌರಭ್, ಇತ್ತೀಚೆಗಷ್ಟೇ ಮೂರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಟಾಟಾ ಓಪನ್, ಆಸ್ಟ್ರೇಲಿಯಾ ಅಂತಾರಾಷ್ಟ್ರೀಯ ಚಾಲೆಂಜ್ ಹಾಗೂ ಇರಾನ್ ಫಾಜ್ರ ಅಂತಾರಾಷ್ಟ್ರೀಯ ಚಾಲೆಂಜ್.
ಸೌರಭ್ ಪಂದ್ಯಾವಳಿಯಲ್ಲಿ ಉಳಿದಿರುವ ಭಾರತದ ಏಕೈಕ ಆಟಗಾರ ಎನಿಸಿದ್ದಾರೆ. ಸೌರಭ್ ಅವರು ಈಗ ಫೈನಲ್ ಪಂದ್ಯದಲ್ಲಿ 15ನೇ ಶ್ರೇಯಾಂಕ ಪಡೆದಿರುವ ಇಂಡೋನೇಷ್ಯಾದ ಸಿಮಾನ್ ಸ್ಯಾಂಟೋಸೊ ಅವರನ್ನು ಎುರಿಸಲಿದ್ದಾರೆ.
ವಿಶ್ವದ ನಂಬರ್ 56ನೇ ಆಟಗಾರ ಸಿಮನ್ ಅವರು ಸೆಮಿಫೈನಲ್ ಪಂದ್ಯದಲ್ಲಿ ಥ್ಯಾಯ್ಲೆಂಡ್ನ ಥಮ್ಮಾಸಿನ್ ಸಿಟ್ಹಿಕಾಮ್ ವಿರುದ್ಧ 21-12, 19-21, 21-18 ಗೇಮ್ಗಳಿಂದ ಜಯ ಸಾಧಿಸಿದ್ದಾರೆ. ಸೆಮಿಫೈನಲ್ ಪಂದ್ಯದಲ್ಲಿ ಪ್ರಯಾಸದ ಜಯ ಸಾಧಿಸುವ ಮೂಲಕ ಅವರು ಫೈನಲ್ಗೆ ಲಗ್ಗೆ ಹಾಕಿದ್ದಾರೆ.
21 ವರ್ಷದ ಸೌರಭ್ ಅವರು ಪ್ರಶಸ್ತಿ ಸುತ್ತಿನಲ್ಲಿ ಕಠಿಣ ಸವಾಲು ಎದುರಿಸುತ್ತಿದ್ದಾರೆ. ಕಾರಣ, ಈ ಹಿಂದೆ 2012ರಲ್ಲಿ ನಡೆದ ಇಂಡೋನೇಷ್ಯಾ ಸೂಪರ್ ಸಿರೀಸ್ನಲ್ಲಿ ಸಿಮಾನ್ ವಿರುದ್ಧ ಸೋಲನುಭವಿಸಿದ್ದ ಸೌರಭ್ ಈ ಪಂದ್ಯದಲ್ಲಿ ಹೇಗೆ ಪ್ರದರ್ಶನ ನೀಡಲಿದ್ದಾರೆ ಎಂದು ಕಾತರ ಉಂಟುಮಾಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement