ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಜರ್ಮನಿ ವಿರುದ್ಧ ಗೆದ್ದ ಭಾರತ

Mainashree
Updated On : 21 May 2014, 9:30 am

ನವದೆಹಲಿ: ಬ್ಯಾಡ್ಮಿಂಟನ್‌ನ ವಿಶ್ವಕಪ್ ಎಂದೇ ಖ್ಯಾತಿ ಪಡೆದಿರುವ ಥಾಮಸ್ ಕಪ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತ, ಜರ್ಮನಿ ವಿರುದ್ಧ ಗೆಲವು ದಾಖಸಿ ಗೌರವ ಉಳಿಸಿಕೊಂಡಿದೆ.
ಬುಧವಾರ ನಡೆದ ಪಂದ್ಯದಲ್ಲಿ ಪಿ. ಕಶ್ಯಪ್ ನೇತೃತ್ವದ ಭಾರತ ತಂಡ 3-2 ಅಂಕಗಳಿಂದ ಜಯಿಸಿತು. ಆರಂಭಿಕ ಎರಡು ಪಂದ್ಯಗಳಲ್ಲಿ ಕ್ರಮವಾಗಿ ಮಲೇಷ್ಯಾ ಹಾಗೂ ಕೊರಿಯಾ ವಿರುದ್ಧ ಸೋಲನುಭವಿಸುವ ಮೂಲಕ ಪ್ರಶಸ್ತಿ ಪೈಪೋಟಿಯಿಂದ ಹೊರಗುಳಿದಿತ್ತು. ಆದರೆ 3ನೇ ಪಂದ್ಯ ಭಾರತಕ್ಕೆ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು.
ಭಾರತಕ್ಕೆ ಕೆ. ಶ್ರೀಕಾಂತ್ 56 ನಿಮಿಷಗಳ ಕಾಲ ನಡೆದ ಮೊದಲ ಸಿಂಗಲ್ಸ್ ಪಂದ್ಯದಲ್ಲಿ ತಮ್ಮ ಎದುರಾಳಿ ಮಾರ್ಕ್ ಜ್ವಿಬ್ಲರ್ ವಿರುದ್ಧ 21-18, 18-21, 21-18 ಗೇಮ್‌ಗಳಿಂದ ಗೆಲವು ದಾಖಲಿಸಿ ಉತ್ತಮ ಆರಂಭ ನೀಡಿದರು.
ನಂತರ ಡಬಲ್ಸ್‌ನಲ್ಲಿ ಮನು ಅತ್ರಿ ಮತ್ತು ಸುಮೀತ್ ರೆಡ್ಡಿ ಜೋಡಿ, ಮೈಕಲ್ ಫುಚ್ಸ್ ಹಾಗೂ ಜೊಹಾನ್ನೆಸ್ ಸ್ಕೂಟ್ಲರ್ ವಿರುದ್ಧ 15-21, 6-21 ಗೇಮ್‌ಗಳಿಂದ ಕೈಚೆಲ್ಲಿತು.
2ನೇ ಸಿಂಗಲ್ಸ್‌ನಲ್ಲಿ ನಾಯಕ ಪಿ. ಕಶ್ಯಪ್ ಕಣಕ್ಕಿಳಿದರೂ, ಡೈಟರ್ ಡೊಮ್ಕೊ ವಿರುದ್ಧ 23-21, 14-21, 21-14 ವಿರೋಚಿತ ಸೋಲನುಭವಿಸಿದರು.
ಮತ್ತೊಂದು ಡಬಲ್ಸ್ ವಿಭಾಗದ ಪಂದ್ಯದಲ್ಲಿ ಅಕ್ಷಯ್ ದೆವಾಲ್ಕರ್ ಹಾಗೂ ಪ್ರಣವ್ ಜೆರ್ರಿ ತಮ್ಮ ಎದುರಾಳಿ ಪೀಟರ್ ಕೆಸಬ್ರ್ ಹಾಗೂ ಜೋಸ್ಕ್ ಜುರ್ವೊನ್ ಜೋಡಿ ವಿರುದ್ಧ 21-9, 17-21, 21-19 ರೋಚಕ ಗೆಲವು ದಾಖಲಿಸಿದರು.
ಅಂತಿಮ ಮತ್ತು ನಿರ್ಣಾಯವಾಗಿ ನಡೆದ 3ನೇ ಸಿಂಗಲ್ಸ್‌ನಲ್ಲಿ ಕಣಕ್ಕಿಳಿದ ಆರ್‌ಎಮ್‌ವಿ ಗುರುಸಾಯ್‌ದತ್ ತಮ್ಮ ಎದುರಾಳಿ ಲೂಕಾಸ್ ಸ್ಮಿಡಿಟ್ ವಿರುದ್ಧ 14-21 21-19 21-19 ಗೇಮ್‌ಗಳಿಂದ ಗೆಲವು ದಾಖಲಿಸಿ ಭಾರತಕ್ಕೆ ಗೆಲವು ತಂದುಕೊಟ್ಟರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement