ಹಾಲೆಂಡ್ಗೆ ತೆರಳಿದಭಾರತ ಹಾಕಿ ತಂಡ
ನವದೆಹಲಿ: ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರಿಂದ ಸ್ಫೂರ್ತಿ ಪಡೆದು ಹಾಕಿ ವಿಶ್ವಕಪ್ಗೆ ತೆರಳುತ್ತಿರುವ ಸರ್ದಾರ್ ಸಿಂಗ್ ನಾಯಕತ್ವದಭಾರತ ತಂಡ, ಸ್ಥಿರ ಪ್ರದರ್ಶನ ನೀಡುವ ಭರವಸೆಯೊಂದಿಗೆ ಬುಧವಾರ ಹಾಲೆಂಡ್ಗೆ ತೆರಳಿತು.
ಮೇ 31ರಿಂದ ಜೂನ್ 15ರವರೆಗೆ ನಡೆಯಲಿರುವ ಪಂದ್ಯಾವಳಿಯಲ್ಲಿ ಭಾಗವಹಿಸಲಿರುವ ತಂಡ, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಮಂಗಳವಾರ ದಿಢೀರನೆ ಭೇಟಿ ನೀಡಿ ತಮ್ಮ ಉತ್ಯುತ್ತಮ ಅನುಭವವನ್ನು ಹಂಚಿಕೊಂಡಾಗ, ತಂಡದ ಸದಸ್ಯರು ಅಚ್ಚರಿ ವ್ಯಕ್ತಪಡಿಸಿದ್ದರು.