ಅರ್ಜುನ್ ಪ್ರಶಸ್ತಿಗೆ ಚಿತ್ರಾ ಹೆಸರು
ನವದೆಹಲಿ: ವಿಶ್ವ ಮಹಿಳಾ ಸ್ನೂಕರ್ ಚಾಂಪಿಯನ್ ಕರ್ನಾಟಕದ ಚಿತ್ರಾ ಮಗಿಮೈರಾಜ್ ಅವರನ್ನು ಭಾರತೀಯ ಬಿಲಿಯರ್ಡ್ಸ್ ಮತ್ತು ಸ್ನೂಕರ್ ಸಂಸ್ಥೆ ನಾಮನಿರ್ದೇಶನ ಮಾಡಿದೆ.
ಚಿತ್ರಾ ಅವರೊಂದಿಗೆ ವಿದ್ಯಾ ಪಿಳ್ಳೈ ಹಾಗೂ ಉದಯೋನ್ಮುಖ ಸ್ನೂಕರ್ ತಾರೆ ಬೃಜೇಶ್ ದಮನಿ ಅವರ ಹೆಸರನ್ನೂ ನಾಮನಿರ್ದೇಶನ ಮಾಡಿದೆ. ಬೆಂಗಳೂರು ಮೂಲದ 41 ವರ್ಷದ ಚಿತ್ರಾ ಅವರು ಇದುವರೆಗೂ ವಿಶ್ವ ಮಹಿಳಾ ಬಿಲಿಯರ್ಡ್ಸ್ ಮತ್ತು ಸ್ನೂಕರ್ ಸಂಸ್ಥೆಯ ಪಂದ್ಯಾವಳಿಗಳಲ್ಲಿ ಮೂರು ಚಿನ್ನ, ಮೂರು ಬೆಳ್ಳಿ ಹಾಗೂ ಮೂರು ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದಾರೆ.