ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಆರ್ಸಿಬಿ-ಡೆವಿಲ್ಸ್ ಪಂದ್ಯಕ್ಕೆ ಮಳೆ ಅಡ್ಡಿ

Rashmi Kasaragodu
Updated On : 14 May 2014, 12:44 pm

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಡೇರ್ಡೆವಿಲ್ಸ್ ತಂಡಗಳ ನಡುವಿನ ಐಪಿಎಲ್ ಟಿ-20 ಕ್ರಿಕೆಟ್ ಟೂರ್ನಿಯ ಬುಧವಾರದ ಪಂದ್ಯ ಮಳೆಯಿಂದಾಗಿ ತಡವಾಗಿ ಆರಂಭವಾಗಿದೆ.
ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದ ಆರಂಭಕ್ಕೆ ಒಂದು ಗಂಟೆ ಇರುವಾಗಲೇ ತುಂತುರು ಮಳೆ ಬೀಳಲಾರಂಭಿಸಿತು.  ಹಾಗಾಗಿ, ನಿಗದಿತ ಸಮಯಕ್ಕೆ ಟಾಸ್ ಸಾಧ್ಯವಾಗಲಿಲ್ಲ. ಆದರೆ, ಮಳೆ ಬೇಗನೆ ನಿಂತ ಪರಿಣಾಮ 50 ನಿಮಿಷಗಳ ನಂತರ ಟಾಸ್ ಸಾಧ್ಯವಾಯಿತು.ಡೆಲ್ಲಿ ಡೇರ್ಡೆವಿಲ್ಸ್ ತಂಡದ ನಾಯಕ ಕೆವಿನ್ ಪೀಟರ್ಸನ್ ಟಾಸ್ ಗೆದ್ದು ಕ್ಷೇತ್ರರಕ್ಷಣೆ ಆಯ್ದುಕೊಂಡರು.
ಈ ಮಧ್ಯೆ ಪಂದ್ಯ ಆರಂಭಕ್ಕೆ ಮುನ್ನ ಬಿದ್ದ ಮಳೆಯಿಂದ ಪಿಚ್ ಅನ್ನು ರಕ್ಷಿಸಲು ಹೊದಿಕೆಯನ್ನು ಹಾಕಲಾಗಿತ್ತು. ಮೈದಾನದ ಬಹುತೇಕ ಭಾಗವನ್ನು ಹೊದಿಕೆಯಿಂದ ಮುಚ್ಚಲಾಗಿತ್ತು. ಹಾಗಾಗಿ, ಮಳೆ ಬೇಗನೆ ನಿಂತ ಪರಿಣಾಮ ಮೈದಾನವನ್ನು ಕೂಡಲೇ ಒಣಗಿಸಿ ಆಟ ಆರಂಭಕ್ಕೆ ಅನುಕೂಲ ಮಾಡಿಕೊಡಲಾಯಿತು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement