ಏಷ್ಯನ್ ಸ್ನೂಕರ್: ಪ್ರಿಕ್ವಾರ್ಟರ್‌ಗೆ ಕಮಲ್ ಚಾವ್ಲಾ, ಧರ್ಮಿಂದರ್ ಲಿಲ್ಲಿ
ನವದೆಹಲಿ: ಭಾರತದ ಸೂಕರ್ ತಾರೆಗಳಾದ ಕಮಲ್ ಚಾವ್ಲಾ ಮತ್ತು ಧರ್ಮಿಂದರ್ ಲಿಲ್ಲಿ ಅವರು, ಯುನೈಟೆಡ್ ಅರಬ್ ಎಮಿರೇಟ್ಸ್‌ನ ಅಲ್ ಫುಜೈರಾಹದಲ್ಲಿ ನಡೆಯುತ್ತಿರುವ ಏಷ್ಯನ್ ಸ್ನೂಕರ್ ಚಾಂಪಿಯನ್‌ಶಿಪ್‌ನ ಪ್ರಿ ಕ್ವಾರ್ಟರ್‌ಫೈನಲ್ ಹಂತ ಪ್ರವೇಶಿಸಿದ್ದಾರೆ.
ಈ ವರ್ಷ ನಡೆದ ರಾಷ್ಟ್ರೀಯ ಸ್ನೂಕರ್ ಚಾಂಪಿಯನ್‌ಶಿಪ್‌ನಲ್ಲಿ ರನ್ನರ್ ಅಪ್ ಪ್ರಶಸ್ತಿ ಗಿಟ್ಟಿಸಿದ್ದ ಚಾವ್ಲಾ ಅವರು, 32ನೇ ಸುತ್ತಿನ ಪಂದ್ಯದಲ್ಲಿ ಜೋರ್ಡಾನ್‌ನ ಲೈಲ್ತ್ ಅಲ್ನಾಸೆರ್ ಅವರನ್ನು 4-3 ಅಂಕಗಳಿಂದ ಪರಾಭವಗೊಳಿಸಿದರು.
ಏತನ್ಮಧ್ಯೆ, ಇನ್ನೊಂದು ಮಹತ್ವದ ಪಂದ್ಯದಲ್ಲಿ ಲಿಲ್ಲಿ ಅವರು ಹಾಂಕಾಂಗ್‌ನ ಫುಂಕ್ ಕೌವಾಯಿ ಅವರನ್ನು 4-3 ಅಂಕಗಳಿಂದ ಪರಾಭವಗೊಳಿಸಿದರು. 39 ವರ್ಷದ ಲಿಲ್ಲಿ ಅವರು ಈಗ ಪ್ರಿ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಮಲೇಷ್ಯಾದ ಚೂನ್ ಲೀಂಗ್ ತಿರ್ ಅವರನ್ನು ಎದುರಿಸಲಿದರೆ, ಚಾವ್ಲಾ ಅವರು ಚೀನಾದ ಚೆನ್ ಜಿಫಾನ್ ಅವರನ್ನು ಎದುರಿಸಲಿದ್ದಾರೆ.
ಇದಕ್ಕೂ ಮುನ್ನ ನಡೆದ ಪಂದ್ಯದಲ್ಲಿ ಭಾರತದ ಇನ್ನೊಬ್ಬ ಆಟಗಾರ ಬ್ರಿಜೇಶ್ ದಮನಿ ಅವರು ಮಂಗೋಲಿಯಾದ ಬಾಲ್ದಂಡೋಜ್ರ ಬಾತ್ಸುಖ್ ವಿರುದ್ಧ ಪರಾಭವಗೊಳಿಸಿದರು.
ಈ ಪಂದ್ಯಾವಳಿಯಲ್ಲಿ ಪ್ರಶಸ್ತಿ ಗೆದ್ದುಕೊಂಡವರು ಮುಂದಿನ ಋತುವಿಗೆ ಅರ್ಹತೆ ಪಡೆದುಕೊಳ್ಳಲಿದ್ದಾರೆ.