ತೆರಿಗೆ ವಂಚನೆ ಪ್ರಕರಣದಲ್ಲಿ ಸ್ಕೊಲಾರಿ
ಲಿಸ್ಬನ್: ಬ್ರೆಜಿಲ್ನಲ್ಲಿ ಫುಟ್ಬಾಲ್ ವಿಶ್ವಕಪ್ ಆರಂಭವಾಗಲು ಕೆಲವೇ ವಾರಗಳು ಬಾಕಿ ಇರುವಾಗ ಬ್ರೆಜಿಲ್ ಫುಟ್ಬಾಲ್ ತಂಡದ ಮುಖ್ಯ ಕೋಚ್ ಲೂಯಿಜ್ ಫೆಲಿಪ್ ಸ್ಕೊಲಾರಿ ಅವರ ವಿರುದ್ಧ ಅಪರಾಧ ಪ್ರಕರಣ ದಾಖಲಾಗಿದೆ.
ಸ್ಕೊಲಾರಿ ಅವರ ವಿರುದ್ಧ ತೆರಿಗೆ ವಂಚನೆ ಆರೋಪ ಎದುರಾಗಿದೆಯಾದರೂ, ಈವರೆಗೆ ಅವರನ್ನು ಬಂಧಿಸಿಲ್ಲ.
2003ರಿಂದ 2008ರ ವರೆಗೆ ಪೋರ್ಚುಗಲ್ ತಂಡದ ಮುಖ್ಯ ಕೋಚ್ ಆಗಿದ್ದ ಸ್ಕೊಲಾರಿ, ತಾನು ಯಾವ ದೇಶದಲ್ಲಿ ಎಷ್ಟು ಸಂಪಾದನೆ ಮಾಡಿದ್ದೇನೆ ಎಂಬ ಮಾಹಿತಿಯನ್ನು ಈ ಹಿಂದೆಯೇ ಬಹಿರಂಗ ಪಡಿಸಿದ್ದೇನೆ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಖಚಿತವಾದ ಮಾಹಿತಿಯನ್ನು ನೀಡಿದ್ದೇನೆ. ಒಂದುವೇಳೆ ಏನೇ ತಪ್ಪಾಗಿದ್ದರೂ ನನ್ನ ಗಮನಕ್ಕೆ ಬಾರದೆ ಆಗಿದೆ. ಪ್ರಕರಣದ ತನಿಖೆ ಸತ್ಯಾಂಶಗಳ ಆಧಾರದ ಮೇಲೆ ನಡೆಯುವ ವಿಶ್ವಾಸವಿದೆ ಎಂದರು.