ಮುಂಬೈಗೂ ಸೋತ ಆರ್‌ಸಿಬಿ
ತವರಿನ ಅಂಗಣದಲ್ಲಿ ತಕ್ಕ ಪ್ರದರ್ಶನ ನೀಡಿದ ಮುಂಬೈ ಇಂಡಿಯನ್ಸ್ ತಂಡ ಮಂಗಳವಾರ ನಡೆದ ಐಪಿಎಲ್...
ಮುಂಬೈ: ತವರಿನ ಅಂಗಣದಲ್ಲಿ ತಕ್ಕ ಪ್ರದರ್ಶನ ನೀಡಿದ ಮುಂಬೈ ಇಂಡಿಯನ್ಸ್ ತಂಡ ಮಂಗಳವಾರ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 19 ರನ್‌ಗಳ ಅಂತರದಿಂದ ಜಯ ಸಾಧಿಸಿತು.
ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ನಾಯಕ ರೋಹಿತ್ ಶರ್ಮಾ (ಅಜೇಯ 55) ಹಾಗೂ ಕಿರನ್ ಪೊಲಾರ್ಡ್ (43) ಮುಂಬೈ ಜಯದ ರೂವಾರಿಗಳೆನಿಸಿದರು. ಟಾಸ್ ಸೋತರೂ ಬ್ಯಾಟಿಂಗ್ ಅವಕಾಶ ಪಡೆದ ಮುಂಬೈ 187 ರನ್‌ಗಳ ಬೃಹತ್ ಮೊತ್ತ ದಾಖಲಿಸಿತ್ತು.
ನಂತರ ಈ 188 ರನ್‌ಗಳ ಗುರಿಯನ್ನು ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 168 ರನ್ ಕಲೆ ಹಾಕುವ ಮೂಲಕ ಕೈಚೆಲ್ಲಿತು. ಬೆಂಗಳೂರು ಪರ ಆರಂಭಿಕರಾಗಿ ಅಂಗಣಕ್ಕಿಳಿದ ಕ್ರಿಸ್ ಗೇಯ್ಲ್ (38) ಮತ್ತು ಪಾರ್ಥೀವ್ ಪಟೇಲ್ (26) ಉತ್ತಮ ಆರಂಭವನ್ನೇ ಕಂಡಿದ್ದರು. ನಾಯಕ ವಿರಾಟ್ ಕೊಹ್ಲಿ (25) ಸಹ ತಕ್ಕ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಆದರೆ, ಮಧ್ಯಮ ಕ್ರಮಾಂಕ ಹಾಗೂ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಸಂಪೂರ್ಣ ವೈಫಲ್ಯ ಕಾಣುವ ಮೂಲಕ ಅಂತಿಮವಾಗಿ ಸೋಲನುಭವಿಸಿತು.
ಮುಂಬೈ ಪರ ಆಕರ್ಷಕ ಬೌಲಿಂಗ್ ಪ್ರದರ್ಶಿಸಿದ ಜಸ್ಪ್ರೀತ್ ಬುಮ್ರಾ, ಹರ್ಭಜನ್ ಸಿಂಗ್, ಮಾಲಿಂಗ ತಲಾ 2 ವಿಕೆಟ್ ಪಡೆದರೆ, ಪವನ್ ಸೂಯಲ್ 1 ವಿಕೆಟ್ ಪಡೆದರು.
ಅಬ್ಬರಿಸಿದ ರೋಹಿತ್, ಪೊಲಾರ್ಡ್: ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಮುಂಬೈ ಪರ, ನಾಯಕ ರೋಹಿತ್ ಶರ್ಮಾ (ಅಜೇಯ 55 ರನ್, 34 ಎಸೆತ, 2 ಬೌಂಡರಿ, 4 ಸಿಕ್ಸರ್) ಹಾಗೂ ಕೀರನ್ ಪೊಲಾರ್ಡ್ (43 ರನ್, 31 ಎಸೆತ, 6 ಬೌಂಡರಿ) 97 ರನ್ ಕಲೆ ಹಾಕಿದರು. 16ನೇ ಓವರ್‌ನಿಂದ ಅಬ್ಬರದ ಬ್ಯಾಟಿಂಗ್‌ಗೆ ಇಳಿದ ಈ ಜೋಡಿ ಮತ್ತೆ ತಂಡದ ರನ್ ವೇಗವನ್ನು ಹೆಚ್ಚಿಸಿದರು. ಅಂತಿಮ 5 ಓವರ್‌ಗಳಲ್ಲಿ 66 ರನ್ ಕಲೆ ಹಾಕಿದ ಮುಂಬೈ 180ರ ಗಡಿ ದಾಟುವಲ್ಲಿ ಯಶಸ್ವಿಯಾಯಿತು. ಆರ್‌ಸಿಬಿ ತಂಡ ಈ ಪಂದ್ಯದಲ್ಲಿ 25 ರನ್‌ಗಳನ್ನು ಹೆಚ್ಚುವರಿಯಾಗಿ ನೀಡಿದ್ದು, ದುಬಾರಿಯಾಯಿತು.
