ನೈಟ್ರೈಡ್ ಮಾಡಿದ ಕಿಂಗ್ಸ್
ಬ್ಯಾಟ್ಸ್ಮನ್ಗಳ ಅಬ್ಬರದ ಪ್ರದರ್ಶನ ಹಾಗೂ ರವೀಂದ್ರ ಜಡೇಜಾ ಮಾರಕ ಬೌಲಿಂಗ್ ದಾಳಿಯ...
ರಾಂಚಿ: ಬ್ಯಾಟ್ಸ್ಮನ್ಗಳ ಅಬ್ಬರದ ಪ್ರದರ್ಶನ ಹಾಗೂ ರವೀಂದ್ರ ಜಡೇಜಾ ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಐಪಿಎಲ್ 7ನೇ ಆವೃತ್ತಿಯ ಶುಕ್ರವಾರದ ಪಂದ್ಯದಲ್ಲಿ ಕೋಲ್ಕತಾ ನೈಟ್ರೈಡರ್ಸ್ ವಿರುದ್ಧ ಗೆಲವು ದಾಖಲಿಸಿದೆ.
ಇಲ್ಲಿನ ಜಾರ್ಖಂಡ್ ರಾಜ್ಯ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಸಿಎಸ್ಕೆ ತಂಡವು ಕೆಕೆಆರ್ ತಂಡವನ್ನು 34 ರನ್ಗಳಿಂದ ಮಣಿಸಿದೆ. ಹಾಗಾಗಿ ಕೆಕೆಆರ್ ಭಾರತದಲ್ಲೂ ತನ್ನ ಕಳಪೆ ಪ್ರದರ್ಶನ ಮುಂದುವರಿಸಿದೆ.
ಮಳೆಯಿಂದ ಅಡಚಣೆಯಾದ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ಮೊದಲು ಬ್ಯಾಟಿಂಗ್ ಮಾಡುವ ನಿರ್ಧರಿಸಿತು.
ಟಾಸ್ ನಂತರ ಆರಂಭವಾದ ಮಳೆ ಸುದೀರ್ಘ ಒಂದು ತಾಸಿಗೂ ಹೆಚ್ಚು ಕಾಲ ಸುರಿಯಿತು. ಪರಿಣಾಮ ಪಂದ್ಯವನ್ನು ಭಾರತೀಯ ಕಾಲಮಾನ 9.40ರ ಸುಮಾರಿಗೆ ಆರಂಭಿಸಲಾಯಿತು. ಪಂದ್ಯ ತಡವಾಗಿ ಆರಂಭವಾದ ಕಾರಣದಿಂದ ಪಂದ್ಯವನ್ನು 17 ಓವರ್ಗಳಿಗೆ ಕಡಿತಗೊಳಿಸಲಾಯಿತು.
ಹಾಗಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಿಗದಿತ 17 ಓವರ್ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 148 ರನ್ ದಾಖಲಿಸುವಲ್ಲಿ ಯಶಸ್ವಿಯಾಯಿತು. ಈ ಮೊತ್ತವನ್ನು ಬೆನ್ನಟ್ಟಿದ ಕೆಕೆಆರ್ 17 ಓವರ್ಗಳಲ್ಲಿ 9 ವಿಕೆಟ್ಗೆ 114 ರನ್ ಕಲೆಹಾಕಿತು.ಮಾರಕವಾದ ಮೆಕಲಂ: ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ಸಿಎಸ್ಕೆ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಡ್ವೈನ್ ಸ್ಮಿತ್ (16) ಹಾಗೂ ಬ್ರೆಂಡನ್ ಮೆಕಲಂ (56) ಜೋಡಿ ಆರಂಭಿಕ ವಿಕೆಟ್ಗೆ ಕೇವಲ 20 ರನ್ ದಾಖಲಿಸಿತು. ಈ ವೇಳೆ ಸ್ಮಿತ್ ಶಕಿಬ್ ಅಲ್ ಹಸನ್ ಎಸೆತದಲ್ಲಿ ಎಲ್ಬಿ ಬಲೆಗೆ ಬಿದ್ದರು.
ಎರಡನೇ ವಿಕೆಟ್ಗೆ ಮೆಕಲಂ ಜತೆಗೂಡಿದ ಸುರೇಶ್ ರೈನಾ (31) ತಂಡದ ಇನಿಂಗ್ಸ್ ಅನ್ನು ಅದ್ಭುತ ರೀತಿಯಲ್ಲಿ ಕಟ್ಟಿದರು. ಅಬ್ಬರದ ಬ್ಯಾಟಿಂಗ್ ನಡೆಸಿದ ಈ ಜೋಡಿ ಎರಡನೇ ವಿಕೆಟ್ಗೆ 70 ರನ್ಗಳ ಜತೆಯಾಟ ನೀಡಿದರು. ರೈನಾ ಔಟಾದ ಬೆನ್ನಲ್ಲೇ ಬ್ರೆಂಡನ್ ಮೆಕಲಂ (40 ಎಸೆತ, 56 ರನ್, 5 ಬೌಂಡರಿ, 2 ಸಿಕ್ಸರ್), ರಸ್ಸೆಲ್ ಎಸೆತದಲ್ಲಿ ಪಠಾಣ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ನಂತರ ಬಂದ ನಾಯಕ ಮಹೇಂದ್ರ ಸಿಂಗ್ ಧೋನಿ (22) ಹಾಗೂ ಜಡೇಜಾ (17) ಅಜೇಯರಾಗುಳಿದರಲ್ಲದೇ ತಂಡದ ಮೊತ್ತವನ್ನು 150ರ ಗಡಿ ಸಮೀಪಕ್ಕೆ ಕೊಂಡೋಯ್ದರು.
ಉತ್ತಪ್ಪ ಹೋರಾಟ ವ್ಯರ್ಥ: ಸಿಎಸ್ಕೆ ನೀಡಿದ ಮೊತ್ತವನ್ನು ಬೆನ್ನಟ್ಟಿದ ಕೆಕೆಆರ್ ತಂಡದ ಪರ ಸಮರ್ಥ ರೀತಿಯಲ್ಲಿ ಹೋರಾಟ ನಡೆಸಿದ್ದು, ಕರ್ನಾಟಕದ ಆಟಗಾರ ರಾಬಿನ್ ಉತ್ತಪ್ಪ (47) ಹಾಗೂ ಯೂಸುಫ್ ಪಠಾಣ್ (41).
ನಾಯಕ ಗೌತಮ್ ಗಂಭೀರ್ ಜತೆ ಆರಂಭಿಕರಾಗಿ ಕಣಕ್ಕಿಳಿದು ಕೇವಲ 6 ರನ್ ಮಾತ್ರ ಕಲೆಹಾಕಿದರು.
ನಂತರ ಬಂದ ಜಾಕ್ ಕಾಲಿಸ್ (4), ಮನೀಷ್ ಪಾಂಡೆ (1), ಶಕಿಬ್ ಅಲ್ ಹಸನ್ (0) ಬಂದ ವೇಗದಲ್ಲೇ ಪೆವಿಲಿಯನ್ ಸೇರಿಕೊಂಡಿದ್ದು, ತಂಡಕ್ಕೆ ಗಾಯದ ಮೇಲೆ ಬರೆ ಎಳೆದಂತಾಯಿತು.
ಈ ಹಂತದಲ್ಲಿ ತಂಡ ಮತ್ತೆ ಸೋಲಿನ ಸುಳಿಗಿ ಸಿಲುಕಿದಂತಾಯಿತು. 5ನೇ ವಿಕೆಟ್ಗೆ ಉತ್ತಪ್ಪ ಜತೆಗೂಡಿದ ಸೂರ್ಯಕುಮಾರ್ ಯಾದವ್ (8) ಸಹ ಕೇವಲ ಒಂದಂಕ್ಕಿಗೆ ಪೆವಿಲಿಯನ್ ಸೇರಿಕೊಂಡು ನಿರಾಸೆ ಮೂಡಿಸಿದರು.
ರಾಬಿನ್ ಉತ್ತಪ್ಪ ಅನಾವಶ್ಯಕ ಹೊಡೆತಕ್ಕೆ ಮುಂದಾಗಿ ಜಡೇಜಾ ಎಸೆತದಲ್ಲಿ ಧೋನಿಗೆ ಕ್ಯಾಚ್ ನೀಡಿ ತಮ್ಮ ಹೋರಾಟ ಅಂತ್ಯಗೊಳಿಸಿದರು. ನಂತರ ಬಂದ ರಸ್ಸೆಲ್ 1 ರನ್ಗಳಿಸಿ ಔಟಾದರೆ, ಅಂತಿಮ ಕ್ಷಣದಲ್ಲಿ ಪಠಾಣ್ ಅಬ್ಬರದ ಬ್ಯಾಟಿಂಗ್ನಿಂದ 29 ಎಸೆತಗಳಲ್ಲಿ 1 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ 41 ರನ್ಗಳಿಸಿದರೂ ಯಾವುದೇ ನೆರವಾಗಲಿಲ್ಲ.
ಸಿಎಸ್ಕೆ ತಂಡದ ಪರ ರವೀಂದ್ರ ಜಡೇಜಾ 4 ಓವರ್ಗಳಲ್ಲಿ 12 ರನ್ಗಳಿಗೆ 4 ವಿಕೆಟ್ ಪಡೆದರೆ, ಮೊಹಿತ್ ಶರ್ಮಾ 3 ಓವರ್ಗಳಲ್ಲಿ 22 ರನ್ಗಳಿಗೆ 3 ವಿಕೆಟ್ ಕಬಳಿಸಿ ಮಿಂಚಿನ ಪ್ರದರ್ಶನ ನೀಡಿದರು.
