ಐ- ಲೀಗ್ನಿಂದ 4 ತಂಡಗಳ ವಜಾ
ನವದೆಹಲಿ: ಭಾರತೀಯ ಫುಟ್ಬಾಲ್ನಲ್ಲಿ ನಡೆದ ಅಚ್ಚರಿಯ ಬೆಳವಣಿಗೆಯಲ್ಲಿ, ಎರಡು ಬಾರಿ ಚಾಂಪಿಯನ್ ಚರ್ಚಿಲ್ ಬ್ರದರ್ಸ್ ಸೇರಿದಂತೆ ಒಟ್ಟು ಮೂರು ತಂಡಗಳನ್ನು ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ (ಎಐಎಫ್ಎಫ್) ವಜಾಗೊಳಿಸಿದೆ. ಎಐಎಫ್ಎಫ್ನ ಕ್ಲಬ್ ಪರವಾನಗಿಯ ಮಾನದಂಡಗಳನ್ನೂ ಪೂರೈಸದ ಹಿನ್ನೆಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ.
ಬುಧವಾರ ಸಭೆ ಸೇರಿದ್ದ ಎಐಎಫ್ಎಫ್ ಕ್ಲಬ್ ಪರವಾನಗಿ ಸಮಿತಿ, ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಂಡಿದೆ.
ಕೋಲ್ಕತಾ ಮೂಲದ ಕ್ಲಬ್ಗಳಾದ ಯುನೈಟೆಡ್ ಎಸ್ಸಿ ಮತ್ತು ಮೊಹ್ಮಡಿಯನ್ ಸ್ಪೋರ್ಟಿಂಗ್ ಹಾಗೂ ಶಿಲ್ಲಾಂಗ್ನ ರಂಗ್ದಾಜೀದ್ ವಜಾಗೊಳಿಸಲಾದ ಇತರ ಮೂರು ಕ್ಲಬ್ಗಳಾಗಿವೆ. ಮಾನದಂಡಗಳನ್ನು ಪೂರೈಸುವಲ್ಲಿ ವೈಫಲ್ಯ ಕಂಡಿರುವ ಈ ಎಲ್ಲ ಕ್ಲಬ್ಗಳು ಕನಿಷ್ಠ ಒಂದು ವರ್ಷ ಪಂದ್ಯಾವಳಿಯಿಂದ ಹೊರಗುಳಿಯಬೇಕಾಗುತ್ತದೆ.
ಅಲ್ಲದೆ, ಈ ಕ್ಲಬ್ಗಳು 2013-14ರ ಋತುವಿನಲ್ಲಿ 13 ತಂಡಗಳು ಭಾಗವಹಿಸಿದ್ದ ಐ-ಲೀಗ್ ಪಂದ್ಯಾವಳಿಯ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದುಕೊಂಡಿದೆ. ಮೊಹ್ಮಡಿಯನ್ ಸ್ಪೋರ್ಟಿಂಗ್ ಕೊನೆ ಸ್ಥಾನ ಪಡೆದರೆ, ಚರ್ಚಿಲ್ ಬ್ರದರ್ಸ್ ಮಾತ್ರ 11ನೇ ಸ್ಥಾನ ಪಡೆದುಕೊಂಡಿದೆ.