ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಅರ್ಜೆಂಟೀನಾ ಪುಂಡರನ್ನು ದೂರವಿಡಲು ಬ್ರೆಜಿಲ್ ಶಪಥ

Rashmi Kasaragodu
Updated On : 14 May 2014, 12:47 pm

ರಿಯೋ ಡಿ ಜನೈರೋ: ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಗೆ ಅಡ್ಡಿಪಡಿಸುವ ಪುಂಡರನ್ನು ಹೊರಗಿಡಲು ಆತಿಥೇಯ ಬ್ರೆಜಿಲ್ ಶಪಥ ಮಾಡಿದೆ. ವಿಶೇಷವಾಗಿ ಅರ್ಜೆಂಟೀನಾ ಅಭಿಮಾನಿಗಳ ಬಗ್ಗೆ ಅದು ಕಳವಳ ವ್ಯಕ್ತಪಡಿಸಿದೆ.
'ಬ್ರೆಜಿಲ್ನಲ್ಲಿ ನಡೆಯಲಿರುವ ವಿಶ್ವಕಪ್ ಪಂದ್ಯಾವಳಿಯಲ್ಲಿ ಹಿಂಸೆ ನಡೆಸಲು ನಾವು ಅವಕಾಶ ನೀಡುವುದಿಲ್ಲ' ಎಂದು ಜೂನ್ 12ರಿಂದ ಆರಂಭವಾಗಲಿರುವ ಅರ್ಜೆಂಟೀನಾದ ಕುಖ್ಯಾತ ಅಭಿಮಾನಿಗಳು ಪಂದ್ಯಾವಳಿಗೆ ಆಗಮಿಸುತ್ತಿದ್ದಾರೆ ಎಂಬ ವರದಿ ಬಗ್ಗೆ ಬ್ರೆಜಿಲ್ ಕ್ರೀಡಾ ಸಚಿವ ಆಲ್ಡೋ ರೆಬೆಲೋ ಅವರು ಪ್ರತಿಕ್ರಿಯಿಸಿದ್ದಾರೆ.'ಪುಂಡಾಟಿಕೆ ನಡೆಸುವ ಅಭಿಮಾನಿಗಳನ್ನು ನಿಯಂತ್ರಿಸಲು ಅಂತಾರಾಷ್ಟ್ರೀಯ ಪೊಲೀಸರೊಂದಿಗೆ ನಾವು ಸಂಪರ್ಕದಲ್ಲಿದ್ದೇವೆ. ಬ್ರೆಜಿಲ್ನಲ್ಲಿ ಅರ್ಜೆಂಟೀನಾ ಪುಂಡರು ಪುಂಡಾಟಿಕೆ ನಡೆಸುವುದನ್ನು ಸಹಿಸಲು ಸಾಧ್ಯವಿಲ್ಲ' ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement