ಪಂಜಾಬ್ ಪರದಾಟ: ರೈಡರ್ಸ್ ನಲಿದಾಟ
ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಗಳು ಅದ್ಭುತ ಬ್ಯಾಟಿಂಗ್ ನಡೆಸುವ ಮೂಲಕ ಕೋಲ್ಕತಾ ನೈಟ್ ರೈಡರ್ಸ್ ತಂಡ ...
ಕಟಕ್: ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಗಳು ಅದ್ಭುತ ಬ್ಯಾಟಿಂಗ್ ನಡೆಸುವ ಮೂಲಕ ಕೋಲ್ಕತಾ ನೈಟ್ ರೈಡರ್ಸ್ ತಂಡ ಭಾನುವಾರ ಕಟಕ್ನ ಬಾರಾಬತಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಬಲಿಷ್ಠ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 9 ವಿಕೆಟ್ ಅಂತರದಿಂದ ವಿಜಯ ಸಾಧಿಸಿತು.
ಟಾಸ್ ಗೆದ್ದರೂ, ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಕೋಲ್ಕತಾ ನೈಟ್ ರೈಡರ್ಸ್ ತಂಡದ ನಾಯಕ ಗೌತಮ್ ಗಂಭೀರ್ ನಿರ್ಧಾರವನ್ನು ಸಮರ್ಥಿಸಿಕೊಂಡಂತೆ ಪ್ರದರ್ಶನ ನೀಡಿದ ತಂಡ, ಪಂಜಾಬ್ ತಂಡವನ್ನು 149 ರನ್ಗಳಿಗೆ ನಿಯಂತ್ರಿಸಿತು.
ನಂತರ 150 ರನ್ಗಳ ಗುರಿಯನ್ನು ಬೆನ್ನಟ್ಟಿದ ಕೋಲ್ಕತಾ, ಕೇವಲ 18 ಓವರ್ಗಳಲ್ಲಿ 1 ವಿಕೆಟ್ ಮಾತ್ರ ಕಳೆದುಕೊಂಡು 150 ರನ್ ಕಲೆ ಹಾಕುವ ಮೂಲಕ ಜಯದ ಅಲೆಯಲ್ಲಿ ತೇಲಿತು.
ಮಿಂಚಿದ ಅಗ್ರ ಕ್ರಮಾಂಕ: ಕೋಲ್ಕತಾದ ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಗಳಾದ ಗೌತಮ್ ಗಂಭೀರ್ (ಅಜೇಯ 63) ಅರ್ಧ ಶತಕ, ಅರ್ಧ ಶತಕದ ಹೊಸ್ತಿಲಲ್ಲಿ ಎಡವಿದ ರಾಬಿನ್ ಉತ್ತಪ್ಪ 46 ಹಾಗೂ ಮನೀಷ್ ಪಾಂಡೆ ತಂಡ ಸುಲಭವಾಗಿ ಜಯದ ದಡ ಸೇರುವಂತೆ ಮಾಡಿದರು.
ಆರಂಭಿಕರಾಗಿ ಅಂಗಣಕ್ಕಿಳಿದ ರಾಬಿನ್ ಉತ್ತಪ್ಪ ಮತ್ತು ಗೌತಮ್ ಗಂಭೀರ್ ಜತೆ ಆಕರ್ಷಕ ಜತೆಯಾಟದೊಂದಿಗೆ 68 ರನ್ ಕಲೆ ಹಾಕುತ್ತಿದ್ದಂತೆಯೇ, ಉತ್ತಪ್ಪ 7ನೇ ಓವರ್ ಕೊನೆಯ ಎಸೆತದಲ್ಲಿ ಪರ್ವಿಂದರ್ ಅವಾನಾ ಬೌಲಿಂಗ್ನಲ್ಲಿ ಅಕ್ಷರ್ ಪಟೇಲ್ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. ಕೇವಲ 28 ಎಸೆತಗಳನ್ನು ಎದುರಿಸಿದ ಉತ್ತಪ್ಪ ಮೊತ್ತದಲ್ಲಿ 1 ಸಿಕ್ಸರ್ ಮತ್ತು 8 ಬೌಂಡರಿಗಳು ಸೇರಿದ್ದವು. ನಂತರ ಬಂದ ಮನೀಷ್ ಪಾಂಡೆ (36) ಅವರು ನಾಯಕ ಗೌತಮ್ ಗಂಭೀರ್ ತಕ್ಕ ಸಾಥ್ ನೀಡಿದರು.
ಮುರಿಯದ ಎರಡನೇ ವಿಕೆಟ್ ಜತೆಯಾಟದಲ್ಲಿ ಈ ಇಬ್ಬರು 82 ರನ್ ಕಲೆ ಹಾಕಿದರು. 45 ಎಸೆತಗಳನ್ನು ಎದುರಿಸಿದ ನಾಯಕ ಗಂಭೀರ್ ಅರ್ಧ ಶತಕದಲ್ಲಿ 7 ಬೌಂಡರಿಗಳು ಸೇರಿದ್ದವು. ಪಂಜಾಬ್ ಪರ ಪರ್ವಿಂದರ್ ಆವಾನಾ ಮಾತ್ರ 1 ವಿಕೆಟ್ ಕಬಳಿಸಿದರು. ಉಳಿದವರು ವಿಕೆಟ್ ಪೆಡಯುವಲ್ಲಿ ವೈಫಲ್ಯ ಕಂಡರು.
ಸೆಹ್ವಾಗ್ ವ್ಯರ್ಥ ಹೋರಾಟ: ಮೊದಲು ಬ್ಯಾಟ್ ಮಾಡಿದಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರವಾಗಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ (72) ಬ್ಯಾಟ್ನೊಂದಿಗೆ ಆರ್ಭಟಿಸುವ ಮೂಲಕ ಆಕರ್ಷಕ ಅರ್ಧ ಶತಕ ಕಲೆ ಹಾಕಿದರು. ಆದರೆ, ಅವರು ಗಳಿಸಿದ ದೊಡ್ಡ ಮೊತ್ತ ತಂಡದ ಗೆಲವಿಗೆ ನೆರವಾಗಲಿಲ್ಲ. ಕಾರಣ ತಂಡದ ಇತರ ಭರವಸೆಯ ಬ್ಯಾಟ್ಸ್ಮನ್ಗಳಾದ ಗ್ಲೆನ್ ಮ್ಯಾಕ್ಸ್ವೆಲ್ (14) ಮತ್ತು ಡೇವಿಡ್ ಮಿಲ್ಲರ್ (13) ರನ್ ಕಲೆ ಹಾಕುವಲ್ಲಿ ಪರದಾಡಿದರು. ಹೀಗಾಗಿ, ಪಂಜಾಬ್ ದೊಡ್ಡ ಮೊತ್ತ ಕಲೆ ಹಾಕುವಲ್ಲಿ ವೈಫಲ್ಯ ಕಂಡಿತು.
ಕೋಲ್ಕತಾ ಪರ ಅದ್ಭುತ ಬೌಲಿಂಗ್ ಪ್ರದರ್ಶಿಸಿದ ಪಿಯುಶ್ ಚಾವ್ಲಾ ಕೇವಲ 19 ರನ್ ನೀಡಿ 3 ವಿಕೆಟ್ ಕಬಳಿಸಿದರು. ಮಾರ್ನ್ ಮಾರ್ಕೆಲ್ 2 ವಿಕೆಟ್ ಪಡೆದರೆ, ಉಮೇಶ್ ಯಾದವ್ ಮತ್ತು ಸುನಿಲ್ ನಾರಾಯಣ ತಲಾ 1 ವಿಕೆಟ್ ಪಡೆದರು.
ಕೋಲ್ಕತಾ ತಂಡದ ಜಯದ ರೂವಾರಿ ಎನಿಸಿದ ನಾಯಕ ಗೌತಮ್ ಗಂಭೀರ್ ಅವರು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಸ್ಕೋರ್ ವಿವರ
ಕಿಂಗ್ಸ್ ಇಲೆವೆನ್ ಪಂಜಾಬ್ 20 ಓವರ್ಗಳಲ್ಲಿ 8 ವಿಕೆಟ್ಗೆ 149
ವೀರೇಂದ್ರ ಸೆಹ್ವಾಗ್ ಬಿ ಚಾವ್ಲಾ 46 (28), ಮಂದೀಪ್ ಸಿಂಗ್ ಸಿ ಉತ್ತಪ್ಪ ಬಿ ಮಾರ್ಕೆಲ್ 0 (3), ವೃದ್ಧಿಮಾನ್ ಸಾಹಾ ಬಿ ಮಾರ್ಕೆಲ್ 15 (9), ಗ್ಲೆನ್ ಮ್ಯಾಕ್ಸ್ವೆಲ್ ಸಿ ಮಾರ್ಕೆಲ್ ಬಿ ಚಾವ್ಲಾ 14 (14), ಡೆವಿಡ್ ಮಿಲ್ಲರ್ ಬಿ ಉಮೇಶ್ ಯಾದವ್ 13 (14), ಜಾರ್ಜ್ ಬೇಯ್ಲಿ ಅಜೇಯ 12 (11), ರಿಶಿ ಧವನ್ ಬಿ ಚಾವ್ಲಾ 4 (6), ಮಿಚೆಲ್ ಜಾನ್ಸನ್ ಸ್ಟಂಪ್ ಉತ್ತಪ್ಪ ಬಿ ನಾರಾಯಣ 14 (12), ಅಕ್ಷರ್ ಪಟೇಲ್ (ರನೌಟ್ ಸೂರ್ಯಕುಮಾರ್/ಉತ್ತಪ್ಪ) 1 (1)
ಇತರೆ: (ಬೈಸ್-1, ಎಲ್ಬಿ-1, ವೈಡ್-2)
ವಿಕೆಟ್ ಪತನ: 1-17, 2-48, 3-87, 4-112, 5-120, 6-127, 7-148, 8-149.
ಬೌಲಿಂಗ್ ವಿವರ: ಜಾಕ್ ಕಾಲಿಸ್ 3-0-38-0, ಮಾರ್ನ್ ಮಾರ್ಕೆಲ್ 4-0-20-2, ಉಮೇಶ್ ಯಾದವ್ 4-0-34-1, ಸುನಿಲ್ ನಾರಾಯಣ 4-0-30-1, ಪಿಯುಶ್ ಚಾವ್ಲಾ 4-0-19-3, ರೆಯಾನ್ ಟೆನ್ ಡಯಾಶೆಟ್ 1-0-6-0
ಕೋಲ್ಕತಾ ನೈಟ್ ರೈಡರ್ಸ್ 18 ಓವರ್ಗಳಲ್ಲಿ 1 ವಿಕೆಟ್ಗೆ 150
ರಾಬಿನ್ ಉತ್ತಪ್ಪ ಸಿ ಪಟೇಲ್ ಬಿ ಅವಾನಾ 46 (28), ಗೌತಮ್ ಗಂಭೀರ್ ಅಜೇಯ 63, ಮನೀಷ್ ಪಾಂಡೆ ಅಜೇಯ 36
ಇತರೆ: (ಲೆಗ್ ಬೈಸ್-2, ವೈಡ್-3) 5
ವಿಕೆಟ್ ಪತನ: 1-68.
ಬೌಲಿಂಗ್ ವಿವರ: ಸಂದೀಪ್ ಶರ್ಮಾ 4-0-32-0, ಮಿಚೆಲ್ ಜಾನ್ಸನ್ 3-0-33-0, ಅಕ್ಷರ್ ಪಟೇಲ್ 4-0-20-0, ಪರ್ವಿಂದರ್ ಅವಾನಾ 2-0-20-1, ರಿಶಿ ಧವನ್ 4-0-32-0, ಗ್ಲೆನ್ ಮ್ಯಾಕ್ಸ್ವೆಲ್ 1-0-11-0