ಮಲೇಷ್ಯಾಕ್ಕೆ ಸೋತ ಭಾರತ
ನವದೆಹಲಿ: ಭರವಸೆಯ ಶೆಟ್ಲರ್ ಆರ್ಎಂವಿ ಗುರುಸಾಯ್ದತ್ ಮಾತ್ರ ಗೆಲ್ಲುವುದರೊಂದಿಗೆ, ಭಾರತ ಬ್ಯಾಡ್ಮಿಂಟನ್ ತಂಡ ಥಾಮಸ್ ಕಪ್ನಲ್ಲಿ ಬಲಿಷ್ಠ ಮಲೇಷ್ಯಾ ವಿರುದ್ಧ 1-4 ಅಂತರದಿಂದ ಪರಾಭವ ಹೊಂದಿತು. ಇದರೊಂದಿಗೆ ಆತಿಥೇಯ ಭಾರತ ಆರಂಭಿಕ ಆಘಾತ ಅನುಭವಿಸಿದಂತಾಗಿದೆ.
ಮೊದಲ ಸಿಂಗಲ್ಸ್ನಲ್ಲಿ ಶ್ರೀಕಾಂತ್ ವಿಶ್ವದ ನಂಬರ್ ಒನ್ ಆಟಗಾರ ಲೀ ಚಾಂಗ್ ವೀ ವಿರುದ್ಧ 19-21, 12-21 ಗೇಮ್ಗಳಿಂದ ಸೋಲನುಭವಿಸಿದರು. ಇನ್ನು ಮೊದಲ ಡಬಲ್ಸ್ನಲ್ಲಿ ಸುಮೀತ್ ರೆಡ್ಡಿ ಮತ್ತು ಮನು ಅತ್ರಿ ಜೋಡಿ, ಬೂನ್ ಹೀಂಗ್ ತಾನ್ ಮತ್ತು ಹೌ ಹೂನ್ ಜೋಡಿ ವಿರುದ್ಧ 14-21, 11-21 ಗೇಮ್ಗಳಿಂದ ಸೋಲನುಭವಿಸಿತು.
ಎರಡನೇ ಸಿಂಗಲ್ಸ್ ಪಂದ್ಯದಲ್ಲಿ ಪಿ. ಕಶ್ಯಪ್ ಅವರು, ಚಾಂಗ್ ವೀ ಫೆಂಗ್ ವಿರುದ್ಧ 13-21, 6-21 ಸೆಟ್ಗಳ ಅಂತರದಿಂದ ಪರಾಭವ ಹೊಂದಿತು.
ನಂತರ ಎರಡನೇ ಡಬಲ್ಸ್ನಲ್ಲಿ ಭಾರತದ ದೇವಾಲ್ಕರ್ ಮತ್ತು ಚೋಪ್ರಾ ಜೋಡಿ, ವಿ. ಶೆಮ್ ಗೋಹ ಮತ್ತು ವೀ ಕಿಯಾಂಗ್ ತಾನ್ ಜೋಡಿ ವಿರುದ್ಧ 17-21, 21-14, 14-21ಗೇಮ್ಗಳಿಂದ ಕೈಚೆಲ್ಲಿತು.
ಆದರೆ ಮೂರನೇ ಸಿಂಗಲ್ಸ್ ಪಂದ್ಯದಲ್ಲಿ ಮಾತ್ರ ವಿಶ್ವದ ನಂಬರ್ 30ನೇ ಆಟಗಾರ ಗುರುಸಾಯ್ದತ್ ವಿಶ್ವದ 66ನೇ ನಂಬರ್ ಆಟಗಾರ ಡಾರೆನ್ ಲೀ ವಿರುದ್ಧ 18-21, 21-13, 21-19 ಗೇಮ್ಗಳಿಂದ ಗೆದ್ದುಕೊಂಡು ಕೊಂಚ ಭಾರತದ ಮಾನ ಕಾಪಾಡಿದರು.