ರಾಜ್ಯದ ತಿಲಕ್ ಪ್ರಥಮ
ಬೆಂಗಳೂರು: ಉದ್ಯಾನ ನಗರಿಗೇ ಭಾನುವಾರ ಮ್ಯಾರಥಾನ್ ಓಟದ ಸಂಭ್ರಮ. ಇದಕ್ಕಿಂತ ಹೆಚ್ಚಾಗಿ ಭಾರತೀಯರ ವಿಭಾಗದಲ್ಲಿ ಕರ್ನಾಟಕ ಮೂಲದ ಅಥ್ಲೀಟ್ ಬಿಸಿ ತಿಲಕ್ ಅವರು ಮೊದಲ ಸ್ಥಾನ ಪಡೆದು ಮಿಂಚಿದ್ದು.
ಕೊಡಗು ಮೂಲದವರಾಗಿರುವ ತಿಲಕ್ ಅವರು ಈ ಮುನ್ನ ಹಲವಾರು ಮ್ಯಾರಥಾನ್‌ಗಳಲ್ಲಿ ಭಾಗವಹಿಸಿದ್ದಾರೆ.
ಈ ಮುನ್ನ 2011ರಲ್ಲಿ ಮುಂಬೈ ಮ್ಯಾರಥಾನ್‌ನ ಭಾರತೀಯ ಪುರುಷರ ವಿಭಾಗದಲ್ಲಿ ದಾಖಲೆ ಬರೆಯುವ ಮೂಲಕನೇ ತಿಲಕ್ ಅವರು ಹೆಸರು ಮಾಡಿದ್ದರು.
ಸೇನೆಯಲ್ಲಿ ಕಾರ್ಯ ನಿರ್ವಹುಸತ್ತಿರುವ ತಿಲಕ್ ಅವರು ಈಗ ಬೆಂಗಳೂರಿನ ಪುರುಷರ ವಿಭಾಗದಲ್ಲಿ ಮೊದಲ ಸ್ಥಾನ ಪಡೆಯುವ ಮೂಲಕ ರಾಜ್ಯದ ಕೀರ್ತಿ ಹಾರಿಸಿದ್ದಾರೆ.
ಫುಟ್ಬಾಲ್:ಬಿಎಫ್‌ಸಿ ಜಯಭೇರಿ
ಬೆಂಗಳೂರು: ಬೆಂಗಳೂರು ಫುಟ್ಬಾಲ್ ಕ್ಲಬ್ ತಂಡದ ಆಟಗಾರರು ರಾಜ್ಯ ಸೂಪರ್ ಡಿವಿಜನ್ ಲೀಗ್ ಫುಟ್ಬಾಲ್ ಪಂದ್ಯದಲ್ಲಿ ರೋಚಕ ಗೆಲವು ದಾಖಲಿಸಿದ್ದಾರೆ. ಬೆಂಗಳೂರು ಜಿಲ್ಲಾ ಫುಟ್ಬಾಲ್ ಸಂಸ್ಥೆ ಮೈದಾನದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಬೆಂಗಳೂರು ಕ್ಲಬ್ ತಂಡ 2-1 ಗೋಲುಗಳಿಂದ ಎಎಸ್‌ಸಿ ತಂಡವನ್ನು ಸೋಲಿಸಿತು. ಸಂತೋಷ್ 6ನೇ ನಿಮಿಷ ಮತ್ತು ವಿಶಾಲಕುಮಾರ್ 88ನೇ ನಿಮಿಷ ಗೋಲು ಗಳಿಸಿ ಬಿಎಫ್‌ಸಿಗೆ ಜಯ ತಂದುಕೊಟ್ಟರು. ಎಎಸ್‌ಸಿ ಪರ ರಾಮಚಂದ್ರನ್ 452ನೇ ನಿಮಿಷದಲ್ಲಿ ಗೋಲು ದಾಖಲಿಸಿದರು.