ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಕ್ರೀಡೆ ಶುದ್ಧವಾಗಿರಲಿ ಕಾರ್ಲ್ ಲೂಯಿಸ್

Rashmi Kasaragodu
Updated On : 17 May 2014, 12:52 pm

ಬೆಂಗಳೂರು: ಕ್ರೀಡೆ ಉದ್ದೀಪನಾ ಪ್ರಕರಣಗಳಿಂದ ದೂರವಿದ್ದು, ಹೆಚ್ಚು ಪರಿಶುದ್ಧವಾಗಿರಬೇಕೆಂಬ ಆಶಾಭಾವನೆಯನ್ನು ಅಮೆರಿಕದ ವಿಶ್ವವಿಖ್ಯಾತ ಅಥ್ಲೀಟ್ ಕಾರ್ಲ್ ಲೂಯಿಸ್ ಖ್ಯಾತಿಯ ಫ್ರೆಡ್‌ರಿಕ್ ಕಾರ್ಲ್‌ಟನ್ ಹೊಂದಿದ್ದಾರೆ.
ಬೆಂಗಳೂರಿನಲ್ಲಿ ಇದೇ ಭಾನುವಾರ ನಡೆಯಲಿರುವ ಟಿಸಿಎಸ್ ವಿಶ್ವ 10-ಕೆ ಮ್ಯಾರಥಾನ್ ಓಟದ್ ಬ್ರ್ಯಾಂಡ್ ರಾಯಭಾರಿಯಾಗಿರುವ ಕಾರ್ಲ್ ಲೂಯಿಸ್, ಶುಕ್ರವಾರ ನಗರಕ್ಕೆ ಆಗಮಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕ್ರೀಡೆಯಲ್ಲಿನ ಉದ್ದೀಪನ ಪ್ರಕರಣಗಳ ಬಗ್ಗೆ ಅಥ್ಲೀಟ್‌ಗಳು ಮೌನವಹಿಸಿರುವುದು ಸರಿಯಲ್ಲ. ಶುದ್ಧ ಕ್ರೀಡೆಯ ಅಗತ್ಯವಿರುವ ಕಾರಣ ಮುಕ್ತವಾಗಿ ಇಂತಹ ಪ್ರಕರಣಗಳ ಕುರಿತು ಅಥ್ಲೀಟ್‌ಗಳು ಬಹಿರಂಗವಾಗಿ ಮಾತನಾಡಬೇಕಾಗಿದೆ ಎಂದು ಹೇಳಿದರು.
ಬೆಂಗಳೂರು 10-ಕೆ ಮ್ಯಾರಥಾನ್‌ನಲ್ಲಿ ಈ ಬಾರಿ ಅತಿ ಹೆಚ್ಚು ಓಟಗಾರರು ಪಾಲ್ಗೊಳ್ಳುತ್ತಿರುವುದು ನಿಜಕ್ಕೂ ಅತ್ಯುತ್ತಮ ಬೆಳವಣಿಗೆಯಾಗಿದೆ ಎಂದೂ 9 ಚಿನ್ನ ಸೇರಿದಂತೆ ಒಟ್ಟು 10 ಒಲಿಂಪಿಕ್ಸ್ ಪದಕಗಳನ್ನು ಗೆದ್ದುಕೊಂಡಿರುವ ಕಾರ್ಲ್ ಲೂಯಿಸ್ ಪ್ರತಿಕ್ರಿಯಿಸಿದರು.
ಮೇ 18ರಂದು ಭಾನುವಾರ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಬೆಳಗ್ಗೆ ಆರಂಭವಾಗಲಿರುವ ಮ್ಯಾರಥಾನ್ ಓಟ ಅಲ್ಲಿಯೇ ಕೊನೆಗೊಳ್ಳಲಿದೆ. ಈ ಬಾರಿ ಬೆಂಗಳೂರು 10-ಕೆನಲ್ಲಿ ಅತಿ ಹೆಚ್ಚು ಓಟಗಾರರು ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದ್ದು, ಹಲವಾರು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement