ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಡೆಲ್ಲಿ ಸೇರಿದ ತಾಹಿರ್

Rashmi Kasaragodu
Updated On : 8 May 2014, 12:58 pm

ನವದೆಹಲಿ: ಪಾಕಿಸ್ತಾನ ಮೂಲದ ದಕ್ಷಿಣ ಆಫ್ರಿಕಾ ತಂಡದ ಸ್ಪಿನ್ನರ್ ಇಮ್ರಾನ್ ತಾಹಿರ್ ಏಳನೇ ಆವೃತ್ತಿಯ ಐಪಿಎಲ್ ಟಿ-20 ಪಂದ್ಯಾವಳಿಗಾಗಿ ಡೆಲ್ಲಿ ಡೇರ್ಡೆವಿಲ್ಸ್ ತಂಡವನ್ನು ಕೂಡಿಕೊಂಡಿದ್ದಾರೆ.
ಟೂರ್ನಿಯ ಆರಂಭದಲ್ಲೇ ಆಸ್ಟ್ರೇಲಿಯಾದ ವೇಗದ ಬೌಲರ್ ನಾಥನ್ ಕೌಲ್ಟರ್ ನೀಲ್ ಗಾಯದ ಪಟ್ಟಿ ಸೇರುವ ಮೂಲಕ ಉಳಿದ ಪಂದ್ಯಗಳಿದೆ ಆಡಲು ಅನರ್ಹರಾದರು. ಹಾಗಾಗಿ, ನಾಥನ್ ಅವರ ಸ್ಥಾನವನ್ನು ತಾಹಿರ್ ತುಂಬಲಿದ್ದಾರೆ. ಐಪಿಎಲ್ ತಾಂತ್ರಿಕ ಸಮಿತಿ ಆಟಗಾರರ ಬದಲಾವಣೆಗೆ ಒಪ್ಪಿಗೆ ಸೂಚಿಸಿದ ನಂತರ ಡೆಲ್ಲಿ ತಂಡ ತಾಹಿರ್ ಅವರನ್ನು ಆಯ್ಕೆ ಮಾಡಿಕೊಂಡಿದೆ. ಪ್ರತಿಭಾನ್ವಿತ ಬೌಲರ್ ಆಗಿದ್ದ ಲಾಥನ್ ಕೌಲ್ಟರ್ ನೀಲ್ ಅವರು ಏಪ್ರಿಲ್ 21ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದ ವೇಳೆ ಸ್ನಾಯುಸೆಳೆತಕ್ಕೆ ಒಳಗಾಗಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement