ರೋಮ್ ಡಬ್ಲ್ಯುಟಿಎ ಟೆನಿಸ್ ಟೂರ್ನಿ: ಸಾನಿಯಾ-ಕಾರಾ ಶುಭಾರಂಭ
ಭಾರತದ ಸಾನಿಯಾ ಮಿರ್ಜಾ ಮತ್ತು ಜಿಂಬಾಬ್ವೆಯ ಕಾರಾ ಬ್ಯ್ಲಾಕ್ ಅವರು ಇಟಲಿಯಲ್ಲಿ ನಡೆಯುತ್ತಿರುವ ...
ರೋಮ್ (ಇಟಲಿ): ಭಾರತದ ಸಾನಿಯಾ ಮಿರ್ಜಾ ಮತ್ತು ಜಿಂಬಾಬ್ವೆಯ ಕಾರಾ ಬ್ಯ್ಲಾಕ್ ಅವರು ಇಟಲಿಯಲ್ಲಿ ನಡೆಯುತ್ತಿರುವ ರೋಮ್ ಡಬ್ಲ್ಯುಟಿಎ ಟೆನಿಸ್ ಟೂರ್ನಿಯ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಭರ್ಜರಿ ಆರಂಭ ಪಡೆದಿದ್ದಾರೆ.
ಸಾನಿಯಾ ಮತ್ತು ಕಾರಾ ಮೊದಲ ಸುತ್ತಿನ ಡಬಲ್ಸ್ ಪಂದ್ಯದಲ್ಲಿ ಸ್ವಿಜರ್ಲ್ಯಾಂಡ್ನ ಮಾರ್ಟಿನಾ ಹಿಂಗಿಸ್ ಮತ್ತು ಜರ್ಮನಿಯ ಸಬಿನೆ ಲಿಸಿಕಿ ವಿರುದ್ಧ 6-4, 2-6, 10-8 ಸೆಟ್ಗಳಿಂದ ಜಯಗಳಿಸಿದರು.
ಐದನೇ ಶ್ರೇಯಾಂಕಿತ ಜೋಡಿಯಾಗಿರುವ ಸಾನಿಯಾ ಮತ್ತು ಕಾರಾ ಮೊದಲ ಸೆಟ್ ಅನ್ನು ರೋಚಕವಾಗಿಯೇ ಗೆದ್ದುಕೊಳ್ಳುವ ಮೂಲಕ ನಿರೀಕ್ಷೆಯಂತೆ ಉತ್ತಮ ಆರಂಭ ಪಡೆದರು. ಆದರೆ, ಎರಡನೇ ಸೆಟ್ನಲ್ಲಿ ಎದುರಾಳಿ ಜೋಡಿ ತಿರುಗಿಬಿದ್ದರೆ, ಭಾರತ-ಜಿಂಬಾಬ್ವೆ ಜೋಡಿಯ ಬಳಿ ಅದಕ್ಕೆ ಉತ್ತರವಿರಲಿಲ್ಲ.
ಇನ್ನು ನಿರ್ಣಾಯಕ ಮೂರನೇ ಸೆಟ್ನಲ್ಲಿ ಕೂಡ ಉಭಯ ಜೋಡಿಗಳ ಮಧ್ಯೆ ಉತ್ತಮ ಪೈಪೋಟಿ ಕಂಡುಬಂದಿತು. ಅಂತಿಮವಾಗಿ ಸಾನಿಯಾ ಮತ್ತು ಕಾರಾ ಅತ್ಯುತ್ತಮ ಹೊಂದಾಣಿಕೆ ಆಟ ಪ್ರದರ್ಶಿಸುವ ಮೂಲಕ ನಿಚ್ಚಳ ಗೆಲವು ದಾಖಲಿಸುವಲ್ಲಿ ಯಶಸ್ವಿಯಾದರು.