ಭಾರತ ಶ್ರೇಷ್ಠ ತಂಡಗಳಲ್ಲಿ ಒಂದು: ಮಾರ್ಕ್ ನೋಲ್ಸ್
ಹಾಕಿ ವಿಶ್ವಕಪ್ನಲ್ಲಿ ಭಾರತ ಹಾಕಿ ತಂಡ ಅಗ್ರ 8ರಲ್ಲಿ ಸ್ಥಾನ ಪಡೆಯಲಿದೆ ಎಂದು ಕೋಚ್ ಟೆರ್ರಿ ವಾಲ್ಷ್ ...
ನವದೆಹಲಿ: ಹಾಕಿ ವಿಶ್ವಕಪ್ನಲ್ಲಿ ಭಾರತ ಹಾಕಿ ತಂಡ ಅಗ್ರ 8ರಲ್ಲಿ ಸ್ಥಾನ ಪಡೆಯಲಿದೆ ಎಂದು ಕೋಚ್ ಟೆರ್ರಿ ವಾಲ್ಷ್ ಹೇಳಿದ್ದಾರೆ. ಆದರೆ, ಅವರ ಯೋಚನೆಗಿಂತ ಹೆಚ್ಚಿನ ಸಾಮರ್ಥ್ಯವನ್ನು ತಂಡ ಹೊಂದಿದೆ ಎಂದು ಆಸ್ಟ್ರೇಲಿಯಾ ಹಾಕಿ ತಂಡದ ನಾಯಕ ಮಾರ್ಕ್ ನೋಲ್ಸ್ ತಿಳಿಸಿದ್ದಾರೆ.
ವಾಲ್ಷ್ ಹೇಳಿಕೆ 12 ತಂಡಗಳು ಭಾಗವಹಿಸುತ್ತಿರುವ ಪಂದ್ಯಾವಳಿಯಲ್ಲಿ, ಭಾರತ ತಂಡಕ್ಕೆ ಆರೋಗ್ಯ ಮತ್ತು ನೈತಿಕ ಚೈತನ್ಯ ನೀಡುವಂತಹದ್ದಾಗಿದೆ. ಅಲ್ಲದೆ ಇದು ತಂಡಕ್ಕೆ ಸಮಾಧಾನ ನೀಡುವುದಲ್ಲದೆ, ಆಟಗಾರರ ಮೇಲಿನ ಒತ್ತಡವನ್ನೂ ಶಮನ ಮಾಡಲಿದೆ.
'ಆಟಗಾರರ ಮೇಲೆ ಒತ್ತಡ ಕಡಿಮೆ ಮಾಡಲೆಂದು ವಾಲ್ಷ್ ಹಾಗೆ ಹೇಳಿರಬಹುದು. ಆದರೆ, ತಂಡ ಮಾತ್ರ ತನ್ನ ಸ್ಥಾನದ ಬಗ್ಗೆ ಯೋಚಿಸದೆ, ಹಾಕಿ ಬಗ್ಗೆ ಹೆಚ್ಚಿನ ಗಮನಹರಿಸಬೇಕಾದ ಅಗತ್ಯವಿದೆ. ಆಗ ಭಾರತ 8ಕ್ಕಿಂತ ಹೆಚ್ಚಿನ ಸ್ಥಾನವನ್ನು ಪಡೆಯಲಿದೆ' ಎಂದು ಪರ್ತ್ನಿಂದ ದೂರವಾಣಿ ಮೂಲಕ ಸುದ್ದಿ ಸಂಸ್ಥೆಯೊಂದಕ್ಕೆ ಮಾತನಾಡಿದ ನೋಲ್ಸ್ ಅಭಿಪ್ರಾಯಪಟ್ಟಿದ್ದಾರೆ.
ವಿ.ಆರ್ ರಘುನಾಥ್ ಮತ್ತು ರೂಪಿಂದರ್ ಪಾಲ್ ಸಿಂಗ್ ಅವರು ವಿಶ್ವದ ಶ್ರೇಷ್ಠ ಡ್ರ್ಯಾಗ್ ಫ್ಲಿಕ್ಕರ್ಗಳಲ್ಲಿ ಸೇರಿದ್ದಾರೆ. ಇವರು ಮಿಡ್ಫೀಲ್ಡ್ನಲ್ಲಿ ತಂಡಕ್ಕೆ ವಿಶ್ವದರ್ಜೆಯ ಶಕ್ತಿ ತುಂಬಲಿದ್ದಾರೆ ಮತ್ತು ಫಾರ್ವರ್ಡ್ ಲೈನ್ಗೂ ನೆರವಾಗಲಿದ್ದಾರೆ ಎಂದಿದ್ದಾರೆ.