ಸ್ಕೋರ್ ವಿವರ
ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 187
ಬೆನ್ ಡಂಕ್ ಸಿ ಯುವರಾಜ್ ಬಿ ಹರ್ಷದ್ 15, ಸಿ.ಎಮ್ ಗೌತಮ್ ಸಿ ಪಟೇಲ್ ಬಿ ವರುಣ್ 30, ಅಂಬಟಿ ರಾಯುಡು ಬಿ ದಿಂದಾ 9, ರೋಹಿತ್ ಶರ್ಮಾ ಅಜೇಯ 55, ಕೋರೆ ಆ್ಯಂಡರ್‌ಸನ್ ಸಿ ಕೊಹ್ಲಿ ಬಿ ಚಾಹಲ್ 6, ಕಿರನ್ ಪೊಲಾರ್ಡ್ ರನೌಟ್ (ಪಟೇಲ್/ಸ್ಟಾರ್ಕ್) 43, ಆದಿತ್ಯ ತಾರೆ ಅಜೇಯ 0
ಇತರೆ: (ಬೈ 4, ಲೆಗ್ ಬೈ 8, ವೈಡ್ 12, ನೊಬಾಲ್ 1) ಒಟ್ಟು 25
ವಿಕೆಟ್ ಪತನ: 1-25, 2-71, 3-77, 4-84, 5-181
ಮಿಚೆಲ್ ಸ್ಟಾರ್ಕ್ 4-0-29-0, ಅಶೋಕ್ ದಿಂಡಾ 3-0-38-1, ಹರ್ಷದ್ ಪಟೇಲ್ 4-0-28-1, ವರುಣ್ ಎರಾನ್ 4-0-41-1, ಚಾಹಲ್ 4-0-30-1, ಯುವರಾಜ್ 1-0-9-0
ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್‌ಗಳಲ್ಲಿ 8 ವಿಕೆಟ್‌ಗೆ 168
ಕ್ರಿಸ್ ಗೇಯ್ಲ್ ಬಿ ಹರ್ಭಜನ್ ಸಿಂಗ್ 38 (24), ಪಾರ್ಥೀವ್ ಪಟೇಲ್ ಬಿ ಹರ್ಭಜನ್ ಸಿಂಗ್ 26 (19), ವಿರಾಟ್ ಕೊಹ್ಲಿ ಸಿ ಆ್ಯಂಡರ್ಸನ್ ಬಿ ಸುಯಲ್ 35 (28), ಡಿವಿಲಿಯರ್ಸ್ ಬಿ ಬುಮ್ರಾ 9 (7), ಯುವರಾಜ್ ಸಿಂಗ್ ರನೌಟ್ (ಪೊಲಾರ್ಡ್) 6 (10), ರೀಲಿ ರೋಸೊ ಸಿ ಶರ್ಮಾ ಬಿ ಮಾಲಿಂಗ 24 (14), ಮಿಚೆಲ್ ಸ್ಟಾರ್ಕ್ ಸಿ ಪೊಲಾರ್ಡ್ ಬಿ ಮಾಲಿಂಗ 5 (4), ಹರ್ಷಲ್ ಪಟೇಲ್ ಬಿ ಬುಮ್ರಾ 6 (2), ವರುಣ್ ಆರೋನ್ ಅಜೇಯ 7 (8). ಅಶೋಕ್ ದಿಂಡಾ ಅಜೇಯ 2 (4)ಇತರೆ (ಲೆಗ್ ಬೈಸ್-6, ವೈಡ್-3)
ವಿಕೆಟ್ ಪತನ: 1-53, 2-94, 3-117, 4-119, 5-132, 6-139, 7-151, 8-159.
ಬೌಲಿಂಗ್ ವಿವರ:
ಪವನ್ ಸುಯಲ್ 3-0-35-1
ಜಸ್ಪ್ರೀತ್ ಬುಮ್ರಾ 4-0-22-2
ಹರ್ಭಜನ್ ಸಿಂಗ್ 4-0-33-2
ಮಾಲಿಂಗ 4-0-29-2
ಪೊಲಾರ್ಡ್ 4-0-37-0
ರೋಹಿತ್ ಶರ್ಮಾ 1-0-6-0
ಸಿಟ್ಟೆದ್ದು ಸ್ಟಾರ್ಕ್‌ನತ್ತ ಬ್ಯಾಟ್ ಎಸೆದ ಪೊಲಾರ್ಡ್
ಇನಿಂಗ್ಸ್‌ನ 17ನೇ ಓವರ್‌ನಲ್ಲಿಮಿಚೆಲ್ ಸ್ಟಾರ್ಕ್ ಐದನೇ ಎಸೆತ ಎಸೆಯಲುಬರುತ್ತಿದ್ದಾಗ ಕೀರನ್ ಪೊಲಾರ್ಡ್ ಕ್ರೀಸ್ ಬಿಟ್ಟು ಹಿಂದೆ ಸರಿದರು. ಆದರೆ, ಸ್ಟಾರ್ಕ್ ಇದನ್ನು ಗಮನಿಸಿದರೂ, ಚೆಂಡನ್ನು ಎಸೆದೇಬಿಟ್ಟರು. ಇದರಿಂದ ತೀವ್ರಕೋಪಗೊಂಡ ಪೊಲಾರ್ಡ್, ಸ್ಟಾರ್ಕ್‌ನತ್ತ ಬ್ಯಾಟ್ ಎಸೆದರು. ಆಗ ಉಭಯ ಆಟಗಾರರ ನಡುವೆ ಸ್ವಲ್ಪ ಮಾತಿನ ಚಕಮಕಿ ನಡೆಯಿತು. ಪ್ರಮುಖವಾಗಿ ಪೊಲಾರ್ಡ್ ಅವರು ಸ್ಟಾರ್ಕ್ ಮೇಲೆ ಹರಿಹಾಯಲು ಮುಂದಾದರು. ಈ ವೇಳೆ ಮಧ್ಯ ಪ್ರವೇಶಿಸಿದ ಅಂಪೈರ್ ಪೊಲಾರ್ಡ್‌ರನ್ನು ಶಾಂತವಾಗಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಜಹೀರ್ ಔಟ್
ಸೋಲಿನ ಸುಳಿಯಲ್ಲಿ ಸಿಲುಕಿರುವ ಮುಂಬೈ ಇಂಡಿಯನ್ಸ್ ತಂಡಕ್ಕೆ ಈಗ ಗಾಯದ ಮೇಲೆ ಬರೆ ಎಳೆದಂತಹ ಪರಿಸ್ಥಿತಿ ಎದುರಾಗಿದೆ. ತಂಡದ ಪ್ರಮುಖ ಬೌಲರ್ ಆಗಿದ್ದ ಜಹೀರ್ ಖಾನ್, ಗಾಯದ ಸಮಸ್ಯೆಗೆ ಸಿಲುಕಿದ್ದು ಪಂದ್ಯಾವಳಿಯಿಂದಲೇ ಹೊರಗುಳಿದಿದ್ದಾರೆ. ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಜಹೀರ್ ಕಡೇ ಓವರ್ ವೇಳೆ ಮೂರು ಎಸೆತ ಮಾಡಿದ ನಂತರ ಸ್ನಾಯು ಸೆಳೆತಕ್ಕೆ ಸಿಲುಕಿದ್ದರು. ಅವರ ಸಮಸ್ಯೆ ತೀವ್ರವಾಗಿರುವುದರಿಂದ ಮುಂದಿನ ಪಂದ್ಯಗಳಿಗೆ ಅವರು ಆಡುತ್ತಿಲ್ಲ. ಪಂದ್ಯದ ಟಾಸ್ ವೇಳೆ ಈ ವಿಷಯ ತಿಳಿಸಿದ ನಾಯಕ ರೋಹಿತ್ ಶರ್ಮಾ, ಜಹೀರ್ ಖಾನ್ ಗಾಯದ ಸಮಸ್ಯೆಯಿಂದಾಗಿ ಮುಂದಿನ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ ಎಂದು ತಿಳಿಸಿದರು.