ಸ್ಕೋರ್ ವಿವರ
ಚೆನ್ನೈ ಸೂಪರ್ ಕಿಂಗ್ಸ್ 17 ಓವರ್ಗಳಲ್ಲಿ
3 ವಿಕೆಟ್ಗೆ 148
ಡ್ವೈನ್ ಸ್ಮಿತ್ ಎಲ್ಬಿ ಶಕಿಬ್ 16, ಬ್ರೆಂಡನ್ ಮೆಕಲಂ ಸಿ ಪಠಾಣ್ ಬಿ ರಸ್ಸೆಲ್ 56, ಸುರೇಶ್ ರೈನಾ ಸಿ ಯಾದವ್ ಬಿ ಶಕಿಬ್ 31, ಮಹೇಂದ್ರ ಸಿಂಗ್ ಧೋನಿ ಅಜೇಯ 22, ರವೀಂದ್ರ ಜಡೇಜಾ ಅಜೇಯ 17,
ಇತರೆ: (ಲೆಗ್ ಬೈ 5, ನೊಬಾಲ್ 1) ಒಟ್ಟು 6
ವಿಕೆಟ್ ಪತನ: 1-20, 2-90, 3-119
ಬೌಲಿಂಗ್ ವಿವರ:
ಶಕಿಬ್ ಅಲ್ ಹಸನ್ 4-0-25-2, ಸುನಿಲ್ ನಾರಾಯಣ್ 4-0-26-0, ಪಿಯೂಶ್ ಚಾವ್ಲಾ 3-0-31-0, ವಿನಯ್ ಕುಮಾರ್ 3-0-26-0, ಜಾಕ್ ಕಾಲಿಸ್ 1-0-10-0, ಆ್ಯಂಡ್ರೆ ರಸ್ಸೆಲ್ 2-0-25-1
ಕೋಲ್ಕತಾ ನೈಟ್ರೈಡರ್ಸ್ 17 ಓವರ್ಗಳಲ್ಲಿ
9 ವಿಕೆಟ್ಗೆ 114
ರಾಬಿನ್ ಉತ್ತಪ್ಪ ಸಿ ಧೋನಿ ಬಿ ಜಡೇಜಾ 47
ಗೌತಮ್ ಗಂಭೀರ್ ರನೌಟ್ (ಧೋನಿ/ಹಿಲ್ಫನ್ಹಾಸ್) 6, ಜಾಕ್ ಕಾಲಿಸ್ ಸಿ ಮನ್ಹಾಸ್ ಬಿ ಅಶ್ವಿನ್ 4, ಮನೀಶ್ ಪಾಂಡೆ ಸಿ ಮೆಕಲಂ ಬಿ ಜಡೇಜಾ 1, ಶಕಿಬ್ ಅಲ್ ಹಸನ್ ಸಿ ಮೊಹಿತ್ ಬಿ ಜಡೇಜಾ 0, ಸೂರ್ಯಕುಮಾರ್ ಎಲ್ಬಿ ಜಡೇಜಾ 8, ಯೂಸುಫ್ ಪಠಾಣ್ ಎಲ್ಬಿ ಮೊಹಿತ್ 41, ರಸ್ಸೆಲ್ ಬಿ ಮೊಹಿತ್ ಶರ್ಮಾ 1, ಪಿಯೂಶ್ ಚಾವ್ಲಾ ಸಿ ಡುಪ್ಲೆಸಿಸ್ ಬಿ ಮೊಹಿತ್ 1, ವಿನಯ್ ಅಜೇಯ 0, ನಾರಾಯಣ್ ಅಜೇಯ 1
ಇತರೆ: (ಲೆಗ್ ಬೈ 3, ನೊಬಾಲ್ 1) ಒಟ್ಟು 4
ವಿಕೆಟ್ ಪತನ: 1-17, 2-36, 3-38, 4-38, 5-65, 6-88, 7-91, 8-113, 9-113
ಬೌಲಿಂಗ್ ವಿವರ:
ಬೆನ್ ಹಿಲ್ಫನ್ಹಾಸ್ 3-0-26-0, ಈಶ್ವರ್ ಪಾಂಡೆ 2-0-20-0, ಮೊಹಿತ್ ಶರ್ಮಾ 3-0-22-3, ಆರ್.ಅಶ್ವಿನ್ 4-0-21-1, ರವೀಂದ್ರ ಜಡೇಜಾ 4-0-12-4, ಸುರೇಶ್ ರೈನಾ 1-0-10-0