ಏಷ್ಯನ್ ಅಥ್ಲೆಟಿಕ್ಸ್: ಭಾರತಕ್ಕೆ ಬೆಳ್ಳಿ
ಬ್ಯಾಂಕಾಕ್: ಭಾರತದ ಓಟಗಾರ ಕಿಸನ್ ತಡ್ವಿ 2014ರ ಯೂಥ್ ಒಲಿಂಪಿಕ್ಸ್ ಏಷ್ಯನ್ ಅಥ್ಲೆಟಿಕ್ಸ್ ಕ್ವಾಲಿಫಿಕೇಷನ್ ಪಂದ್ಯಾವಳಿಯ ಅಂತಿಮ ದಿನ ಭಾರತಕ್ಕೆ ಬೆಳ್ಳಿ ಪದಕ ತಂದುಕೊಟ್ಟರು.
3000 ಮೀ. ಓಟವನ್ನು 8 ನಿಮಿಷ 27.87 ಸೆಕೆಂಡ್‌ಗಳಲ್ಲಿ ಕ್ರಮಿಸಿದ ಕಿಸನ್ ತಡ್ವಿ ಬೆಳ್ಳಿ ಪದಕವನ್ನು ಪಡೆದುಕೊಂಡರು. ಇನ್ನು ಬೆಹ್ರೈನ್‌ನ ಅಡ್ಬೊ ಅಬ್ದಿ ಇಬ್ರಾಹಿಂ (8:26.39) ಅಗ್ರ ಸ್ಥಾನ ಪಡೆಯುವ ಮೂಲಕ ಚಿನ್ನದ ಪದಕ ಬಾಚಿಕೊಂಡರು. ಇನ್ನು ಚೀನಾದ ಲಿ ಹ್ಯಾಂಗ್ಲಿಯಾಗ್ (8:33.46) ತೃತೀಯ ಸ್ಥಾನ ಪಡೆದು ಕಂಚಿನ ಪದಕ ಪಡೆದರು.
ಇನ್ನು ಕ್ರೀಡಾಕೂಟದ ಮೊದಲ ದಿನವಾದ ಬುಧವಾರ ಭಾರತದ ಅಥ್ಲೀಟ್‌ಗಳು ನಾಲ್ಕು ಪದಕಗಳನ್ನು ಬಾಚಿಕೊಂಡಿದ್ದರು.