ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಕೊಳೇರ, ಕರಿನೆರುವಂಡಕ್ಕೆ ಜಯ

Mainashree
Updated On : 1 May 2014, 10:26 am

ವಿರಾಜಪೇಟೆ: ಇಲ್ಲಿನ ಸರ್ಕಾರಿ ಜೂನಿಯರ್ ಕಾಲೇಜಿ ಮೈದಾನದಲ್ಲಿ ನಡೆಯುತ್ತಿರುವ ತಾತಂಡ ಕೌಟುಂಬಿಕ ಹಾಕಿ ಕಪ್‌ನ 12ನೇ ದಿನದ ಪಂದ್ಯದಲ್ಲಿ ಗುರುವಾರ 9 ತಂಡಗಳು ಮುನ್ನಡೆ ಸಾಧಿಸಿದವು.
ಮೊದಲನೇ ಮೈದಾನದಲ್ಲಿ ನಡೆದ ಹಣಾಹಣಿಯಲ್ಲಿ ಕೊಳೇರ, ಬಾದುಮಂಡ, ಚೌರೀರ, ಕೊಟೇರ ತಂಡಗಳು ಹಾಗೂ ಎರಡನೇ ಮೈದಾನಲ್ಲಿ ನಡೆದ ಸೆಣಸಾಟದಲ್ಲಿ ಕರಿನೆರುವಂಡ, ಕೊಕ್ಕಂಡ, ಮಲ್ಚಿರ, ಮಾಚಿಮಾಡ, ಕೊಟೇರ ತಂಡಗಳು ತಮ್ಮ ಎದುರಾಳಿಯನ್ನು ಬಗ್ಗುಬಡಿದು ಮುನ್ನಡೆಯಿತು.
ಮೊದಲನೇ ಮೈದಾನ: ದಿನದ ಆರಂಭದಲ್ಲಿ ಮೈದಾನಕ್ಕಿಳಿದ ಕೊಳೇರ ತಂಡವು ಭರ್ಜರಿ ಪ್ರದರ್ಶನ ನೀಡಿ ಪಟ್ರಪ್ಪಂಡ ತಂಡವನ್ನು ಬಗ್ಗು ಬಡಿಯಿತು. ಕೊಳೇರ ತಂಡವು 4- 0 ಅಂತರದಿಂದ ಜಯಗಳಿಸಿತು. ಕೊಳೇರ ತಂಡದ ಪರ ಮಿಲನ್ ಮಾಚಯ್ಯ ಮತ್ತು ವಿನಯ್ ನಾಣಯ್ಯ ತಲಾ 1 ಗೋಲು ದಾಖಲಿಸಿದರೆ, ತ್ರಿಶೂಲ್ ಬಿದ್ದಪ್ಪ 2 ಗೋಲು ದಾಖಲಿಸಿ ತಂಡದ ಗೆಲವಿಗೆ ಕಾರಣರಾದರು.
ಎರಡನೇ ಪಂದ್ಯದಲ್ಲಿ ಬಾದುಮಂಡ ತಂಡವು ಬಡ್ಡಿರ ತಂಡವನ್ನು 2- 0 ಅಂತರದಿಂದ ಮಣಿಸಿದ್ದು, ಬಾದುಮಂಡ ತಂಡದ ಪರವಾಗಿ ಗಣಪತಿ ಮತ್ತು ಬೋಪಣ್ಣ ತಲಾ 1 ಗೋಲು ಗಳಿಸಿದರು.
