ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ರೈಡರ್ಸ್ಗೆ ನಮಿಸಿದ ಡೆವಿಲ್ಸ್

ನಾಯಕ ಗೌತಮ್ ಗಂಭೀರ್ ಅವರ ಆಕರ್ಷಕ ಅರ್ಧ ಶತಕದ ನೆರವಿನೊಂದಿಗೆ ಕೋಲ್ಕತಾ ನೈಟ್ ರೈಡರ್ಸ್ ತಂಡ ಬುಧವಾರ ...

Rashmi Kasaragodu
Updated On : 8 May 2014, 12:57 pm

ನವದೆಹಲಿ: ನಾಯಕ ಗೌತಮ್ ಗಂಭೀರ್ ಅವರ ಆಕರ್ಷಕ ಅರ್ಧ ಶತಕದ ನೆರವಿನೊಂದಿಗೆ ಕೋಲ್ಕತಾ ನೈಟ್ ರೈಡರ್ಸ್ ತಂಡ ಬುಧವಾರ ಫಿರೋಜ್ ಶಾ ಕೋಟ್ಲಾ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ನ ಮೊದಲ ಪಂದ್ಯದಲ್ಲಿ ಡೆಲ್ಲಿ ಡೇರ್ಡೆವಿಲ್ಸ್ ವಿರುದ್ಧ 8 ವಿಕೆಟ್ ಅಂತರದಿಂದ ಜಯ ಕಂಡುಕೊಂಡಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಡೆಲ್ಲಿ ಡೇರ್ಡೆವಿಲ್ಸ್ ತಂಡವನ್ನು 160 ರನ್ಗಳಿಗೆ ನಿಯಂತ್ರಿಸಿದ ಕೋಲ್ಕತಾ ನೈಟ್ ರೈಡರ್ಸ್ ತಂಡ ನಂತರ 18.2 ಓವರ್ಗಳಲ್ಲಿ ಕೇವಲ 2 ವಿಕೆಟ್ ನಷ್ಟಕ್ಕೆ 161 ರನ್ ಗಳಿಸುವ ಮೂಲಕ ಜಯದ ಕೇಕೆ ಹಾಕಿತು.
ಮೊಹ್ಮದ್ ಶಮಿ ನಾಯಕತ್ವದ ಡೆಲ್ಲಿ ಬೌಲಿಂಗ್ ಪಡೆಯನ್ನು ದಂಡಿಸಿದ ಗೌತಮ್ ಗಂಭೀರ್ (69) ಆರಂಭದಿಂದಲೇ ನಿಧಾನವಾಗಿ ಎದುರಾಳಿ ಬೌಲರ್ಗಳ ಮೇಲೆ ಹಿಡಿತ ಸಾಧಿಸುತ್ತಾ ಸಾಗಿದರು. ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಗಂಭೀರ್ ಅವರು, ಪ್ರಸಕ್ತ ಆವೃತ್ತಿಯಲ್ಲಿ 2ನೇ ಅರ್ಧ ಶತಕ ದಾಖಲಿಸಿದರು. ಗಂಭೀರ್ ಅವರೊಂದಿಗೆ ತಕ್ಕ ಸಾಥ್ ನೀಡಿದ ರಾಬಿನ್ ಉತ್ತಪ್ಪ (47) ಜೀನ್ ಪಾಲ್ ಡುಮಿನಿ ಬೌಲಿಂಗ್ನಲ್ಲಿ ಮನಬಂದಂತೆ ರನ್ ಬಾರಿಸಿದರು.
ಡೆಲ್ಲಿ ಬೌಲರ್ಗಳು ಬೌಲಿಂಗ್ ತಂತ್ರ ರಚಿಸಿಕೊಂಡಂತೆ, ಬ್ಯಾಟಿಂಗ್ ಮೇಲೆ ವಿಶ್ವಾಸ ಕಂಡುಕೊಂಡ ಗಂಭೀರ್ ಮತ್ತು ಉತ್ತಪ್ಪ ಡೆಲ್ಲಿ ಬೌಲಿಂಗ್ ವಿಭಾಗ ನಿಧಾನವಾಗಿ ಜರ್ಜರಿತವಾಗುವಂತೆ ಮಾಡಿದರು. ಇಬ್ಬರ ಜತೆಯಾಟದಲ್ಲಿ ಮೊದಲ ವಿಕೆಟ್ಗೆ 106 ರನ್ ಗಳಿಸಿದ್ದು ತಂಡ ಬೇಗನೆ ಜಯದ ದಡ ಸೇರಲು ಅನುಕೂಲವಾಯಿತು.
ಆದಾಗ್ಯೂ, 12ನೇ ಓವರ್ನ ಕೊನೆ ಎಸೆತದಲ್ಲಿ ಉತ್ತಪ್ಪ ವಿಕೆಟ್ ಪಡೆಯುವಲ್ಲಿ ದಕ್ಷಿಣ ಆಫ್ರಿಕಾದ ವಾಯ್ನ್ ಪಾರ್ನೆಲ್ ಯಶಸ್ವಿಯಾದರು. ನಂತರ ಬಂದ ಕರ್ನಾಟಕದ ಇನ್ನೊಬ್ಬ ಬ್ಯಾಟ್ಸ್ಮನ್ ಮನೀಶ್ ಪಾಂಡೆ (ಅಜೇಯ 23) ಸಹ ಗಂಭೀರ್ ಅವರೊಂದಿಗೆ ಉತ್ತಮ ಜತೆಯಾಟ ಪ್ರದರ್ಶಿಸಿದರು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡ, ಕೆಳ ಕ್ರಮಾಂಕದಲ್ಲಿ ಜೀನ್ ಪಾಲ್ ಡುಮಿನಿ (ಅಜೇಯ 40) ಮತ್ತು ಕೇದಾರ್ ಜಾಧವ್ (ಅಜೇಯ 26) ಮುರಿಯದ ಜತೆಯಾಟದಲ್ಲಿ 55 ರನ್ ಗಳಿಸುವ ಮೂಲಕ ತಂಡ 160 ರನ್ ಗಡಿ ತಲುಪಲು ನೆರವಾಗಿದ್ದರು.
ಆರಂಭಿಕ ಆಟಗಾರ ಮುರಳಿ ವಿಜಯ್ (24) ಮತ್ತು ದಿನೇಶ್ ಕಾರ್ತಿಕ್ (36) ಅವರೂ ಕೊಂಚ ಸೂಕ್ತ ಬ್ಯಾಟಿಂಗ್ ಪ್ರದರ್ಶಿಸಿದರು.
ಕೋಲ್ಕತಾ ಪರ ಆಕರ್ಷಕ ಬೌಲಿಂಗ್ ಪ್ರದರ್ಶಿಸಿದ ಜಾಕ್ ಕಾಲಿಸ್, ಉಮೇಶ್ ಯಾದವ್, ಶಕಿಬ್ ಅಲ್ ಹಸನ್ ಹಾಗೂ ಸುನಿಲ್ ನಾರಾಯಣ ಅವರು ತಲಾ ಒಂದು ವಿಕೆಟ್ ಪಡೆದರು.


ಡೆಲ್ಲಿಗೆ ಕ್ವಾಲಿಫೈಯರ್ ಹಾದಿ ಕಷ್ಟ
ಪಂದ್ಯಾವಳಿಯಲ್ಲಿ ಇದುವರೆಗೂ 8 ಪಂದ್ಯಗಳನ್ನಾಡಿರುವ ಡೆಲ್ಲಿ ಡೇರ್ಡೆವಿಲ್ಸ್ ತಂಡ ಕೇವಲ ಎರಡು ಪಂದ್ಯಗಳಲ್ಲಿ ಮಾತ್ರ ಗೆದ್ದಿದ್ದು, ಇನ್ನು 6 ಪಂದ್ಯಗಳಲ್ಲಿ ಮಾತ್ರ ಆಡಬೇಕಿದೆ. ಈ ಆರೂ ಪಂದ್ಯಗಳಲ್ಲಿ ಗೆದ್ದರೂ, ಉಳಿದ ತಂಡಗಳ ಸಾಧನೆಯ ಆಧಾರದ ಮೇಲೆ ಡೆಲ್ಲಿ ಕ್ವಾಲಿಫೈಯರ್ಗೆ ಅರ್ಹತೆ ಪಡೆಯುವುದು ನಿರ್ಧಾರವಾಗಲಿದೆ.


ಸ್ಕೋರ್ ವಿವರ


ಡೆಲ್ಲಿ ಡೇರ್ಡೆವಿಲ್ಸ್ 20 ಓವರ್ಗಳಲ್ಲಿ 5 ವಿಕೆಟ್ಗೆ 160
ಕಿಂಟಾನ್ ಡಿ ಕಾಕ್ ಸಿ ಗಂಭೀರ್ ಬಿ ಉಮೇಶ್ ಯಾದವ್ 10 (9), ಮುರಳಿ ವಿಜಯ್ ಸಿ ನಾರಾಯಣ ಬಿ ಕಾಲಿಸ್ 24 (20), ಕೆವಿನ್ ಪೀಟರ್ಸನ್ ರನೌಟ್ (ಉತ್ತಪ್ಪ) 6 (12), ದಿನೇಶ್ ಕಾರ್ತಿಕ್ ಸಿ ಕಾಲಿಸ್ ಬಿ ಶಕಿಬ್ 36 (22),  ಡೆಪಿ ಡುಮಿನಿ ಅಜೇಯ 40 (28), ಲಕ್ಷ್ಮಿ ಶುಕ್ಲಾ ಬಿ ನಾರಾಯಣ 10 (14), ಕೇದಾರ್ ಜಾಧವ್ ಅಜೇಯ 26 (15)
ಇತರೆ (ಲೆಗ್ಬೈಸ್-6, ವೈಡ್-2) 8
ವಿಕೆಟ್ ಪತನ: 1-14, 2-26, 3-61, 4-85, 5-105.
ಬೌಲಿಂಗ್ ವಿವರ
ಸೂರ್ಯಕುಮಾರ್ ಯಾದವ್ 1-0-8-0, ಜಾಕ್ ಕಾಲಿಸ್ 4-0-38-1, ಉಮೇಶ್ ಯಾದವ್ 4-0-26-1, ಶಕಿಬ್ ಅಲ್ ಹಸನ್ 4-0-13-1, ಸುನಿಲ್ ನಾರಾಯಣ 4-0-38-1, ವಿನಯ್ ಕುಮಾರ್      3-0-31-0

ಕೋಲ್ಕತಾ ನೈಟ್ ರೈಡರ್ಸ್ 18.2 ಓವರ್ಗಳಲ್ಲಿ 2 ವಿಕೆಟ್ಗೆ 161
ರಾಬಿನ್ ಉತ್ತಪ್ಪ ಎಲ್ಬಿ ಪೊಲಾರ್ಡ್ 47 (34), ಗೌತಮ್ ಗಂಭೀರ್ ಸಿ ಕಾರ್ತಿಕ್ ಬಿ ಪಾರ್ನೆಲ್ 69 (56), ಮನೀಶ್ ಪಾಂಡೆ ಅಜೇಯ 23 (14), ಜಾಕ್ ಕಾಲಿಸ್ ಅಜೇಯ 10 (6), ಇತರೆ (ಲೆಗ್ಬೈಸ್-11, ವೈಡ್-1) 12,
ವಿಕೆಟ್ ಪತನ: 1-106, 2-151.
ಬೌಲಿಂಗ್ ವಿವರ: ಮೊಹ್ಮದ್ ಶಮಿ 4-0-23-0, ವಾಯ್ನ್ ಪಾರ್ನೆಲ್ 4-0-21-2 , ಲಕ್ಷ್ಮಿ ಶುಕ್ಲಾ 2-0-19-0, ಸಿದ್ದಾರ್ಥ್ ಕೌಲ್ 3-0-29-0, ಜೆಪಿ ಡುಮಿನಿ 2-0-24-0, ಶಹಬಾಜ್ ನದೀಂ 3.2-0-34-0



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement