ಕಾರ್ಮಿಕನ ಸಾವು: ಫುಟ್ಬಾಲ್ ವಿಶ್ವಕಪ್ ಸ್ಟೇಡಿಯಂ ನಿರ್ಮಾಣ ಸ್ಥಗಿತ
ರಿಯೋ ಡಿ ಜನೈರೋ: ಫುಟ್ಬಾಲ್ ವಿಶ್ವಕಪ್ಗೆ ಕೇವಲ ಒಂದು ತಿಂಗಳು ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ ಸಂಭ್ರಮದಲ್ಲಿರಬೇಕಾಗಿದ್ದ ಪಂದ್ಯಾವಳಿಯ ಸಂಘಟಕರಿಗೆ ಮತ್ತೊಂದು ವಿಘ್ನ ಎದುರಾಗಿದೆ. ಕಾರಣ ಕ್ಯೂಬಾದಲ್ಲಿ ನಿರ್ಮಾಣವಾಗುತ್ತಿರುವ ಅರೆನಾ ಪಂಟನಲ್ ಕ್ರೀಡಾಂಗಣದಲ್ಲಿ ಕಾರ್ಮಿನೊಬ್ಬ ಮೃತಪಟ್ಟ ಕಾರಣ ಕ್ರೀಡಾಂಗಣದ ಅಭಿವೃದ್ಧಿ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ. ಕಾರ್ಮಿಕನ ಮರಣದ ಹಿನ್ನೆಲೆಯಲ್ಲಿ ತನಿಖೆಯನ್ನು ಆರಂಭಿಸಲಾಗಿತ್ತು. ವಿದ್ಯುತ್ ಸ್ಪರ್ಶದಿಂದ ಕಾರ್ಮಿಕ ಮೃತಪಟ್ಟಿರುವುದು ತಿಳಿದು ಬಂದಿದೆ. ಸ್ಟೇಡಿಯಂನಲ್ಲಿ ಲೈಟ್ಗಳನ್ನು ಹಾಕುತ್ತಿದ್ದಾಗ ಕಾರ್ಮಿಕ ಮೃತಪಟ್ಟಿರುವುದಾಗಿ ತನಿಖೆಯಿಂದ ತಿಳಿದು ಬಂದಿದೆ. ಸೂಕ್ತ ಕ್ರಮಗಳನ್ನು ಪಾಲಿಸದಿರುವುದೇ ಅವಘಡಕ್ಕೆ ಕಾರಣ ಎನ್ನಲಾಗಿದೆ. ಘಟನೆಯಿಂದ, ನಿಗದಿತ ಸಮಯದಲ್ಲಿ ಬ್ರೆಜಿಲ್ನ ಎಲ್ಲ ಕ್ರೀಡಾಂಗಣಗಳು ಸಿದ್ಧವಾಗತ್ತವೆ ಅಥವಾ ಇಲ್ಲ ಎನ್ನುವ ಅನುಮಾನ ಉಂಟುಮಾಡಿದೆ.
ವಿಶ್ವಾಸದಲ್ಲಿ ಹಾಲಿ ಚಾಂಪಿಯನ್: ಬ್ರೆಜಿಲ್ನಲ್ಲಿ ನಡೆಯಲಿರುವ ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಯಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಹಾಲಿ ಚಾಂಪಿಯನ್ ಸ್ಪೇನ್ ತಂಡ ಎದುರು ನೋಡುತ್ತಿದೆ.
ಒಂದು ವೇಳೆ ಸ್ಪೇನ್ ಈ ಬಾರಿ ಪ್ರಶಸ್ತಿ ಗೆದ್ದುಕೊಂಡರೆ, 1958-59ರಲ್ಲಿ ಬ್ರೆಜಿಲ್ ಸತತ ಎರಡು ಬಾರಿ ಪ್ರಶಸ್ತಿ ಗೆದ್ದುಕೊಂಡ ನಂತರ, ಇದೇ ಮೊದಲ ಬಾರಿಗೆ ತಂಡವೊಂದು ಸತತ ಎರಡು ಬಾರಿ ಪ್ರಶಸ್ತಿ ಗೆದ್ದುಕೊಂಡಂತಾಗುತ್ತದೆ.