ನಡಾಲ್, ಸೆರೆನಾ ಮುನ್ನಡೆ
ರೋಮ್: ಹಾಲಿ ಚಾಂಪಿಯನ್ ಸ್ಪೇನಿನ ರಾಫೆಲ್ ನಡಾಲ್ ಹಾಗೂ ವಿಶ್ವದ ನಂಬರ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಮತ್ತು ಮಾರಿಯಾ ಶರಪೋವಾ ಇಟಲಿ ಓಪನ್ ಟೆನಿಸ್ ಟೂರ್ನಿಯಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಆದರೆ, 17 ಗ್ರ್ಯಾನ್ಸ್ಲಾಮ್ಗಳ ಒಡೆಯ ಸ್ವಿಜರ್ಲ್ಯಾಂಡ್ನ ರೋಜರ್ ಫೆಡರರ್ ಪುರುಷರ ಸಿಂಗಲ್ಸ್ನಲ್ಲಿ ಎರಡನೇ ಸುತ್ತಿನಲ್ಲೇ ಅಚ್ಚರಿ ಆಘಾತಕ್ಕೆ ಒಳಗಾಗಿದ್ದಾರೆ. 49ನೇ ಶ್ರೇಯಾಂಕಿತ ಫ್ರಾನ್ಸ್ನ ಜೆರೆಮಿ ಚಾರ್ಡಿ 1-6, 6-3, 7-6 (7-6) ಸೆಟ್ಗಳಿಂಗದ ಫೆಡರರ್ಗೆ ಸೋಲುಣಿಸಿದರು.
ಸ್ಪೇನಿನ ರಾಫೆಲ್ ನಡಾಲ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಪ್ರಿಕ್ವಾರ್ಟರ್ಫೈನಲ್ ತಲುಪಿದ್ದಾರೆ. ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಅವರು 7-6 (7-1), 6-7 (4-6), 6-2 ಸೆಟ್ಗಳಿಂದ ಗಿಲ್ಸ್ ಸಿಮೋನ್ ಅವರನ್ನು ಪರಾಭವಗೊಳಿಸಿದರು.
ಸೆರೆನಾ, ಶರಪೋವಾ 3ನೇ ಸುತ್ತಿಗೆ
ಅಮೆರಿಕದ ಸೆರೆನಾ ವಿಲಿಯಮ್ಸ್ ಮತ್ತು ಮಾರಿಯಾ ಶರಪೋವಾ ಅವರು ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಮೂರನೇ ಸುತ್ತು ತಲುಪಿದ ಸಾಧನೆ ಮಾಡಿದ್ದಾರೆ.
ಸೆರೆನಾ ಅವರು ಎರಡನೇ ಸುತ್ತಿನ ಪಂದ್ಯದಲ್ಲಿ ಆ್ಯಂಡ್ರಿಯಾ ಪೆಟ್ಕೊವಿಚ್ ವಿರುದ್ಧ 6-2, 6-2 ನೇರ ಸೆಟ್ಗಳಿಂದ ಗೆಲವು ದಾಖಲಿಸಿದರು.
ರಷ್ಯಾದ ಮಾರಿಯಾ ಶರಪೋವಾ ತಮ್ಮ ಎರಡನೇ ಸುತ್ತಿನ ಪಂದ್ಯದಲ್ಲಿ ಅರ್ಹತಾ ಸುತ್ತಿನಿಂದ ಪ್ರವೇಶ ಪಡೆದುಕೊಂಡಿದ್ದ ಮೋನಿಕಾ ಪ್ಯೂಗ್ ಅವರನ್ನು 6-3, 7-5 ನೇರ ಸೆಟ್ಗಳಿಂದ ಪರಾಭವಗೊಳಿಸಿದರು.
ಬೋಪಣ್ಣ-ಖುರೇಷಿ ನಿರ್ಗಮನ: ಭಾರತದ ರೋಹನ್ ಬೋಪಣ್ಣ ಮತ್ತು ಪಾಕಿಸ್ತಾನದ ಐಸಾಮುಲ್ ಹಕ್ ಖುರೇಷಿ ಎಟಿಸಿ ರೋಮ್ ಮಾಸ್ಟರ್ಸ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ನಲ್ಲಿ ಎರಡನೇ ಸುತ್ತಿನಲ್ಲೇ ಸೋಲನುಭವಿಸಿದ್ದಾರೆ.
ಶ್ರೇಯಾಂಕರಹಿತ ಜೋಡಿಯಾಗಿದ್ದ ಬೋಪಣ್ಣ-ಭೂಪತಿ 5-7, 1-6 ಸೆಟ್ಗಳಿಂದ ಅಗ್ರಶ್ರೇಯಾಂಕಿತ ಜೋಡಿಯಾದ ಅಮೆರಿಕದ ಬಾಬ್ ಮತ್ತು ಮೈಕ್ ಬ್ರಯಾನ್ ಸಹೋದರರ ಎದುರು ತಲೆಬಾಗಿಸಿದರು.