ಕ್ರೀಡೆ

ಬಾಲೊಟೆಲ್ಲಿ ಫುಟ್‌ವೇರ್!

ಜನಪ್ರಿಯ ಕ್ರೀಡೆ ಫುಟ್ಬಾಲ್‌ನ ವಿಶ್ವದ ಪ್ರಮುಖ ಆಟಗಾರರಲ್ಲೊಬ್ಬರಾಗಿರುವ ಮಾರಿಯೋ ಬಾಲೊಟೆಲ್ಲಿ ಫುಟ್‌ವೇರ್ ಇಟ್ಟರೆ? ಅಚ್ಚರಿ ಬೇಡ. ನೋಡಲು ಕಪ್ಪಾದರೂ, ಕಾಲ್ಚೆಂಡಿನೊಂದಿಗೆ ತಮ್ಮದೇ ಮಿಂಚನ್ನು ಹರಿಸಿರುವ ಬಾಲೊಟೆಲ್ಲಿ ತಮ್ಮ ವಿಶಿಷ್ಠ ವಿನ್ಯಾಸದ ಹೇರ್‌ಸ್ಟೈಲ್‌ನೊಂದಿಗೂ ಅಭಿಮಾನಿಗಳ ಮನೆಮಾತಾಗಿದ್ದಾರೆ.
ಈ ಬಾಲೊಟೆಲ್ಲಿಗೆ ಶೂಗಳ ಬಗ್ಗೆ ಬಹುದೊಡ್ಡ ಮೋಹವಿದೆ. ಎ.ಸಿ ಮಿಲಾನ್ ತಂಡದ ಈ ತಾರೆ, ಸಂಗ್ರಹಿಸಿಟ್ಟಿರುವ ಶೂಗಳ ಭಾವಚಿತ್ರವನ್ನು ಇತ್ತೀಚೆಗೆ ಟ್ವಿಟ್ಟರ್‌ನಲ್ಲಿ ಹಾಕಿದ್ದರು. ಇಷ್ಟೇ ಅಲ್ಲ, ಬಾಲೊಟೆಲ್ಲಿ ಅವರು ಕಾರ್ ಬಗ್ಗೆಯೂ ಕ್ರೇಜ್ ಹೊಂದಿದ್ದಾರೆ. ಬಾಲೊಟೆಲ್ಲಿಯ ಐಷಾರಾಮಿ, ಬಣ್ಣಬಣ್ಣದ ಕಾರುಗಳ ಪ್ರದರ್ಶನವನ್ನು ಅವರ ಗರ್ಲ್‌ಫ್ರೆಂಡ್ ನಡೆಸಿಕೊಟ್ಟಿದ್ದರು.
23 ವರ್ಷದ ಫುಟ್ಬಾಲ್ ತಾರೆ ಕೆಲ ಬಾರಿ ಮೂಡಿ ಮತ್ತು ಖಿನ್ನತೆಗೊಳಗಾದಂತೆ ಕಂಡುಬರಬಹುದು. ಆದರೆ, ಬಣ್ಣಗಳ ಬಗ್ಗೆ ಅವರು ಹೊಂದಿರುವ ವಿಶೇಷ ಆಸಕ್ತಿ, ವಿನ್ಯಾಸದ ಬಗ್ಗೆ ಅಲ್ಲಿರುವ ಸೆಳೆತ ಸೇರಿದಂತೆ ಒಟ್ಟಾರೆ ಅವರು ಫುಟ್ಬಾಲ್ ಹೊರತುಪಡಿಸಿಯೂ ವಿಶೇಷ ಗುಣಗಳನ್ನು ಹೊಂದಿದ್ದಾರೆ ಎಂಬುದನ್ನು ಸಾಬೀತುಪಡಿಸುತ್ತವೆ.
ಆದರೆ, ಒಂದು ವಿಷಯ ಸ್ಪಷ್ಟ. ಮುಂದಿನ ವಿಶ್ವಕಪ್ ಫುಟ್ಬಾಲ್‌ಗೆ ತಯಾರಿ ನಡೆಸುತ್ತಿರುವ ಬಾಲೊಟೆಲ್ಲಿ ಸಂಗ್ರಹಿಸಿರುವ ಎಲ್ಲ ಮಾದರಿಯ ಶೂಗಳನ್ನು ಸೂಟ್‌ಕೇಸ್‌ನಲ್ಲಿ ಸೇರಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದು! ಆದರೆ, ಪ್ರಸಕ್ತ ಋತುವಿನಲ್ಲಿ ಇದುವರೆಗೂ ಆಡಿರುವ ಎಲ್ಲ ಪಂದ್ಯಗಳಲ್ಲೂ ಇಟಲಿಯ ಆಟಗಾರ ವೈಫಲ್ಯ ಕಂಡಿದ್ದಾರೆ. ಇದರೊಂದಿಗೆ ಮಿಲಾನ್ ತಂಡವೂ ಜಯದ ಹಾದಿ ಕಂಡುಕೊಳ್ಳಲು ಒದ್ದಾಡುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!