ಐಚ್ಚಂಡ, ತೀತಮಾಡಕ್ಕೆ ಜಯ
ರಾಜಪೇಟೆ: ಇಲ್ಲಿನ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ತಾತಂಡ ಕೌಟುಂಬಿಕ ಹಾಕಿ ಪಂದ್ಯದಲ್ಲಿ ಶನಿವಾರ ಐಚ್ಚಂಡ, ಬೊವಿರಂಡ ತಂಡಗಳು ಸೇರಿದಂತೆ ಒಟ್ಟು 12 ತಂಡಗಳು ಮುನ್ನಡೆ ಸಾಧಿಸಿವೆ.
ಮೊದಲನೇ ಮೈದಾನ: ದಿನದ ಆರಂಭದಲ್ಲಿ ಐಚ್ಚಂಡ ತಂಡವು ಉತ್ತಮ ಪ್ರದರ್ಶನ ನೀಡಿ, ಅಲ್ಲಾರಂಡ ತಂಡವನ್ನು 4- 0 ಗೋಲುಗಳಿಂದ ಮಣಿಸಿತು. ಐಚ್ಚಂಡದ ತಂಡದ ಪರವಾಗಿ ಗೋಲುಗಳ ವೀರ ನಿರಣ್ 3 ಗೋಲು ದಾಖಲಿಸಿದರೆ, ಮುತ್ತಣ್ಣ 1 ಗೋಲು ದಾಖಲಿದರು.
ತೀತಮಾಡ (ಕುಂದ) ತಂಡವು ಮುಂಡ್ಯೋಳಂಡ ತಂಡವನ್ನು 4- 0 ಗೋಲುಗಳಿಂದ ಸೋಲಿಸಿತು. ತೀತಮಾಡ ತಂಡದ ಪರವಾಗಿ ಸಂಜು, ಕಾಳಪ್ಪ, ವಿನು ಮತ್ತು ಸುಜಿತ್ ತಲಾ 1 ಗೋಲು ಗಳಿಸಿ ತಂಡವನ್ನು ಮುನ್ನಡೆಸಿದರು. ಕಾಂಡಂಡ ತಂಡವು ಪುಚ್ಚಿಮಾಡ ತಂಡವನ್ನು 6- 0 ಗೋಲುಗಳಿಂದ ಬಗ್ಗು ಬಡಿಯಿತು. ಕಾಂಡಂಡ ತಂಡದ ಮುಂದೆ ಯಾವುದೇ ಪ್ರತಿರೋಧ ತೋರದ ಪುಚ್ಚಿಮಾಡ ತಂಡವು ಸುಲಭವಾಗಿ ಸೋಲೊಪ್ಪಿಕೊಂಡಿತು. ಕಾಂಡಂಡ ತಂಡದ ಪರವಾಗಿ ವೀರಪ್ಪ ಮತ್ತು ಚಂಗಪ್ಪ ತಲಾ 1 ಗೋಲು, ಮಾದಯ್ಯ 4 ಗೋಲು ದಾಖಲಿಸಿ ತಂಡಕ್ಕೆ ಜಯ ತಂದುಕೊಟ್ಟರು. ಒಡಿಯಂಡ ತಂಡವು ಮಲ್ಲಮಾಡ ತಂಡವನ್ನು 4- 3 ಅಂತರದಿಂದ ಮಣಿಸಿತು. ಮಲ್ಲಮಾಡ ಮತ್ತು ಒಡಿಯಂಡ ತಂಡವು ಮೈದಾನದಲ್ಲಿ ಉತ್ತಮ ಪ್ರದರ್ಶನ ತೋರಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಒಡಿಯಂಡ ತಂಡದ ಪರವಾಗಿ ಕಾರ್ಯಪ್ಪ, ಪೊನ್ನಣ್ಣ, ಬಿದ್ದಪ್ಪ ಹಾಗೂ ಉತ್ತಪ್ಪ ತಲಾ 1 ಗೋಲು ದಾಖಲಿಸಿದರು. ಮಲ್ಲಮಾಡ ತಂಡದ ಪರವಾಗಿ ಗುಲ್ಶನ್ 1 ಗೋಲು ದಾಖಲಿಸಿದರೆ, ತಿಮ್ಮಯ್ಯ 2 ಗೋಲು ದಾಖಲಿಸಿದರು.
ನೆಲ್ಲಮಕ್ಕಡ ತಂಡವು ಮಾತಂಡ ತಂಡವನ್ನು 4- 0 ಗೋಲುಗಳಿಂದ ಸೋಲಿಸಿತು. ನೆಲ್ಲಮಕ್ಕಡ ತಂಡದ ಪರವಾಗಿ ಸಾಜಿ, ಸೋಮಯ್ಯ ತಲಾ 1 ಗೋಲು ದಾಖಲಿಸಿದರೆ, ಅಯ್ಯಪ್ಪ 2 ಗೋಲು ದಾಖಲಿಸಿ ತಂಡದ ವಿಜಯಕ್ಕೆ ಕಾರಣರಾದರು.
ಮಚ್ಚರಂಡ ತಂಡವು ಮಾಂಡೇಡ ತಂಡವನ್ನು 1- 0 ಗೋಲುಗಳಿಂದ ಮಣಿಸಿತು. ಮಚ್ಚರಂಡ ಪ್ರಧಾನ್ 1 ಗೋಲು ದಾಖಲಿಸಿದರು.
2ನೇ ಮೈದಾನ: ಆರಂಭದ ಸೆಣಸಾಟ ಪ್ರಾರಂಭಿಸಿದ ಅಜೆಂಗಡ ತಂಡವು ಬೊವಿರಂಡ ತಂಡದ ಮುಂದೆ ಉತ್ತಮ ಪ್ರದರ್ಶನ ತೋರಿದರೂ ಕೊನೆಯಲ್ಲಿ 2- 3 ಅಂತರದಿಂದ ಶರಣಾಯಿತು. ಅಜೆಂಗಡ ತಂಡದ ಪರವಾಗಿ ನಿಶಾನ್, ಪ್ರಶಾಂತ್ ತಲಾ 1 ಗೋಲು ದಾಖಲಿಸಿದರು. ಬೊವಿರಂಡ ತಂಡದ ಪರವಾಗಿ ಅಪ್ಪಯ್ಯ, ಸಚಿನ್, ಮೇದಪ್ಪ ತಲಾ 1 ಗೋಲು ದಾಖಲಿಸಿ ತಂಡದ ವಿಜಯಕ್ಕೆ ಕಾರಣರಾದರು.
2ನೇ ಪಂದ್ಯದಲ್ಲಿ ಇಟ್ಟೀರ ತಂಡವು ಕುಟ್ಟಂಡ ತಂಡವನ್ನು ಭರ್ಜರಿ 5- 0 ಗೋಲುಗಳಿಂದ ಮಣಿಸಿತು. ಇಟ್ಟೀರ ತಂಡದ ಪರವಾಗಿ ಚಿತಿಯಪ್ಪ ಹಾಗೂ ರಕ್ಷಿತ್ ತಲಾ 2 ಗೋಲು ದಾಖಲಿಸಿದರೆ, ರೋಷನ್ 1 ಗೋಲು ದಾಖಲಿಸಿದರು.
3ನೇ ಪಂದ್ಯದಲ್ಲಿ ಚೇಂದಿರ ತಂಡವು ವಾಟೇರಿರ ತಂಡವನ್ನು 2- 1 ಗೋಲುಗಳಿಂದ ಮಣಿಸಿತು. ಚೇಂದಿರ ತಂಡದ ಪರವಾಗಿ ಉತ್ತಪ್ಪ ಮತ್ತು ಅಪ್ಪಣ್ಣ ತಲಾ 1 ಗೋಲು ದಾಖಲಿಸಿದರು. ವಾಟೇರಿರ ತಂಡದ ಪರವಾಗಿ ಪೂವಣ್ಣ 1 ಗೋಲು ದಾಖಲಿಸಿದರು.
4ನೇ ಪಂದ್ಯದಲ್ಲಿ ಗೋದೆಂಗಡ ತಂಡವು ದೇಪಾಡಿಯಂಡ ತಂಡದ ಮುಂದೆ 0- 1 ಗೋಲುಗಳಿಂದ ಶರಣಾಯಿತು. ದೇಪಾಡಿಯಂಡ ತಂಡದ ಪರ ಪೊನ್ನಣ್ಣ 1 ಗೋಲು ದಾಖಲಿಸಿ ತಂಡವನ್ನು ಮುನ್ನಡೆಸಿದರು.
5ನೇ ಪಂದ್ಯದಲ್ಲಿ ಬಾರಿಯಂಡ ತಂಡವು ಬಾದುವಂಡ ತಂಡವನ್ನು 5- 1 ಗೋಲುಗಳಿಂದ ಮಣಿಸಿತು. ಬಾರಿಯಂಡ ತಂಡದ ಪರವಾಗಿ ಮಧುರ್ 1 ಗೋಲು, ರಿಗನ್ ಮತ್ತು ಭರತ್ ತಲಾ 2 ಗೋಲು ದಾಖಲಿಸಿದರು. ಬಾದುವಂಡ ಪರವಾಗಿ ಅಪ್ಪಚ್ಚು ಏಕೈಕ 1 ಗೋಲು ದಾಖಲಿಸಿದರು.