ಕೊಹ್ಲಿಗೆ ಟ್ವೀಟರ್ನಲ್ಲಿ 31ಲಕ್ಷ ಫಾಲೋವರ್ಗಳು
ಐಪಿಎಲ್ನಲ್ಲಿ ಈ ಬಾರಿ ವಿರಾಟ್ ಕೊಹ್ಲಿ ಅವರ ಬ್ಯಾಟ್ನಿಂದ ರನ್ಗಳು ಹೊರ ಹೊಮ್ಮುತ್ತಿಲ್ಲ. ಆದರೆ...
ನವದೆಹಲಿ: ಐಪಿಎಲ್ನಲ್ಲಿ ಈ ಬಾರಿ ವಿರಾಟ್ ಕೊಹ್ಲಿ ಅವರ ಬ್ಯಾಟ್ನಿಂದ ರನ್ಗಳು ಹೊರ ಹೊಮ್ಮುತ್ತಿಲ್ಲ. ಆದರೆ, ಸಾಮಾಜಿ ಜಾಲ ತಾಣಗಳಲ್ಲಿ ಕೊಹ್ಲಿ ಜನಪ್ರೀಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಾ ಸಾಗುತ್ತಿದೆ.ಕೊಹ್ಲಿ ಅವರು ಈಗ ಟ್ವೀಟರ್ನಲ್ಲಿ 31 ಲಕ್ಷ ಫಾಲೋವರ್ಗಳನ್ನು ಹೊಂದಿದ್ದಾರೆ. ಆದರೆ, ಐಪಿಎಲ್ನಲ್ಲಿ ಇದುವರೆಗೂ ಆಡಿದ 9 ಇನಿಂಗ್ಸ್ಗಳಿಂದ ಕೇವಲ 144 ರನ್ ಮಾತ್ರ ಗಳಿಸಿದ್ದಾರೆ. ಅಲ್ಲದೆ, ಕಳೆದ ತಿಂಗಳು ಫೇಸ್ಬುಕ್ನಲ್ಲಿ ಕೊಹ್ಲಿ ಅವರು 1 ಕೋಟಿಗೂ ಅಧಿಕ ಅಭಿಮಾನಿಗಳನ್ನು ಹೊದಿದ್ದಾರಂತೆ. 3ನೇ ವಾರ ನಡೆಯುತ್ತಿರುವ ಐಪಿಎಲ್ ಪಂದ್ಯಾವಳಿಯಲ್ಲಿ ಕೊಹ್ಲಿ ಅತಿ ಜನಪ್ರೀಯ ಆಟಗಾರ ಎನಿಸಿದ್ದಾರೆ.