ನಾಕೌಟ್ ಹಂತಕ್ಕೆಕೀರತ್ ಭಂದಾಲಾ
ಅಲ್ ಫುಜೈರಹ್: ಐಬಿಎಸ್ಎಫ್ ವಿಶ್ವ 21 ವರ್ಷದೊಳಗಿನ ಸ್ನೂಕರ್ ಚಾಂಪಿಯನ್ಶಿಪ್ನಲ್ಲಿ ಭಾರತದ ಯುವ ಆಟಗಾರ ಕೀರತ್ ಭಂದಾಲಾ ತಮ್ಮ ಎದುರಾಳಿ ಸಾನಿಯಾ ಅರಿಫ್ ವಿರುದ್ಧ ಗೆಲವು ದಾಖಲಿಸಿದ್ದು, ನಾಕೌಟ್ ಹಂತಕ್ಕೆ ಪ್ರವೇಶಿಸಿದ್ದಾರೆ.
ಎ ಗುಂಪಿನ ಪಂದ್ಯದಲ್ಲಿ ಕೇವಲ ಒಂದು ಗೆಲವು ಸಾಧಿಸಿದರಾದರೂ, ಕೀರತ್ ಮೂರನೇ ಸ್ಥಾನ ಪಡೆಯುವ ಮೂಲಕ ನಾಕೌಟ್ ಹಂತಕ್ಕೆ ಪ್ರವೇಶಿಸಿದ್ದಾರೆ. ಸೋಮವಾರ ನಡೆದ ಬಾಲಕಿಯರ ವಿಭಾಗದ ಪಂದ್ಯದಲ್ಲಿ ಸಾನಿಯಾ ಅರಿಫ್ ವಿರುದ್ಧ ಅತ್ಯುತ್ತಮ ಪ್ರದರ್ಶನ ತೋರಿದ ಕೀರತ್, 3-0 ಅಂತರದಲ್ಲಿ ಗೆಲವು ದಾಖಲಿಸಿದರು. ಈ ಮೂಲಕ ಥೈಲ್ಯಾಂಡ್ನ ಶ್ರೀಪಪೊರ್ನ್, ರಷ್ಯಾದ ರಷ್ಯಾದ ಅನಾಸ್ಟಾ ನಚಾವಾ ನಂತರದ ಸ್ಥಾನ ಪಡೆದಿದ್ದಾರೆ. ಇನ್ನು ಬಾಲಕರ ವಿಭಾಗದಲ್ಲಿ ಧ್ವಜ ಹರಿಯಾ ಮೂರೂ ಪಂದ್ಯಗಳಲ್ಲೂ ಗೆಲವು ದಾಖಲಿಸಿದ್ದು, ಅಗ್ರಸ್ಥಾನ ಪಡೆದಿದ್ದಾರೆ. ಇನ್ನು ಮತ್ತೊಬ್ಬ ಆಟಗಾರ ಆಶುತೋಶ್ ಫ್ಯಾಡಿ ಹಾಗೂ ಸಹಿಲ್ ನಾಯರ್ 2 ಗೆಲವು ದಾಖಲಿಸಿ, ನಾಕೌಟ್ ಹಂತಕ್ಕೇರಿದ್ದಾರೆ.