ಮೂರನೇ ಪಂದ್ಯದಲ್ಲಿ ಚೌರೀರ ತಂಡವು ಹಾಕಿ ಉತ್ಸವದ ರಾಯಭಾರಿ ತಾತಾಂಡ ತಂಡವನ್ನು 3- 0 ಗೋಲುಗಳಿಂದ ಬಗ್ಗು ಬಡಿಯಿತು. ಚೌರೀರ ತಂಡದ ಪರ ನಾಣಯ್ಯ, ಪೊನ್ನಣ್ಣ, ನಿತಿನ್ ತಲಾ 1 ಗೋಲು ದಾಖಲಿಸಿದರು. ನಾಲ್ಕನೇ ಪಂದ್ಯದಲ್ಲಿ ಶಾಂತೆಯಂಡ ತಂಡವು ಕೊಟೇರ ತಂಡಕ್ಕೆ ಶರಣಾಯಿತು. ಕೊಟೇರ ತಂಡವು 1- 0 ಅಂತರದಿಂದ ಜಯಗಳಿಸಿದ್ದು, ತಂಡದ ಪರವಾಗಿ ಭರತ್ 1 ಗೋಲು ದಾಖಲಿಸಿ ತಂಡದ ಮುನ್ನಡೆಗೆ ಕಾರಣರಾದರು.
2ನೇ ಮೈದಾನ: ಇಲ್ಲಿ ದಿನದ ಆರಂಭಗೊಳಿಸಿದ ಕರಿನೆರುವಂಡ ತಂಡವು ಬೆರೇರ ತಂಡವನ್ನು 4- 0 ಅಂತರದಿಂದ ಸೋಲಿಸಿತು. ಮಾತ್ರವಲ್ಲದೆ ಕರಿನೆರುವಂಡ ತಂಡವು ಭರ್ಜರಿ ಪ್ರದರ್ಶನವನ್ನೂ ನೀಡಿದ್ದು, ತಂಡದ ಪರವಾಗಿ ಬಿದ್ದಪ್ಪ, ರಾಬಿನ್, ಲಿತೇಶ್, ವಸಂತ್ ತಲಾ 1 ಗೋಲು ಗಳಿಸಿದರು.
ಕೊಕ್ಕಂಡ ತಂಡವು ಬಲಿಷ್ಠ ಕುಳಚಂಡ ತಂಡವು  3- 2 ಗೋಲುಗಳಿಂದ ಮಣಿಸಿತು. ಕೊಕ್ಕಂಡ ತಂಡದ ಪರವಾಗಿ ಸುಬ್ಬಯ್ಯ 2 ಗೋಲು ಹಾಗೂ ಪೊನ್ನಣ್ಣ 1 ಗೋಲು ದಾಖಲಿಸಿ, ತಂಡವನ್ನು ಮುನ್ನಡೆಸಿದರು. ಕುಳಚಂಡ ತಂಡದ ಪರವಾಗಿ ಸಾಗರ್ ಮತ್ತು ಪವನ್ ತಲಾ 1 ಗೋಲು ದಾಖಲಿಸಿದರು. ಚೆರುವಾಲಂಡ ತಂಡವು ಮಲ್ಚಿರ ತಂಡದ ಎದುರು 0- 2 ಅಂತರದಿಂದ ಸೋಲೊಪ್ಪಿಕೊಂಡಿತು. ಮಲ್ಚಿರ ತಂಡದ ಪರವಾಗಿ ಶಾನ್ ಮತ್ತು ಹರ್ಷ ತಲಾ 1 ಗೋಲು ದಾಖಲಿಸಿದರು. ಮಾಚಿಮಾಡ ತಂಡವು ಚೋಕಂಡ ತಂಡವನ್ನು 4- 0 ಗೋಲುಗಳಿಂದ ಸೋಲಿಸಿ ಭರ್ಜರಿ ಜಯಗಳಿಸಿತು. ಮಾಚಿಮಾಡ ತಂಡದ ಪರವಾಗಿ ಚಿರಾತ್ 2 ಗೋಲು, ಕಾರ್ಯಪ್ಪ ಮತ್ತು ಮಿಥುನ್ ತಲಾ 1 ಗೋಲು ದಾಖಲಿಸಿದರು.
ಕೊಟೇರ ತಂಡವು ಶಾಂತೆಯಂಡ ತಂಡವನ್ನು 1- 0 ಗೋಲುಗಳಿಂದ ಮಣಿಸಿ, ವಿಜಯಿಯಾಯಿತು. ಕೊಟೇರ ಭರತ್ 1 ಗೋಲು ದಾಖಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement