ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಮುನ್ನಡೆ ತಂದ ಸೈನಾ, ಸಿಂಧು

ಮಗನಸೆಳೆಯುವ ಪ್ರದರ್ಶನ ನೀಡಿದ ಸೈನಾ ನೆಹ್ವಾಲ್ ಮತ್ತು ಪಿ.ವಿ ಸಿಂಧು...

Mainashree
Updated On : 24 May 2014, 4:41 am

ನವದೆಹಲಿ: ಗಮನಸೆಳೆಯುವ ಪ್ರದರ್ಶನ ನೀಡಿದ ಸೈನಾ ನೆಹ್ವಾಲ್ ಮತ್ತು ಪಿ.ವಿ ಸಿಂಧು ಅವರು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ಉಬೇರ್ ಕಪ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಸೆಮಿಫೈನಲ್ ಪಂದ್ಯದಲ್ಲಿ ಜಪಾನ್ ವಿರುದ್ಧ ಭಾರತಕ್ಕೆ 2-0 ಅಂತರದ ಮುನ್ನಡೆ ತಂದುಕೊಟ್ಟಿದ್ದಾರೆ.
ಇದೇ ಮೊದಲ ಬಾರಿಗೆ ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದ ಭಾರತ ತಂಡದ ಸೈನಾ ಅವರು, ಮೊದಲ ಸಿಂಗಲ್ಸ್‌ನಲ್ಲಿ ವಿಶ್ವದ ನಂಬರ್ 13ನೇ ಆಟಗಾರ್ತಿ ಜಪಾನ್‌ನ ಮಿನಾತ್ಸು ಮಿಟಾನಿ ಅವರನ್ನು 21-12, 21-13 ಗೇಮ್‌ಗಳಿಂದ ಪರಾಭವಗೊಳಿಸಿದರು.
ನಂತರ ನಡೆದ ಎರಡನೇ ಸಿಂಗಲ್ಸ್ ಪಂದ್ಯದಲ್ಲಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದ ಪಿ.ವಿ ಸಿಂಧು ಅವರು, ವಿಶ್ವದ ನಂಬರ್ 13ನೇ ಆಟಗಾರ್ತಿ ಸಾಯಾಕಾ ಟಾಕಾಹಶಿ ಅವರನ್ನು 19-21, 21-18, 26-24 ಗೇಮ್‌ಗಳಿಂದ ಮಣಿಸಿದರು.3 ಸಿಂಗಲ್ಸ್ ಮತ್ತು ಎರಡು ಡಬಲ್ಸ್ ಪಂದ್ಯಗಳನ್ನೊಳಗೊಂಡ ಪಂದ್ಯದಲ್ಲಿ, ಉಳಿದ ಪಂದ್ಯಗಳು ಇನ್ನಷ್ಟೇ ನಡೆಯಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement