ಮೊದಲ ಬಾರಿ ಫ್ರೆಂಚ್ ಓಪನ್ ಟೆನಿಸ್ ತಪ್ಪಿಸಿಕೊಂಡ ಪೇಸ್
ಮುಂಬೈ: ಹದಿನಾಲ್ಕು ಗ್ರ್ಯಾನ್ ಸ್ಲ್ಯಾಮ್ ಪ್ರಶಸ್ತಿ ಗೆದ್ದುಕೊಂಡಿರುವ ಮತ್ತು ಭಾರತದ ಖ್ಯಾತ ಟೆನಿಸ್ ತಾರೆ ಲಿಯಾಂಡರ್ ಪೇಸ್ ಅವರು ಇದೇ ಮೊದಲ ಬಾರಿಗೆ ಫ್ರೆಂಚ್ ಓಪನ್ನಿಂದ ದೂರ ಉಳಿದಿದ್ದಾರೆ.
ತಮ್ಮ ಪತ್ನಿ ರ್ಹೆಯಾ ಪಿಳ್ಳೈ ಜತೆ ಮುನಿಸಿಕೊಂಡಿರುವ ಪೇಸ್, ಪುತ್ರಿ ಐಯನಾ ಪೋಷಣೆಯನ್ನು ನನಗೆ ನೀಡಬೇಕು ಎಂದು ಮುಂಬೈನ ಬಾಂದ್ರಾ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲು ಏರಿರುವುದೇ ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ವಿವಾದದ ಹಿನ್ನೆಲೆಯಲ್ಲಿ ಕಳೆದ ಏಳು ವಾರಗಳಿಂದ ಪೇಸ್ ಟೆನಿಸ್ನಿಂದ ದೂರ ಉಳಿದಿದ್ದಾರಂತೆ.
ಆದರೆ, ಪೇಸ್ ಅವರು ಮತ್ತು ಅಭ್ಯಾಸ ನಡೆಸಲು ಅಮೆರಿಕಕ್ಕೆ ತೆರಳಿದ್ದಾರೆ ಎನ್ನಲಾಗಿದೆ. ಅಲ್ಲದೆ, ತಮ್ಮ ಫಿಟ್ನೆಸ್ಗೊಷ್ಕರ ಪೇಸ್, ಜೂನ್ನಲ್ಲಿ ಗ್ರಾಸ್ ಕೋರ್ಟ್ ಪಂದ್ಯಾವಳಿಗಳು ಆರಂಭವಾಗುವ ಮುನ್ನ ಫ್ಲೋರಿಡಾದಲ್ಲಿ ಮೂರು ವಾರ ಅಭ್ಯಾಸ ನಡೆಸಲಿದ್ದಾರೆ ಎಂದು ಅವರ ತಂದೆ ಡಾ. ವೇಸ್ ಪೇಸ್ ತಿಳಿಸಿದ್ದಾರೆ.