ಮುಂಬೈ ಮುಂದೆ ಸನ್ ಮಂಕು
ಹೈದರಾಬಾದ್: ಆರಂಭಿಕ ಲೆಂಡ್ಲ್ ಸಿಮನ್ಸ್ (68) ಹಾಗೂ ಅಂಬಟಿ ರಾಯುಡು (68) ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ 7ನೇ ಆವೃತ್ತಿಯ ಸೋಮವಾರದ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 7 ವಿಕೆಟ್ಗಳ ಗೆಲವು ದಾಖಲಿಸಿದೆ.
ಟಾಸ್ ಗೆದ್ದ ಸನ್ರೈಸರ್ಸ್ ಹೈದರಾಬಾದ್ ತಂಡ 20 ಓವರ್ಗಳಲ್ಲಿ 3 ವಿಕೆಟ್ಗೆ 157 ರನ್ ಕಲೆ ಹಾಕಿತು. ಈ ಮೊತ್ತವನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡ 18.4 ಓವರ್ಗಳಲ್ಲಿ 3 ವಿಕೆಟ್ಗೆ 160 ರನ್ ಕಲೆ ಹಾಕಿತು. ಈ ಗೆಲವಿನೊಂದಿಗೆ ಮುಂಬೈ ತಂಡ ಪ್ಲೇ ಆಫ್ ಸುತ್ತಿಗೆ ಪ್ರವೇಶಿಸುವ ತನ್ನ ಹೋರಾಟವನ್ನು ಮುಂದುವರಿಸಿದೆ.
ಮಂದಗತಿಯ ಬ್ಯಾಟಿಂಗ್: ಮೊದಲು ಬ್ಯಾಟಿಂಗ್ ನಡೆಸುವ ನಿರ್ಧಾರಕ್ಕೆ ಬಂದ ಸನ್ರೈಸರ್ಸ್ ತಂಡ ನಿರೀಕ್ಷಿತ ವೇಗದಲ್ಲಿ ರನ್ ಗಳಿಸಲಿಲ್ಲ. ಆರಂಭಿಕರಾಗಿ ಕಣಕ್ಕಿಳಿದ ಶಿಖರ್ ಧವನ್ ಹಾಗೂ ಎರಾನ್ ಫಿಂಚ್ ತಂಡಕ್ಕೆ 31 ರನ್ಗಳ ಆರಂಭ ನೀಡಿದರು.
ಮತ್ತೊಮ್ಮೆ ಸಾಮರ್ಥ್ಯಕ್ಕೆ ತಕ್ಕ ರೀತಿಯಲ್ಲಿ ರನ್ ಗಳಿಸಲು ವಿಫಲರಾದ ಧವನ್ (11) ಬೇಗನೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಕೆ.ಎಲ್ ರಾಹುಲ್ (10) ರನೌಟ್ ಆಗಿದ್ದು, ತಂಡದಲ್ಲಿ ಆತಂಕ ಮೂಡುವಂತೆ ಮಾಡಿತು.
ಈ ವೇಳೆ ಜತೆಯಾದ ಫಿಂಚ್ (68 ರನ್, 62 ಎಸೆತ, 7 ಬೌಂಡರಿ, 2 ಸಿಕ್ಸರ್) ಹಾಗೂ ಡೇವಿಡ್ ವಾರ್ನರ್ (ಅಜೇಯ 55 ರನ್, 31 ಎಸೆತ, 6 ಬೌಂಡರಿ, 2 ಸಿಕ್ಸರ್), ಜವಾಬ್ದಾರಿಯುತ ಬ್ಯಾಟಿಂಗ್ನಿಂದ ತಂಡಕ್ಕೆ63 ರನ್ಗಳ ಜತೆಯಾಟ ನೀಡಿದರು. ನಂತರ ಅಂತಿಮ 5 ಓವರ್ಗಳಲ್ಲಿ ದೊಡ್ಡ ಹೊಡೆತಗಳಿಗೆ ಮುಂದಾಗುವ ಮೂಲಕ ತಂಡ 150 ರನ್ ಗಡಿ ದಾಟಲು ಸಾಧ್ಯವಾಯಿತು.
ಭರ್ಜರಿ ಜತೆಯಾಟ: ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡ ಆರಂಭದಲ್ಲಿ ಗೌತಮ್ ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಈ ವೇಳೆ ತಂಡಕ್ಕೆ ನೆರವಾಗಿದ್ದು ಲೆಂಡ್ಲ್ ಸಿಮನ್ಸ್ ಹಾಗೂ ಅಂಬಟಿ ರಾಯುಡು. ಈ ಜೋಡಿ 2ನೇ ವಿಕೆಟ್ಗೆ 130 ರನ್ ದಾಖಲಿಸುವ ಮೂಲಕ ತಂಡ ಸಂಪೂರ್ಣ ನಿಯಂತ್ರಣ ಸಾಧಿಸುವಂತೆ ಮಾಡಿತು. ಸಿಮನ್ಸ್ (68 ರನ್, 50 ಎಸೆತ, 5 ಬೌಂಡರಿ, 4 ಸಿಕ್ಸರ್) ಹಾಗೂ ಅಂಬಟಿ ರಾಯುಡು (68 ರನ್, 46 ಎಸೆತ, 7 ಬೌಂಡರಿ, 2 ಸಿಕ್ಸರ್) ಅರ್ಧ ಶತಕ ತಮ್ಮ ಜವಾಬ್ದಾರಿ ನಿರ್ವಹಿಸಿ ಪೆವಿಲಿಯನ್ ಸೇರಿಕೊಂಡರು. ಅಂತಿಮವಾಗಿ ರೋಹಿತ್ (14) ಹಾಗೂ ಪೊಲಾರ್ಡ್ (6) ಅಜೇಯರಾಗುಳಿದರು.
ಸ್ಕೋರ್ ವಿವರ
ಸನ್ರೈಸರ್ಸ್ 20 ಓವರ್ಗಳಲಿ 3 ವಿಕೆಟ್ಗೆ 157
ಎರಾನ್ ಫಿಂಚ್ ಸಿ ಪೊಲಾರ್ಡ್ ಬಿ ಮಾಲಿಂಗ 68, ಶಿಖರ್ ಧವನ್ ಬಿ ಮಾಲಿಂಗ 11, ಕೆ.ಎಲ್ ರಾಹುಲ್ ರನೌಟ್ (ರೋಹಿತ್/ಗೌತಮ್) 10, ಡೇವಿಡ್ ವಾರ್ನರ್ ಅಜೇಯ 55, ನಮನ್ ಓಜಾ ಅಜೇಯ 7
ಇತರೆ: (ಲೆಗ್ ಬೈ 1, ವೈಡ್ 5) ಒಟ್ಟು 6
ವಿಕೆಟ್ ಪತನ: 1-31, 2-70, 3-133
ಬೌಲಿಂಗ್ ವಿವರ
ಕೊರೆ ಆ್ಯಂಡರ್ಸನ್ 2-0-17-0, ಜಸ್ಪ್ರೀತ್ ಬುಮ್ರಾ 4-0-24-0, ಹರ್ಭಜನ್ ಸಿಂಗ್ 4-0-27-0, ಲಸಿತ್ ಮಾಲಿಂಗ 4-0-35-2, ಪ್ರಗ್ಯಾನ್ ಓಜಾ 4-0-32-0, ಕೀರನ್ ಪೊಲಾರ್ಡ್ 2-0-21-0
ಮುಂಬೈ 18.4 ಓವರ್ಗಳಲ್ಲಿ 3 ವಿಕೆಟ್ಗೆ 160
ಲೆಂಡ್ಲ್ ಸಿಮನ್ಸ್ ಬಿ ಭುವನೇಶ್ವರ್ 68, ಗೌತಮ್ ಸಿ ಧವನ್ ಬಿ ಕುಮಾರ್ 1, ಅಂಬಟಿ ರಾಯುಡು ಸಿ ಮತ್ತು ಬಿ ಹೆನ್ರಿಕ್ಸ್ 68, ರೋಹಿತ್ ಅಜೇಯ 14, ಪೊಲಾರ್ಡ್ ಅಜೇಯ 6
ಇತರೆ: (ವೈಡ್ 3) ಒಟ್ಟು 3
ವಿಕೆಟ್ ಪತನ: 1-2, 2-132, 3-141
ಬೌಲಿಂಗ್ ವಿವರ
ಡೇಲ್ ಸ್ಟೇಯ್ನ್ 4-0-29-0, ಭುವನೇಶ್ವರ್ ಕುಮಾರ್ 4-0-21-2, ಇರ್ಫಾನ್ ಪಠಾಣ್ 2-0-29-0, ಅಮಿತ್ ಮಿಶ್ರಾ 3-0-33-0, ಕರಣ್ ಶರ್ಮಾ 2.4-0-25-0, ಮೊಯ್ಸಿಸ್ ಹೆನ್ರಿಕ್ಸ್ 3-0-23-1
ಪಂದ್ಯಶ್ರೇಷ್ಠ: ಅಂಬಟಿ ರಾಯುಡು