ಮರ್ಸಿಡಿಸ್ನ ಹ್ಯಾಮಿಲ್ಟನ್ಗೆ ಪೋಲ್
ಸೆಪಾಂಗ್: ಮರ್ಸಿಡಿಸ್ ಚಾಲಕ ಲೂಯಿಸ್ ಹ್ಯಾಮಿಲ್ಟನ್ ಅವರು ಮಲೇಷ್ಯಾ ಗ್ರ್ಯಾನ್ ಪ್ರೀ ಅರ್ಹತಾ ಸುತ್ತಿನಲ್ಲಿ ಪೋಲ್ ಪೋಸಿಷನ್ ಪಡೆದುಕೊಂಡಿದ್ದಾರೆ.
ವರುಣನ ಅಡ್ಡಿಯ ಹಿನ್ನೆಲೆಯಲ್ಲಿ ಅರ್ಹತಾ ಸುತ್ತಿನ ಸ್ಪರ್ಧೆ 50 ನಿಮಿಷಗಳ ಕಾಲ ವಿಳಂಬವಾಗಿ ಆರಂಭವಾಯಿತು. ಒದ್ದೆಯಾದ ಟ್ರ್ಯಾಕ್ನಲ್ಲೂ ಮರ್ಸಿಡಿಸ್, ಸೆಪಾಂಗ್ ಅಂತಾರಾಷ್ಟ್ರೀಯ ಸರ್ಕಿಟ್ನಲ್ಲಿ ಪಾರಮ್ಯ ಮರೆಯುವಲ್ಲಿ ಹಿಂದೆ ಬೀಳಲಿಲ್ಲ. ಇದರೊಂದಿಗೆ ಸತತ ಎರಡನೇ ಗ್ರ್ಯಾನ್ ಪ್ರಿಯಲ್ಲಿ ಹ್ಯಾಮಿಲ್ಟನ್ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಕಾತರದಲ್ಲಿದ್ದಾರೆ.
ರೆಡ್ಬುಲ್ನ ಸೆಬಾಸ್ಟಿಯನ್ ವೆಟಲ್ ಅವರು ಹ್ಯಾಮಿಲ್ಟನ್ಗೆ ತೀವ್ರ ಸ್ಪರ್ಧೆಯನ್ನೊಡಿದರು. ಆದರೆ, ಅಂತಿಮವಾಗಿ 2ನೇ ಸ್ಥಾನಕ್ಕೆ ತೃಪ್ತಿಪಟ್ಟರು.
ಫೋರ್ಸ್ ಇಂಡಿಯಾಕ್ಕೆ 7ನೇ ಸ್ಥಾನ: ಸಹರಾ ಫೋರ್ಸ್ ಇಂಡಿಯಾ ಚಾಲಕ ನಿಕೋ ಹಲ್ಕನ್ಬರ್ಗ್ ಅವರು ಅರ್ಹತಾ ಸುತ್ತಿನಲ್ಲಿ 7ನೇ ಸ್ಥಾನ ಪಡೆದುಕೊಂಡರು. ಅವರ ತಂಡದ ಇನ್ನೊಬ್ಬ ಚಾಲಕ ಸೆರ್ಜಿಯೋ ಪೆರೆಜ್ ಅವರು 14ನೇ ಸ್ಥಾನಕ್ಕೆ ತೃಪ್ತಿಪಟ್ಟರು.
ವಿಜೆಎಂ07-04 ಕಾರ್ನೊಂದಿಗೆ ಚಾಲನೆ ಮಾಡಿದ ಹಲ್ಕನ್ಬರ್ಗ್ 2:01.712 ಅವಧಿಯಲ್ಲಿ ಗುರಿ ಸೇರಿದರೆ, ಪೆರೆಜ್ 2:02.511 ಅವಧಿಯಲ್ಲಿ ಗುರಿ ಸೇರಿದರು.