ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಅಂಪೈರ್ ಸಂಜಯ್ ಹಜಾರೆ ವಜಾ

Rashmi Kasaragodu
Updated On : 12 May 2014, 12:51 pm

ನವದೆಹಲಿ: ಪ್ರಸಕ್ತ ಐಪಿಎಲ್ನಲ್ಲಿ ತಪ್ಪುನಿರ್ಣಯ ಕೈಗೊಂಡ ಹಿನ್ನೆಲೆಯಲ್ಲಿ ಅಂಪೈರ್ ಸಂಜಯ್ ಹಜಾರೆ ಅವರನ್ನು ಐಪಿಎಲ್ ಅಂಪೈರ್ ಸಮಿತಿಯಿಂದ ವಜಾಗೊಳಸಲಾಗಿದೆ.
ಮೇ 3ರದು ನಡೆದ ಡೆಲ್ಲಿ ಮತ್ತು ರಾಜಸ್ಥಾನ ನಡುವಣ ಪಂದ್ಯದಲ್ಲಿ ಕೆವಿನ್ ಪೀಟರ್ಸನ್ ಅವರನ್ನು ರಾಜಸ್ಥಾನ ಆಟಗಾರರು ರನೌಟ್ ಮಾಡಿ ಔಟ್ಗಾಗಿ ಮನವಿ ಮಾಡಿದರು. ಆದರೆ ಅಂಪೈರ್ ಸಂಜಯ್ ಹಜಾರೆ ಈ ಮನವಿಯನ್ನು ಮೂರನೇ ಅಂಪೈರ್ ಜತೆಗೆ ಚರ್ಚಿಸದೇ ತಿರಸ್ಕರಿಸಿ ವಿವಾದಾತ್ಮಕ ನಿರ್ಧಾರ ಕೈಗೊಂಡಿದ್ದರು. ಆದರೆ ಈ ವೇಳೆ ಕೆವಿನ್ ಕ್ರೀಸ್ನಿಂದ ಹೊರಗುಳಿದಿದ್ದು, ವಿಡಿಯೋದಲ್ಲಿ ತಿಳಿದು ಬಂದಿತು.
ಈ ನಿರ್ಧಾರವನ್ನು ಪ್ರಕಟಿಸಿದ ಐಪಿಎಲ್ ಅಧ್ಯಕ್ಷ ರಂಜಿಬ್ ಬಿಸ್ವಾಲ್, 53 ವರ್ಷದ ಸಂಜಯ್ ಹಜಾರೆ ಅವರು ಟೂರ್ನಿಯಲ್ಲಿನ ಮುಂದಿನ ಯಾವುದೇ ಪಂದ್ಯಕ್ಕೂ ಅಂಪೈರಿಂಗ್ ಮಾಡುವುದಿಲ್ಲ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement