ಆಡ್ವಾಣಿ, ಅರುಣ್ ಸೆಮಿಫೈನಲ್ಗೆ
ಮುಂಬೈ: ಮಾಜಿ ರಾಷ್ಟ್ರೀಯ ಚಾಂಪಿಯನ್ ಅಲೋಕ್ ಕುಮಾರ್ ಅವರನ್ನು ಸೋಲಿಸಿದ ಅರುಣ್ ಅಗರ್ವಾಲ್ ಮತ್ತು ಪ್ರಶಸ್ತಿ ಫೇವರಿಟ್ ಆಟಗಾರ ಪಂಕಜ್ ಆಡ್ವಾಣಿ ಅವರು ಸಿಸಿಐ ಕ್ಲಾಸಿಕ್ ಬಿಲಿಯರ್ಡ್ಸ್ ಮತ್ತು ಸ್ನೂಕರ್ ಪಂದ್ಯಾವಳಿಯ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಅಗರ್ವಾಲ್ ಅವರಿಗೆ ಇದು ಹಿನ್ನಡೆಯ ದಿನವಾಗಿತ್ತು. ಆದರೆ, ಇನ್ನೊಂದು ಕ್ವಾರ್ಟರ್ಫೈನಲ್ ಪಂದ್ಯದಲ್ಲಿ 8 ಬಾರಿ ವಿಶ್ವ ಚಾಂಪಿಯನ್ ಆಡ್ವಾಣಿ ಅವರು, ವಿಶ್ವ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ ಗೆದ್ದ ದೇವೇಂದ್ರ ಜೋಶಿ ಅವರನ್ನು ಹೆಚ್ಚಿನ ಅಂತರದಿಂದ ಸೋಲಿಸುವ ಮೂಲಕ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಇನ್ನು ಆಡ್ವಾಣಿ ಅವರು, ರಾಷ್ಟ್ರೀಯ ಚಾಂಪಿಯನ್ ಸೌರವ್ ಕಠಾರಿ ವಿರುದ್ಧ ಅದ್ಭುತ ಪ್ರದರ್ಶನ ನೀಡಿದರು. ಇದರೊಂದಿಗೆ ಅಂತಿಮ ನಾಲ್ಕರ ಘಟ್ಟದಲ್ಲಿ ಸ್ಥಾನ ಪಡೆಯುವಲ್ಲಿ ಆಡ್ವಾಣಿ ಯಶಸ್ವಿಯಾದರು. ಈಗ ಸೆಮಿಫೈನಲ್ ಪಂದ್ಯದಲ್ಲಿ ಮಾಜಿ ವಿಶ್ವ ಚಾಂಪಿಯನ್ ರೂಪೇಶ್ ಶಾ ಅವರೊಂದಿಗೆ ಹೋರಾಟ ನಡೆಸಲಿದ್ದಾರೆ. ಇನ್ನು ಅಗರ್ವಾಲ್ ಅವರು ವಿಶ್ವ ಚಾಂಪಿಯನ್ಶಿಪ್ನಲ್ಲಿ ಎರಡು ಬಾರಿ ರನ್ನರ್ ಅಪ್ ಆಗಿರುವ ಧೃವ ಸಿತ್ವಾಲ್ ಅವರನ್ನು ಎದುರಿಸಲಿದ್ದಾರೆ. ಕ್ವಾರ್ಟರ್ಫೈನಲ್ ಫಲಿತಾಂಶ: ರೂಪೇಶ್ ಶಾಗೆ (ಪಿಎಸ್ಪಿಬಿ) ಅಶೋಕ್ ಶ್ಯಾಂಡಿಲ್ಯ (ರೇಲ್ವೆ) ವಿರುದ್ಧ 607(186)-288 ಅಂಕಗಳಿಂದ ಜಯ. ಸೌರವ್ ಕೋಠಾರಿ ಅವರನ್ನು 619(187)-376 ಅಂಕಗಳಿಂದ ಸೋಲಿಸಿದ ಧೃವ ಸಿತ್ವಾಲ್. ಅಲೋಕ್ ಕುಮಾರ್ ಅವರನ್ನು 668(86,138)-539 ಅಂಕಗಳಿಂದ ಸೋಲಿಸಿದ ಅರುಣ್ ಅಗರ್ವಾಲ್. ದೇವೇಂದ್ರ ಜೋಶಿ ಅವರನ್ನು 1046(92,530)-368(112) ಅಂಕಗಳಿಂದ ಸೋಲಿಸಿದ ಪಂಕಜ್ ಆಡ್ವಾಣಿ.
ಪ್ರಿ ಕ್ವಾರ್ಟರ್ಫೈನಲ್ ಫಲಿತಾಂಶ: ಕೆ. ವೆಂಕಟೇಶಮ್ ಅವರನ್ನು 594(104)-405 ಅಂಕಗಳಿಂದ ಸೋಲಿಸಿದ ಅಲೋಕ್ ಕುಮಾರ್. ಡಾ. ರಾಜ್ಕುಮಾರ್ ಅವರನ್ನು 505(100)-387 ಅಂಕಗಳಿಂದ ಸೋಲಿಸಿದ ಅಶೋಕ್ ಶ್ಯಾಂಡಿಲ್ಯ. ಐ.ಎಚ್ ಮಾನುದೇವ್ ಅವರನ್ನು 988(120-121,247,113)-461 ಅಂಕಗಳಿಂದ ಪರಾಭವಗೊಳಿಸಿದ ಪಂಕಜ್ ಆಡ್ವಾಣಿ. ಸಿದ್ಧಾರ್ಥ್ ಪರಿಖ್ ಅವರನ್ನು 587-438 ಅಂಕಗಳಿಂದ ಪರಾಭವಗೊಳಿಸಿದ ಅರುಣ್ ಅಗರ್ವಾಲ್. ಮಲ್ಕೀತ್ ಸಿಂಗ್ ಅವರನ್ನು 778-316 ಅಂಕಗಳಿಂದ ಸೋಲಿಸಿದ ದೇವೇಂದ್ರ ಜೋಶಿ. ಆದಿತ್ಯ ಅಗರ್ವಾಲ್ ಅವರನ್ನು 712(99,100,98,112)-308 ಅಂಕಗಳಿಂದ ಪರಾಭವಗೊಳಿಸಿದ ರೂಪೇಶ್ ಶಾ. ಜೈವೀರ್ ಧಿಂಗ್ರಾ ಅವರನ್ನು 871(151,164,105,168)-235 ಅಂಕಗಳಿಂದ ಸೋಲಿಸಿದ ಸೌರವ್ ಕೋಠಾರಿ. ನಳಿನ್ ಪಟೇಲ್ ಅವರನ್ನು 540(249)-326 ಸೋಲಿಸಿದ ಧೃವ ಸಿತ್ವಾಲ್.