ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಏಷ್ಯನ್ ಸ್ನೂಕರ್: ಕಂಚಿನ ಪದಕಕ್ಕೆ ತೃಪ್ತ ಕಮಲ್ ಚಾವಾ

Vishwanath S
Updated On : 4 May 2014, 12:44 pm

ನವದೆಹಲಿ: ಭಾರತದ ಕಮಲ್ ಚಾವ್ಲಾ ಅವರು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆದ ಏಷ್ಯನ್ ಸ್ನೂಕರ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಪಡೆಯಲಷ್ಟೇ ತೃಪ್ತರಾಗಿದ್ದಾರೆ.
ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಕಮಲ್ ಚಾವ್ಲಾ ಅವರು ಮಲೇಷಿಯಾದ ಚಾನ್ ಲಿಯಾಂಗ್ ಥೋರ್ ವಿರುದ್ಧ 2-6 ಅಂಕಗಳ ಅಂತರದಲ್ಲಿ ಸೋಲನುಭವಿಸಿದರು. ಭಾರತೀಯ ಆಟಗಾರನಿಗೆ ಇದು ಮೊದಲ ಏಷ್ಯನ್ ಪದಕವಾಗಿರುವುದು ವಿಶೇಷ.
ಟೂರ್ನಿಯಲ್ಲಿ ಇಲ್ಲಿಯವರೆಗೆ ಅತ್ಯುತ್ತಮ ಪ್ರದರ್ಶನ ನೀಡುತ್ತ ಬಂದಿದ್ದ ಕಮಲ್, ನಾಲ್ಕರಘಟ್ಟದಲ್ಲಿ ಮಾತ್ರ ನೈಜ ಮಲೇಷಿಯಾ ಆಟಗಾರನ ಎದುರು ಪರದಾಡಿದರು. ಆದರೂ ಸಹ ಪಂದ್ಯದಲ್ಲಿ ಎರಡು ಫ್ರೇಮ್‌ಗಳನ್ನು ಗೆದ್ದುಕೊಳ್ಳುವಲ್ಲಿ ಅವರು ಸಫಲರಾದರು.
ಇದಕ್ಕೂ ಮುನ್ನ ಅವರು ಪ್ರಿಕ್ವಾರ್ಟರ್‌ಫೈನಲ್ ಸುತ್ತಿನಲ್ಲಿ ಚೀನಾದ ಚೆನ್ ಝಿಫನ್ ವಿರುದ್ಧ 4-2 ಅಂಕಗಳಿಂದ ಹಾಗೂ ಕ್ವಾರ್ಟರ್‌ಫೈನಲ್‌ನಲ್ಲಿ ಮಲೇಷಿಯಾದ ಮೊಹ್ ಕೀನ್ ಹೊ ವಿರುದ್ಧ 5-3 ಅಂಕಗಳಿಂದ ಜಯಗಳಿಸಿ ಸೆಮಿಫೈನಲ್ ಪ್ರವೇಶಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement