ಡೆವಿಲ್ಸ್ ಗೆದ್ದ ಕಿಂಗ್ಸ್
ನವದೆಹಲಿ: ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಗಳ ಅಬ್ಬರದ ಬ್ಯಾಟಿಂಗ್ ನೆರವಿನೊಂದಿಗೆ ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್, ಸೋಮವಾರ ಫಿರೋಜ್ ಶಾ ಕೋಟ್ಲಾ ಮೈದಾನಲ್ಲಿ ನಡೆದ ಐಪಿಎಲ್ನ 2ನೇ ಪಂದ್ಯದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ 8 ವಿಕೆಟ್ ಅಂತರದಿಂದ ಜಯ ಸಾಧಿಸಿತು.
ಪಂದ್ಯದಲ್ಲಿ ಡೆಲ್ಲಿ ತಂಡದ ಬೌಲರ್ಗಳ ವೈಫಲ್ಯವನ್ನು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಂಡ ಚೆನ್ನೈನ ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಗಳಾದ ಡ್ವೈನ್ ಸ್ಮಿತ್ (79), ಸುರೇಶ್ ರೈನಾ (ಅ.47) ಹಾಗೂ ಬ್ರೆಂಡಾನ್ ಮೆಕಲಂ (32) ತಂಡವನ್ನು ಗೆಲವಿನ ದಡ ಸೇರಿಸಿದರು.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿದ್ದ ಚೆನ್ನೈ ತಂಡ ಡೆಲ್ಲಿಯನ್ನು 178 ರನ್ಗಳಿಗೆ ನಿಯಂತ್ರಿಸಿತ್ತು. ನಂತರ 19.4 ಓವರ್ಗಳಲ್ಲಿ ಕೇವಲ 2 ವಿಕೆಟ್ ನಷ್ಟಕ್ಕೆ 181 ರನ್ ಕಲೆ ಹಾಕುವ ಮೂಲಕ ಜಯದ ಕೇಕೆ ಹಾಕಿತು.
ಆರಂಭಿಕರಾಗಿ ಅಂಗಣಕ್ಕಿಳಿದ ಡ್ವೈನ್ ಸ್ಮಿತ್ ಮತ್ತು ಬ್ರೆಂಡನ್ ಮೆಕಲಂ ಮೊದಲ ವಿಕೆಟ್ ಜತೆಯಾಟದಲ್ಲಿ 82 ರನ್ ಗಳಿಸುತ್ತಿದ್ದಂತೆಯೇ ಮೆಕಲಂ ಅವರು ವೇಯ್ನ್ ಪಾರ್ನೆಲ್ ಬೌಲಿಂಗ್ನಲ್ಲಿ ಮುರಳಿ ವಿಜಯ್ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. ನಂತರ ಬಂದ ರೈನಾ ಅವರೊಂದಿಗೆ ಜತೆಯಾಗಿ ತಮ್ಮ ಅತ್ಯದ್ಭುತ ಇನಿಂಗ್ಸ್ ಮುಂದುವರಿಸಿದ ಸ್ಮಿತ್, 2ನೇ ವಿಕೆಟ್ ಜತೆಯಾಟದಲ್ಲಿ 86 ರನ್ ಕಲೆ ಹಾಕಿದರು. ಆದರೆ, ಇನ್ನೇನು ಚೆನ್ನೈ ಗೆದ್ದಿತು ಎನ್ನುವಷ್ಟರಲ್ಲೇ 19ನೇ ಓವರ್ನಲ್ಲಿ ಲಕ್ಷ್ಮಿ ಶುಕ್ಲಾ ಎಸೆದ 4ನೇ ಎಸೆತದಲ್ಲಿ ಮುರಳಿ ವಿಜಯ್ಗೆ ಕ್ಯಾಚ್ ನೀಡಿದರು. ಕೇವಲ 51 ಎಸೆತಗಳನ್ನು ಎದುರಿಸಿದ ಅವರ ಅರ್ಧ ಶತಕದಲ್ಲಿ 8 ಭರ್ಜರಿ ಸಿಕ್ಸರ್ಗಳು ಮತ್ತು 4 ಬೌಂಡರಿಗಳು ಸೇರಿದ್ದವು. ಕೆಳ ಕ್ರಮಾಂಕದಲ್ಲಿ ಅಂಗಣಕ್ಕಿಳಿದ ನಾಯಕ ಮಹೇಂದ್ರ ಸಿಂಗ್ ಧೋನಿ 12 ರನ್ ಗಳಿಸಿ ಅಜೇಯರಾಗುಳಿದರು.
ಡೆಲ್ಲಿ ಪರ ವೇಯ್ನ್ ಪಾರ್ನೆಲ್ ಮತ್ತು ಲಕ್ಷ್ಮಿ ಶುಕ್ಲಾ ಅವರು ಮಾತ್ರ ತಲಾ ಒಂದು ವಿಕೆಟ್ ಪಡೆದರು. ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಡೆಲ್ಲಿ ಡೇರ್ಡೆವಿಲ್ಸ್ ತಂಡ, ದಿನೇಶ್ ಕಾರ್ತಿಕ್ (51) ಅವರ ಅರ್ಧ ಶತಕ, ಕೆಳ ಕ್ರಮಾಂಕದಲ್ಲಿ ಜೀನ್ ಪಾಲ್ ಡುಮಿನಿ (28) ಮತ್ತು ಕೇದಾರ್ ಜಾಧವ್ (29) ಬ್ಯಾಟ್ನೊಂದಿಗೆ ಗುಡುಗುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 179 ರನ್ಗಳ ಕಠಿಣ ಸವಾಲೊಡ್ಡಿತ್ತು. ಚೆನ್ನೈ ಪರ ಉತ್ತಮ ಬೌಲಿಂಗ್ ಮಾಡಿದ ಬೆನ್ ಹಿಲ್ಫೆನಾಸ್, ಮೋಹಿತ್ ಶರ್ಮಾ, ರವೀಂದ್ರ ಜಡೇಜಾ, ಆರ್. ಅಶ್ವಿನ್ ಅವರು ತಲಾ ಒಂದು ವಿಕೆಟ್ ಪಡೆದರು.
ಡೆಲ್ಲಿ ಡೇರ್ಡೆವಿಲ್ಸ್ 20 ಓವರ್ಗಳಲ್ಲಿ 5 ವಿಕೆಟ್ಗೆ 178
ಖಿಂಟಾನ್ ಡಿ ಕಾಕ್ ರನೌಟ್ (ರೈನಾ/ಜಡೇಜಾ/ಮೋಹಿತ್) 24 (16) ಮುರಳಿ ವಿಜಯ್ ಸಿ ಡು ಪ್ಲೆಸಿಸ್ ಬಿ ಜಡೇಜಾ 35 (30), ಕೆವಿನ್ ಪೀಟರ್ಸನ್ ಬಿ ಮೋಹಿತ್ ಶರ್ಮಾ 0 (1), ದಿನೇಶ್ ಕಾರ್ತಿಕ್ ಸಿ ಮೋಹಿತ್ ಬಿ ಹಿಲ್ಫೆನಾಸ್ 51 (36), ಎಲ್. ಆರ್ ಶುಕ್ಲಾ ಸಿ ಪಾಂಡೆ ಬಿ ಅಶ್ವಿನಿ 0 (2), ಜೀನ್ ಪಾಲ್ ಡುಮಿನಿ ಅಜೇಯ 28 (17), ಕೆದಾರ್ ಜಾಧವ್ ಅಜೇಯ 29 (18)
ಇತರೆ (ಲೆಗ್ಬೈ-6, ವೈಡ್-5) 11
ವಿಕೆಟ್ ಪತನ: 1-36, 2-37, 3-108, 4-119, 5-120.
ಬೌಲಿಂಗ್ ವಿವರ:
ಬೆನ್ ಹಿಲ್ಫೆನಾಸ್ 4-0-34-1
ಈಶ್ವರ ಪಾಂಡೆ 3-1-26-0
ಮೋಹಿತ್ ಶರ್ಮಾ 4-0-51-1
ರವೀಂದ್ರ ಜಡೇಜಾ 4-0-23-1
ಆರ್. ಅಶ್ವಿನ್ 4-0-29-1
ಡ್ವೈನ್ ಸ್ಮಿತ್ 1-0-9-0
ಚೆನ್ನೈ ಸೂಪರ್ ಕಿಂಗ್ಸ್ 19.4 ಓವರ್ಗಳಲ್ಲಿ 2 ವಿಕೆಟ್ಗೆ 181
ಡ್ವೈನ್ ಸ್ಮಿತ್ ಸಿ ವಿಜಯ್ ಬಿ ಪಾರ್ನೆಲ್ 79 (51), ಬ್ರೆಂಡಾನ್ ಮಕಲಂ ಸಿ ವಿಜಯ್ ಬಿ ಶುಕ್ಲಾ 32 (35), ಸುರೇಶ್ ರೈನಾ ಅಜೇಯ 47 (27), ಮಹೇಂದ್ರ ಸಿಂಗ್ ಧೋನಿ 12 (5)
ಇತರೆ (ಬೈಸ್-4, ಲೆಗ್ಬೈ-5, ವೈಡ್-2) 11
ವಿಕೆಟ್ ಪತನ: 1-82, 2-168.ಬೌಲಿಂಗ್ ವಿವರ:
ಮೊಹ್ಮದ್ ಶಮಿ 4-0-42-0
ಪಾರ್ನೆಲ್ 4-0-25-1
ಉನಾದ್ಕತ್ 3.4-0-47-0
ಶಹಬಾಜ್ ನದೀಂ 4-0-27-0ಲಕ್ಷ್ಮಿ ಶುಕ್ಲಾ 4-0-31-1