ಪಂದ್ಯದ ಸ್ಥಳ ಬದಲು
ಮುಂಬೈ: ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ನ ಎರಡನೇ ಕ್ವಾಲಿಫೈಯರ್ ಪಂದ್ಯವನ್ನು ಮುಂಬೈನ ಬ್ರಬೋರ್ನ್ ಕ್ರೀಡಾಂಗಣಕ್ಕೆ ಸ್ಥಳಾಂತರ ಮಾಡಲಾಗಿದೆ. ಜೂನ್ 1ರಂದು ವಾಂಖೆಡೆ ಕ್ರೀಡಾಂಗಣ ನಿರ್ವಹಣೆ ಕುರಿತು ವಿವಾದಗಳಿರುವ ಹಿನ್ನೆಲೆಯಲ್ಲಿ ಈ ಪಂದ್ಯವನ್ನು ಸ್ಥಳಾಂತರಿಸಲಾಗಿದೆಯಂತೆ. ಆದರೆ, ಜೂನ್ 1ರಂದು ನಡೆಯಲಿರುವ ಫೈನಲ್ ಪಂದ್ಯ ಮಾತ್ರ ವಾಂಖೆಡೆ ಮೈದಾನದಲ್ಲೇ ನಡೆಯಲಿದೆ. 'ವಾಂಖೆಡೆ ಕ್ರೀಡಾಂಗಣ ನಿರ್ವಹಣೆ ಮತ್ತು ಅಕ್ರೆಡಿಯಶನ್ ಬಗ್ಗೆ ಕೆಲ ವಿವಾದಗಳು ಉಂಟಾಗಿವೆ. ಈ ಕುರಿತು ಮುಂಬೈ ಕ್ರಿಕೆಟ್ ಸಂಸ್ಥೆಯ ಉಪಾಧ್ಯಕ್ಷ ರವಿ ಸಾವಂತ್ ಅವರು ಪರಿಶೀಲಿಸುತ್ತಿದ್ದಾರೆ. ಅಲ್ಲದೆ, ಮೇ 3ರಂದು ನಡೆದ ಐಪಿಎಲ್ ಆಡಳಿತ ಮಂಡಳಿಯಲ್ಲೂ ಈ ಕುರಿತು ಚರ್ಚಿಸಲಾಗಿದೆ' ಎಂದು ಬಿಸಿಸಿಐ ಕಾರ್ಯದರ್ಶಿ ಸಂಜಯ್ ಪಟೇಲ್ ತಿಳಿಸಿದ್ದಾರೆ.