ಐಪಿಎಲ್ ಫಿಕ್ಸಿಂಗ್ ತನಿಖೆ ಮುದ್ಗಲ್ಗೇ ಉಸ್ತುವಾರಿ
ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ-20 ಕ್ರಿಕೆಟ್ನಲ್ಲಿನ ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಪ್ರಕರಣದ ಪ್ರಾಥಮಿಕ ತನಿಖೆಯಲ್ಲಿ ಸಮಿತಿಯ ನೇತೃತ್ವ ವಹಿಸಿದ್ದ ಹೈಕೋರ್ಟ್ನ ಮಾಜಿ ನ್ಯಾಯಮೂರ್ತಿ ಮುಕುಲ್ ಮುದ್ಗಲ್ ಅವರೇ, ಈಗ ತನಿಖಾ ಸಮಿತಿಯ ಉಸ್ತುವಾರಿಯನ್ನೂ ವಹಿಸಿಕೊಂಡಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಮುದ್ಗಲ್ ತಂಡದಲ್ಲಿದ್ದ ಎಲ್. ನಾಗೇಶ್ವರ ರಾವ್ ಮತ್ತು ನಿಲಯ ದತ್ತಾ ಅವರು ಸಮಿತಿಯ ಭಾಗವಾಗಿರಲಿದ್ದಾರೆ.
ಆಗಸ್ಟ್ ಅಂತ್ಯದೊಳಗೆ ತನಿಖೆಯನ್ನು ಪೂರ್ಣಗೊಳಿಸಿ ವರದಿ ಒಪ್ಪಿಸುವಂತೆ ಸಮಿತಿಗೆ ಸುಪ್ರೀಂ ಕೋರ್ಟ್ ಸೂಚಿಸಿದೆ.ಹಿರಿಯ ಐಪಿಎಲ್ ಅಧಿಕಾರಿ ಬಿಬಿ ಮಿಶ್ರಾ ಅವರು ಸಹ ಸಮಿತಿಗೆ ನೆರವು ನೀಡಲಿದ್ದಾರೆ. ಸೂಕ್ತ ದಾಖಲೆಗಳು, ಧ್ವನಿ ಸುರುಳಿಗಳನ್ನು ತನಿಖೆಗೆ ಸಮಿತಿ ಉಪಯೋಗಿಸಿಕೊಳ್ಳಬಹುದಾಗಿದೆ.
ಮುಂಬೈ, ಚೆನ್ನೈ ಹಾಗೂ ದೆಹಲಿಯಿಂದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರನ್ನು ತನಿಖಾ ತಂಡದ ನೆರವಿಗಾಗಿ ನೀಡಲಾಗುತ್ತದೆ. ಅಲ್ಲದೆ, ಮುದ್ಗಲ್ ಮತ್ತು ಮಿಶ್ರಾ ಅವರು ಆಯ್ಕೆ ಮಾಡಿಕೊಳ್ಳುವಂತಹ ಓರ್ವ ಮಾಜಿ ಕ್ರಿಕೆಟ್ ಆಟಗಾರನನ್ನೂ ನೀಡಲಾಗುತ್ತದೆ.
ತನಿಖಾ ಸಮಿತಿಯಲ್ಲಿ ಕಾರ್ಯನಿರ್ವಹಿಸುವವರಿಗೆ ಒಂದು ದಿನಕ್ಕೆ ರು. 1 ಲಕ್ಷ ಸಂಭಾವನೆ ನೀಡಲಾಗುತ್ತದೆ. ಅಲ್ಲದೆ, ತನಿಖಾ ಸಮಯದಲ್ಲಿ ಉಂಟಾಗುವ ಎಲ್ಲ ಖರ್ಚು ವೆಚ್ಚಗಳನ್ನು ಬಿಸಿಸಿಐ ಭರಿಸಲಿದೆ.