ಟ್ರೋಫಿಕ್ ಜಾಮ್
ಟೂರ್ ಡಿ ಫ್ರಾನ್ಸ್ ಚಾಂಪಿಯನ್ ಕ್ರಿಸ್ ಫೂಮ್ ಅವರು, ಇತ್ತೀಚೆಗೆ ಸ್ವಿಜ್ಜರ್ಲೆಂಡ್ನಲ್ಲಿ ನಡೆದ 18.5 ಕಿ.ಮೀ. ದೂರದ ಟೂರ್ ಡಿ ರೋಮಂಡೀ ಸೈಕ್ಲಿಂಗ್ ಚಾಂಪಿಯ್ಶಿಪ್ನಲ್ಲಿ ಮೊದಲ ಸ್ಥಾನ ಗಿಟ್ಟಿಸಿದಾಗ ಪ್ರಶಸ್ತಿಯೊಂದಿಗೆ ದೊರಕಿದ ಸಿಕ್ಕ ಡಬಲ್ ಕಿಸ್ ಹೀಗಿತ್ತು...
ಪ್ರೇಮಿಗಳು ಗೆದ್ದ ದಿನ
ಸೌಂದರ್ಯ ಮತ್ತು ಕೆಚ್ಚೆದೆಯ ಆಟದೊಂದಿಗೆ ಹೆಸರು ಮಾಡಿರುವ ಟೆನಿಸ್ ತಾರೆ ಮಾರಿಯಾ ಶರಪೋವಾ ಇತ್ತೀಚೆಗಷ್ಟೇ ಪೊರ್ಸೆ ಗ್ರಾನ್ ಪ್ರಿ ಗೆಲ್ಲುವ ಮೂಲಕ ಹ್ಯಾಟ್ರಿಕ್ ಸಾಧಿಸಿದರು. ವಿಷಯ ಅದಲ್ಲ, ಶರಪೋವಾ ಪೊರ್ಸೆ ಪ್ರಶಸ್ತಿ ಗೆದ್ದ ದಿನವೇ, ಅವರ ಪ್ರಿಯತಮ ಗ್ರಿಗೋರ್ ದಿಮಿತ್ರೋವ್ ಸಹ ಬಚಾರೆಸ್ಟ್ನ ಕ್ಲೇ ಕೋರ್ಟ್ನಲ್ಲಿ ನಡೆದ ನಾಸ್ತಾಸೆ ತಿರಿಯಾಕ್ ಟ್ರೋಫಿಯನ್ನು ಗೆದ್ದು ಅಚ್ಚರಿ ಮೂಡಿಸಿದರು.