ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಸನ್‌ಗೆ ಸೂಪರ್ ಗೆಲವು

Mainashree
Updated On : 23 May 2014, 12:27 pm

ರಾಂಚಿ: ಆರಂಭಿಕರಾದ ಡೇವಿಡ್ ವಾರ್ನರ್ (90) ಅಬ್ಬರದ ಹಾಗೂ ಶಿಖರ್ ಧವನ್ (ಅಜೇಯ 64) ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಸನ್‌ರೈಸರ್ಸ್ ತಂಡ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 6 ವಿಕೆಟ್‌ಗಳ ಅರ್ಹ ಗೆಲವು ದಾಖಲಿಸಿದೆ.
ಗುರುವಾರ ಇಲ್ಲಿನ ಜಾರ್ಖಂಡ್ ರಾಜ್ಯ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಸನ್‌ರೈಸರ್ಸ್ ತಂಡದ ನಾಯಕ ಡಾರೆನ್ ಸಾಮಿ ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿದರು. ನಂತರ ಚೆನ್ನೈ ಸೂಪರ್ ಕಿಂಗ್ಸ್ ತಂಡ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 185 ರನ್ ದಾಖಲಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಸನ್‌ರೈಸರ್ಸ್ ತಂಡ 19.4 ಓವರ್‌ಗಳಲ್ಲಿ 4 ವಿಕೆಟ್‌ಗೆ 189 ರನ್ ದಾಖಲಿಸಿ ಗೆಲವಿನ ನಗೆ ಬೀರಿತು.
ಸನ್‌ರೈಸರ್ಸ್ ತಂಡದ ಪರ ಡೇವಿಡ್ ವಾರ್ನರ್ (90 ರನ್, 45 ಎಸೆತ, 12 ಬೌಂಡರಿ, 3 ಸಿಕ್ಸರ್) ಹಾಗೂ ಶಿಖರ್ ಧವನ್ (ಅಜೇಯ 64 ರನ್, 49 ಎಸೆತ, 4 ಬೌಂಡರಿ, 2 ಸಿಕ್ಸರ್) ತಂಡಕ್ಕೆ 116 ರನ್‌ಗಳ ಭದ್ರ ಅಡಿಪಾಯ ಹಾಕಿಕೊಟ್ಟಿದ್ದು, ತಂಡದ ಗೆಲವಿನಲ್ಲಿ ಪ್ರಮುಖ ಪಾತ್ರವಹಿಸಿತು.
ಅಬ್ಬರಿಸಿದ ಸ್ಮಿತ್: ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮತ್ತೊಮ್ಮೆ ಉತ್ತಮ ಆರಂಭ ನೀಡಿದ್ದು, ಡ್ವೈನ್ ಸ್ಮಿತ್ (47 ರನ್, 28 ಎಸೆತ, 4 ಬೌಂಡರಿ, 4 ಸಿಕ್ಸರ್).
  ಮತ್ತೊಬ್ಬ ಆರಂಭಿಕ ಫಫ್ ಡುಪ್ಲೆಸಿಸ್ (19) ಆರಂಭದಲ್ಲೇ ಪೆವಿಲಿಯನ್‌ಗೆ ಮರಳಿದರೂ, ಸ್ಮಿತ್ ತಮ್ಮ ಅಬ್ಬರದ ಬ್ಯಾಟಿಂಗ್ ಮುಂದುವರಿಸಿದರು. ಆದರೆ ಅರ್ಧಶತಕದ ಗಡಿಯಲ್ಲಿರುವಾಗ ಸ್ಮಿತ್ ಎಡವಿ ವಿಕೆಟ್ ಒಪ್ಪಿಸಿದರು.
ನಂತರ ಬಂದ ರೈನಾ ಕೇವಲ 4 ರನ್‌ಗೆ ಔಟಾದರು. ಈ ವೇಳೆ ಜತೆಯಾದ ಡೇವಿಡ್ ಹಸ್ಸಿ (ಅಜೇಯ 50 ರನ್, 33 ಎಸೆತ, 5 ಬೌಂಡರಿ, 2 ಸಿಕ್ಸರ್) ಹಾಗೂ ಮಹೇಂದ್ರ ಸಿಂಗ್ ಧೋನಿ (ಅಜೇಯ 57 ರನ್, 41 ಎಸೆತ, 2 ಬೌಂಡರಿ, 4 ಸಿಕ್ಸರ್) 4ನೇ ವಿಕೆಟ್‌ಗೆ 108 ರನ್‌ಗಳ ಶತಕದ ಜತೆಯಾಟ ನೀಡುವ ಮೂಲಕ ತಂಡ 180ರ ರನ್‌ಗಳ ಗಡಿ ಮುಟ್ಟುವಂತೆ ನೋಡಿಕೊಂಡರು.
ಆರಂಭದಲ್ಲಿ ರಕ್ಷಣಾತ್ಮಕ ಆಟವಾಡಿದರೂ ಇನಿಂಗ್ಸ್‌ನ ಅಂತ್ಯದಲ್ಲಿ ಅಬ್ಬರಿಸುವ ಮೂಲಕ ತಂಡ ಗೌರವಾನ್ವಿತ ಮೊತ್ತ ತಲುಪುವಂತೆ ನೋಡಿಕೊಂಡರು. ಸನ್‌ರೈಸರ್ಸ್ ಪರ ಕರಣ್ ಶರ್ಮಾ 2 ವಿಕೆಟ್ ಪಡೆದು ಮಿಂಚಿದರು.
ವಾರ್ನರ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಸ್ಕೋರ್ ವಿವರ
ಸನ್‌ರೈಸರ್ಸ್ ಹೈದರಾಬಾದ್ 19.4 ಓವರ್‌ಗಳಲ್ಲಿ 4 ವಿಕೆಟ್‌ಗೆ 189
ವಾರ್ನರ್ ಬಿ ಹೇಸ್ಟಿಂಗ್ಸ್ 90, ಶಿಖರ್ ಧವನ್ ಅಜೇಯ 64, ನಮನ್ ಓಜಾ ಸಿ ನೇಗಿ ಬಿ ರೈನಾ 19, ಎರಾನ್ ಫಿಂಚ್ ರನೌಟ್ (ರೈನಾ) 7, ಡಾರೆನ್ ಸಾಮಿ ಸಿ ಡುಪ್ಲೆಸಿಸ್ ಬಿ ಜಡೇಜಾ 0, ವೇಣುಗೋಪಾಲ್ ಅಜೇಯ 4 ಇತರೆ (ಲೆಗ್ ಬೈ 1, ವೈಡ್ 3, ನೊಬಾಲ್ 1) ಒಟ್ಟು 5    ವಿಕೆಟ್ ಪತನ: 1-116, 2-168, 3-176, 4-184
ಬೌಲಿಂಗ್ ವಿವರ: ಮೋಹಿತ್ 3-0-33-0, ಆರ್ ಅಶ್ವಿನ್ 4-0-29-0, ಹೇಸ್ಟಿಂಗ್ಸ್ 3-0-29-1, ಜಡೇಜಾ 3.4-0-42-1, ನೇಗಿ 4-0-38-0, ರೈನಾ 2-0-17-1

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement