ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ವಿಶ್ವ ಕರಾಟೆ: ನಯನಾಗೆ ಚಿನ್ನ

Rashmi Kasaragodu
Updated On : 8 May 2014, 12:47 pm

ಬ್ಯಾಡಗಿ: ಬಲಿಷ್ಠ ಹೋರಾಟ ನಡೆಸಿದ ನಯನಾ ಹೊಸಮನೆ ಅವರು ಮಲೇಷ್ಯಾದಲ್ಲಿ ನಡೆದ 11ನೇ ವಿಶ್ವ ಕರಾಟೆ ಚಾಂಪಿಯನ್ಶಿಪ್ನ ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿದ್ದಾರೆ.
ಉದಯೋನ್ಮುಖ ಕರಾಟೆ ಪಟು ನಯನಾ ಬುಧವಾರ ತವರಿಗೆ ಮರಳಿದಾಗ ಅವರನ್ನು ಅದ್ಧೂರಿಯಿಂದ ಸ್ವಾಗತಿಸಲಾಯಿತು. ಒಟ್ಟು 7 ಸುತ್ತಿನ ಅಂತಿಮ ಪಂದ್ಯದಲ್ಲಿ ಕೊರಿಯಾದ ಎದುರಾಳಿಯನ್ನು ಮಣಿಸಿದ ನಯನಾ 3 ಅಂಕಗಳ ಅಂತರದಿಂದ ಜಯ ಸಾಧಿಸಿದಳು. ಇದಕ್ಕೂ ಮುನ್ನ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಅತಿಥೇಯ ಮಲೇಷ್ಯಾದ ಬಾಲಕಿ ವಿರುದ್ಧ 5 ಅಂಕಗಳಿಂದ ಸುಲಭ ಗೆಲುವು ದಾಖಲಿಸಿದ್ದರು.
ನಾರಾಯಣಗೆ ಬೆಳ್ಳಿ: ಬ್ಯಾಡಗಿಯ ಇನ್ನೋರ್ವ  ಕರಾಟೆ ಪಟು ನಾರಾಯಣ ಪೂಜಾರ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. ಫೈನಲ್ ಪಂದ್ಯದಲ್ಲಿ ನಾರಾಯಣ ಮಾಡಿದ ಸಣ್ಣ ತಪ್ಪಿನಿಂದ ಭಾರತದವರೇ ಆದ ಅಣ್ಣಪ್ಪ ಮಾರ್ಕಳ ವಿರುದ್ಧ 5 ಅಂಕಗಳಿಂದ ಪರಾಜಯಗೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement