ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಎಂಸಿಎ ಎಂಟ್ರಿಗೆ ಶಾರುಖ್ ಸಿದ್ಧ

Rashmi Kasaragodu
Updated On : 16 May 2014, 12:39 pm

ಮುಂಬೈ: ಐಪಿಎಲ್ 7ನೇ ಆವೃತ್ತಿಯನ್ನು ಮುಂಬೈನ ವಾಂಖೆಡೆ ಕ್ರೀಡಾಂಗಣಕ್ಕೆ ವಾಪಸ್ ತರಲು ಪ್ರಯತ್ನಿಸುತ್ತಿರುವ ಮುಂಬೈ ಕ್ರಿಕೆಟ್ ಸಂಸ್ಥೆ, ಶಾರೂಖ್ ಖಾನ್ ಅವರನ್ನು ಮತ್ತೆ ಕ್ರೀಡಾಂಗಣಕ್ಕೆ ಪ್ರವೇಶಿಸಲು ಅನುಮತಿ ಸೇರಿದಂತೆ ಕೆಲವು ಷರತ್ತುಗಳಿಗೆ ಒಪ್ಪಿಗೆ ನೀಡಲು ನಿರ್ಧರಿಸಿದೆ.
ನಾವು ಐಪಿಎಲ್ ಮುಖ್ಯಸ್ಥ ರಂಜಿಬ್ ಬಿಸ್ವಾಲ್ ಅವರು ಹಾಕಿರುವ ಪತ್ರವನ್ನು ಪಡೆದಿದ್ದು, ಅದರಲ್ಲಿ ಒಟ್ಟು 14 ಷರತ್ತುಗಳು ಹಾಕಲಾಗಿದೆ. ಎಂಸಿಎ ಅಧ್ಯಕ್ಷ ಶರದ್ ಪವಾರ್ ಅವರು ಫೈನಲ್ ಪಂದ್ಯ ಮುಂಬೈನಲ್ಲೇ ನಡೆಯಬೇಕೆಂದು ತಿಳಿಸಿರುವ ಹಿನ್ನೆಲೆಯಲ್ಲಿ ಶಾರೂಖ್ ಅವರನ್ನು ಮತ್ತೆ ಎಂಸಿಎ ಹಾಗೂ ವಾಂಖೆಡೆ ಕ್ರೀಡಾಂಗಣದಲ್ಲಿ ಪ್ರವೇಶಿಸಲು ಅನುಮತಿ ನೀಡುವ ಹಾಗೂ ಇತರೆ ಷರತ್ತುಗಳಿಗೆ ಒಪ್ಪಿಗೆ ನೀಡಲಾಗಿದೆ ಎಂದು ಎಂಸಿಎ ಉಪಾಧ್ಯಕ್ಷ ರವಿ ಸಾವಂತ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement