ವಿಶ್ವ ಸ್ಕ್ವಾಷ್ ರ್ಯಾಂಕಿಂಗ್: ದೀಪಿಕಾಗೆ 10ನೇ ಕ್ರಮಾಂಕ
ನವದೆಹಲಿ: ಭಾರತದ ಅಗ್ರಮಾನ್ಯ ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಳ್ಳಿಕಲ್ ನೂತನ ವಿಶ್ವ ರ್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರ 10ರೊಳಗೆ ಸ್ಥಾನ ಪಡೆದಿದ್ದಾರೆ.
ಕಳೆದ ತಿಂಗಳು ನಡೆದ ಟೆಕ್ಸಾಸ್ ಓಪನ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ ಆಧಾರದ ಮೇಲೆ ರ್ಯಾಂಕಿಂಗ್ನಲ್ಲಿ ಅವರು ಎರಡು ಸ್ಥಾನ ಮೇಲೇರುವುದರೊಂದಿಗೆ 10ನೇ ಕ್ರಮಾಂಕ ತಲುಪಿದ್ದಾರೆ. ರ್ಯಾಂಕಿಂಗ್ನಲ್ಲಿ ಮೇಲೇರುತ್ತ ಹೋದರೆ ನಮ್ಮಲ್ಲಿ ಹೊಸ ಉತ್ಸಾಹ ತುಂಬುತ್ತದೆ. ಸ್ಥಿರ ಪ್ರದರ್ಶನ ಮುಂದುವರಿಸಿಕೊಂಡು ಹೋಗುವ ಮೂಲಕ ಅಗ್ರ 5ರೊಳಗೆ ಸ್ಥಾನ ಪಡೆಯುವ ಗುರಿ ಹೊಂದಿರುವುದಾಗಿ ದೀಪಿಕಾ ಪಳ್ಳಿಕಲ್ ಹೇಳಿದ್ದಾರೆ.
ಈ ಮಧ್ಯೆ ಭಾರತದ ಮತ್ತೊಬ್ಬ ಅಗ್ರಮಾನ್ಯ ಆಟಗಾರ್ತಿ ಜೋಷ್ನಾ ಚಿನ್ನಪ್ಪ ಮಾತ್ರ 21ನೇ ಸ್ಥಾನದಲ್ಲಿಯೇ ಉಳಿದಿದ್ದಾರೆ. ಕಳೆದ ತಿಂಗಳು ಅವರು ರಿಚ್ಮಂಡ್ ಓಪನ್ನಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದರೂ ರ್ಯಾಂಕಿಂಗ್ನಲ್ಲಿ ಮೇಲೇರಲು ಸಾಧ್ಯವಾಗಿಲ್ಲ.
ಮಲೇಷಿಯಾದ ದಂತಕತೆ ನಿಕೋಲ್ ಡೇವಿಡ್ ವಿಶ್ವದ ನಂಬರ್ ಒನ್ ಆಟಗಾರ್ತಿಯಾಗಿದ್ದಾರೆ. ಹಿರಿಯ ಆಟಗಾರ್ತಿ ಐರ್ಲೆಂಡ್ನ ಮೆಡೆಲಿನೆ ಪೆರ್ರಿ 9ನೇ ಕ್ರಮಾಂಕದಲ್ಲಿದ್ದಾರೆ. ವಿಶ್ವ ಚಾಂಪಿಯನ್ ಇಂಗ್ಲೆಂಡ್ನ ಲಾರಾ ಮಸ್ಸಾರೊ 2ನೇ, ಈಜಿಪ್ತ್ನ ರಾನೀಂ ಎಲ್ ವೆಲಿಲಿ 3ನೇ, ನ್ಯೂಜಿಲೆಂಡ್ನ ಜೊಯೆಲಿ ಕಿಂಗ್ 4ನೇ ಹಾಗೂ ಫ್ರಾನ್ಸ್ನ ಕೆಮಿಲೆ ಸೆರ್ಮೆ 5ನೇ ಕ್ರಮಾಂಕಗಳನ್ನು ಪಡೆದಿದ್ದಾರೆ.