ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಬೆಂಗಳೂರಲ್ಲೇ ಫೈನಲ್ ಸಮರ

Vishwanath S
Updated On : 19 May 2014, 12:25 pm

ಮುಂಬೈ: ಇಂಡಿಯನ್ ಪ್ರೀಮಿಯರ್‌ಲೀಗ್‌ನ ಫೈನಲ್ ಪಂದ್ಯವನ್ನು ಬೆಂಗಳೂರಿನಲ್ಲೇ ನಡೆಸಲು ತೀರ್ಮಾನಿಸಲಾಗಿದೆ.
ಎಲ್ಲ ಷರತ್ತುಗಳಿಗೆ ಮುಂಬೈ ಕ್ರಿಕೆಟ್ ಸಂಸ್ಥೆ (ಎಂಸಿಎ) ಒಪ್ಪದ ಹಿನ್ನೆಲೆಯಲ್ಲಿ ಜೂನ್ 1ರಂದು ನಡೆಯಲಿರುವ ಪಂದ್ಯವನ್ನು ಈ ಮುನ್ನ ತೀರ್ಮಾನ ಕೈಗೊಂಡಂತೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ನಡೆಸಲು ಅದು ತೀರ್ಮಾನಿಸಿದೆ.
'ಶನಿವಾರ ರಾತ್ರಿ ಸಭೆ ಸೇರಿದ್ದ ಐಪಿಎಲ್ ಆಡಳಿತ ಮಂಡಳಿ, ಬೆಂಗಳೂರಿನಲ್ಲೇ ಫೈನಲ್ ಪಂದ್ಯ ನಡೆಸಲು ಅವಿರೋಧವಾಗಿ ತೀರ್ಮಾನಿಸಿದೆ' ಎಂದು ಬಿಸಿಸಿಐ ಕಾರ್ಯದರ್ಶಿ ಸಂಜಯ್ ಪಟೇಲ್ ತಿಳಿಸಿದರು. ಏತನ್ಮಧ್ಯೆ, ಐಪಿಎಲ್‌ನ ಎಲ್ಲ ಬೇಡಿಕೆಗಳನ್ನು ನಾವು ಒಪ್ಪಿಕೊಂಡಿದ್ದೇವೆ.
ಈ ಕುರಿತು ಶರದ್ ಪವಾರ್‌ಅವರೂ ಒಪ್ಪಿಕೊಂಡಿದ್ದಾರೆ ಎಂದು ಎಂಸಿಎ ಕಾರ್ಯದರ್ಶಿ ನಿತಿನ್ ದಲಾಲ್ ತಿಳಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement