ಸೆಪ್ಟೆಂಬರ್ ತಿಂಗಳಲ್ಲಿ ಐಬಿಎಲ್
ನವದೆಹಲಿ: ಇಂಡಿಯನ್ ಬ್ಯಾಡ್ಮಿಂಟನ್ ಲೀಗ್ನ (ಐಬಿಎಲ್) ಎರಡನೇ ಆವೃತ್ತಿ ಸೆಪ್ಟೆಂಬರ್ನಲ್ಲಿ ನಡೆಯಲಿದೆ ಎಂದು ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆಯ (ಬಿಐಎ) ಅಧ್ಯಕ್ಷ ಅಖಿಲೇಶ್ ದಾಸ್ ಗುಪ್ತಾ ಶನಿವಾರ ಹೇಳಿದ್ದಾರೆ. 'ಭಾರತದ ಬ್ಯಾಡ್ಮಿಂಟನ್ ನಿಧಾನವಾಗಿ ಬೆಳವಣಿಗೆ ಕಾಣುತ್ತಿದೆ. ಬರುವ ವಾರ ನಡೆಯಲಿರುವ ಇಂಡಿಯನ್ ಸೂಪರ್ ಸಿರೀಸ್ ಬ್ಯಾಡ್ಮಿಂಟನ್, ನಂತರ ಮೇ ತಿಂಗಳಲ್ಲಿ ಥಾಮಸ್ ಕಪ್, ಸ್ಕಾಟ್ಲೆಂಡ್ನಲ್ಲಿ ಕಾಮನ್ನೆಲ್ತ್ ಕ್ರೀಡಾಕೂಟ, ಅನಂತರ ಸೆಪ್ಟೆಂಬರ್ನಲ್ಲಿ ಐಬಿಎಲ್ ನಡೆಯಲಿದೆ' ಎಂದು ದಾಸ್ ಗುಪ್ತಾ ತಿಳಿಸಿದರು. ಬಿಐಎ ಆಡಳಿತ ಮಂಡಳಿ ಸಭೆ ಸೇರುವ ಮೂಲಕ ಒಂದು ವಾರದೊಳಗೆ ಐಬಿಎಲ್ ವೇಳಾಪಟ್ಟಿ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದಾಗಿ ಬಿಐಎ ಪ್ರಧಾನ ಕಾರ್ಯದರ್ಶಿ ವಿಜಯ್ ಸಿನ್ಹಾ ವಿವರಿಸಿದರು.