ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಉಮರ್ ಅಕ್ಮಲ್ ಸಂಪರ್ಕಿಸಿದ್ದ ಬುಕ್ಕಿಗಳು

Mainashree
Updated On : 23 May 2014, 10:59 am

ಕರಾಚಿ: ಫಿಕ್ಸಿಂಗ್ ಎಂಬ ಭೂತ ಸದಾ ಕ್ರಿಕೆಟ್‌ನಲ್ಲಿ ನರ್ತನ ಮಾಡುತ್ತಲೇ ಇರುತ್ತದೆ ಎಂಬುದು ಪಾಕಿಸ್ತಾನ ಕ್ರಿಕೆಟ್‌ನಿಂದ ಬಹಿರಂಗವಾಗಿದೆ.
ಕಾರಣ, 2012ರಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಪಾಕ್ ಕ್ರಿಕೆಟಿಗ ಉಮರ್ ಅಕ್ಮಲ್ ಅವರನ್ನು ಬುಕ್ಕಿಗಳು ಸಂಪರ್ಕಿಸಿದ್ದರು ಎಂದು ವರದಿಯಾಗಿದೆ.
ಆಗ ಉಮರ್ ಅಕ್ಮಲ್ ಅವರಿಗೆ ಭಾರತದಿಂದ ಹಲವಾರು ನಂಬರ್‌ಗಳಿಂದ ಕರೆ ಮಾಡಲಾಗಿತ್ತಂತೆ. ಅಲ್ಲದೆ, ಮೂರು ಬಾರಿ ಅವರನ್ನು ಫಿಕ್ಸಿಂಗ್‌ಗೆ ಒಪ್ಪಿಕೊಳ್ಳಲು ಒತ್ತಾಯಿಸಲಾಯಿತಂತೆ.
'ಭಾರತದಿಂದ ಆಪರಿಚಿತ ಬುಕ್ಕಿಗಳು ಕರೆ ಮಾಡಿದ ಹಿನ್ನೆಲೆಯಲ್ಲಿ ಬೇಸತ್ತ ಉಮರ್, ತಕ್ಷಣವೇ ಪಾಕಿಸ್ತಾನ ಕ್ರಿಕೆಟ್ ತಂಡದ ಭದ್ರತಾ ವ್ಯವಸ್ಥಾಪಕರಿಗೆ, ತಮಗೆ ದೂರವಾಣಿ ಕರೆ ಕುರಿತು ಮಾಹಿತಿ ನೀಡಿದರಂತೆ' ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement