ಗಂಭೀರ್ಗೆ ಹೆಣ್ಣು ಮಗು
ಕೋಲ್ಕತಾ; ಐಪಿಎಲ್ ಪಂದ್ಯಾವಳಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ನಾಯಕತ್ವ ವಹಿಸಿಕೊಂಡಿರುವ ಗೌತಮ್ ಗಂಭೀರ್ ಅವರು ಗುರುವಾರ ತಂದೆಯಾಗಿದ್ದಾರೆ. ಗಂಭೀರ್ ಪತ್ನಿ ನತಾಶಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಗಂಭೀರ್ ತಂದೆಯಾಗಿರುವ ವಿಷಯವನ್ನು ನೈಟ್ ರೈಡರ್ಸ್ ಫ್ರಾಂಚೈಸಿ ಟ್ವಟರ್ನಲ್ಲಿ ಪ್ರಕಟಿಸಿದೆ. ಅಲ್ಲದೆ, ಗಂಭೀರ್ ಮತ್ತು ನತಾಶಾ ಅವರಿಗೆ ಫ್ರಾಂಚೈಸಿ ಅಭಿನಂದನೆ ಸಲ್ಲಿಸಿದೆ. ಇದುವರೆಗೂ ಐಪಿಎಲ್ನಲ್ಲಿ ಆಡಿರುವ ಪಂದ್ಯಗಳಲ್ಲಿ ಕೇವಲ 2ರಲ್ಲಿ ಮಾತ್ರ ಜಯ ಸಾಧಿಸಿರುವ ಕೋಲ್ಕತಾ, ಭಾರತದಲ್ಲಿ ಆರಂಭವಾಗಲಿರುವ ಐಪಿಎಲ್ನ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲು ಸಿದ್ಧವಾಗಿದೆ.