ಸಾನಿಯಾ- ಕಾರಾ ಜೋಡಿ ಕ್ವಾರ್ಟರ್ಗೆ
ಮ್ಯಾಡ್ರಿಡ್: ಐದನೇ ಶ್ರೇಯಾಂಕ ಪಡೆದಿರುವ ಸಾನಿಯಾ ಮಿರ್ಜಾ ಮತ್ತು ಕಾರಾ ಬ್ಲಾಕ್ ಜೋಡಿ ಮ್ಯಾಡ್ರಿಡ್ ಓಪನ್ ಟೆನಿಸ್ ಚಾಂಪಿಯನ್ಶಿಪ್ನ ಕ್ವಾರ್ಟರ್ಫೈನಲ್ ಪ್ರವೇಶಿಸಿದೆ.
ಭಾರತ ಮತ್ತು ಜಿಂಬಾಬ್ವೆ ಜೋಡಿ, ದ್ವಿತೀಯ ಸುತ್ತಿನ ಪಂದ್ಯದಲ್ಲಿ ತೈಪೇಯ ಹೂ ಚಿಂಗ್ ಚಾನ್ ಮತ್ತು ಪ್ರೋಟಿಯಾದ ಚಾನೆಲ್ಲೆ ಸ್ಕೂಪರ್ಸ್ ಜೋಡಿ ವಿರುದ್ಧ 6-4, 6-1 ನೇರ ಸೆಟ್ಗಳ ಅಂತರದಿಂದ ವಿಜಯ ಸಾಧಿಸಿತು.
ಕಳೆದ ವಾರ ಪೊರ್ಚುಗಲ್ ಓಪನ್ ಗೆದ್ದುಕೊಂಡಿರುವ ಸಾನಿಯಾ ಮತ್ತು ಕಾರಾ ಜೋಡಿ, ಮೊದಲ ಸೆಟ್ನ ಆರಂಭದಲ್ಲಿ 4-1 ಅಂತರದ ಮುನ್ನಡೆ ಕಂಡುಕೊಂಡಿತ್ತು. ಆದರೆ, ನಂತರ ಚಾನ್ ಮತ್ತು ಸ್ಕೂಪರ್ಸ್ ಜೋಡಿ 3-4 ಅಂಕಗಳಿಂದ ಅಂತರವನ್ನು ಕಡಿಮೆ ಮಾಡಿಕೊಂಡಿತು.
ಆದರೆ, ತೈಪೇ-ಚೀನಾ ಜೋಡಿಗೆ ಹೆಚ್ಚಿನ ಮುನ್ನಡೆ ಸಾಧಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಅಂತಿಮವಾಗಿ ಸಾನಿಯಾ ಮತ್ತು ಕಾರಾ ಜೋಡಿ ಮೇಲುಗೈ ಸಾಧಿಸಿತು.
ಇನ್ನು ದ್ವಿತೀಯ ಸೆಟ್ನಲ್ಲಂತೂ ಎದುರಾಳಿಗೆ ಅವಕಾಶವನ್ನೇ ನೀಡಿದ ಭಾರತ ಮತ್ತು ಜಿಂಬಾಬ್ವೆ ಜೋಡಿ ಕ್ವಾರ್ಟರ್ಫೈನಲ್ಗೆ ಸುಲಭವಾಗಿ ಹೆಜ್ಜೆ ಹಾಕಿತು.
ಈಗ ಸಾನಿಯಾ ಮತ್ತು ಕಾರಾ ಜೋಡಿ, ಕ್ವಾರ್ಟರ್ಫೈನಲ್ ಪಂದ್ಯದಲ್ಲಿ, ವೈಲ್ಡ್ ಕಾರ್ಡ್ ಪ್ರವೇಶ ಪಡೆದಿರುವ ಇಟಲಿಯ ಫ್ರಾಂಚೆಸ್ಕಾ ಚಿವೋನೆ ಮತ್ತು ಸ್ಪೇನ್ ಸಿಲ್ವಿಯಾ ಸೋಲರ್ ಎಸ್ಪಿನೋಸಾ ಜೋಡಿ ಅಥವಾ ತೈಪೇಯಸು ವೀ ಸೀ ಮತ್ತು ಚೀನಾದ ಶೂಯಿ ಪೆಂಗ್ ಜೋಡಿಯನ್ನು ಎದುರಿಸುವ ಸಾಧ್ಯತೆಗಳಿವೆ.